"ಅವಳಿಗೊಂದಷ್ಟು ಸಾಲುಗಳು"
*********************
ಅವಳು ಹಿಂತಿರುಗದೆ ಸಪ್ಪೆ ಮೋರೆ
ಹಾಕಿ ನಡೆದು ಹೋಗುವಾಗ ಅವಳ
ಹಿಂದೆ ಹೋಗಿ ಕರೆದುಕೊಂಡು ಬರುವ
ಮನಸಿದ್ದರು ಕರೆದುಕೊಂಡು ಬರಲಿಲ್ಲ!!
ಅವಳು ನಾನೆಂದಿಗೂ ಮುಂದಿಟ್ಟ ಹೆಜ್ಜೆ
ಹಿಂದಿಡುವುದಿಲ್ಲವೆಂದು ಬೇಸರದಲ್ಲಿ
ನನ್ನನ್ನು ಬೇರ್ಪಡಿಸಿ ದೂರದ ಊರಿಗೆ
ತೆರಳುವಾಗ ಸರಿ ಎನ್ನಲು ಮನಸಾಗಲಿಲ್ಲ!!
ಅವಳು ನಿನ್ನಿಂದ ನನಗಂತೂ ಏನೂ ಕೂಡ
ದಕ್ಕದೆಂದು ಅಸಹಾಯಕಳಾಗಿಯೇ ನನ್ನನ್ನು
ತೊರೆದು ದಿಕ್ಕು ತೋಚದಂತೆ ತೆರಳುವಾಗ
ಅವಳನ್ನು ಹಿಡಿದು ನಿಲ್ಲಿಸಲು ಧೈರ್ಯವಿರಲಿಲ್ಲ!!-
ಯಾಕೆಂದರೆ ನಾನು ಮ... read more
"ಅವಳಿಗೊಂದಷ್ಟು ಸಾಲುಗಳು"
*********************
ಅವಳು ಅಂತರವ ಕಾಯ್ದುಕೊಂಡಾಗ
ಮನದ ಭಾವನೆಗಳು ಹೆಚ್ಚು ತಳಮಳವ
ವ್ಯಕ್ತಿಪಡಿಸಿ ಅವಳ ಸನಿಹವ ಬಯಸುವುದು!!
ಅವಳು ಮುನಿಸಿಕೊಂಡು ಮೌನವ ಅಪ್ಪಿದಾಗ
ಮನದ ಮಾತುಗಳು ಅವಳನ್ನು ಮತ್ತೆ ಮತ್ತೆ
ಮಾತನಾಡಿಸಲು ಪ್ರಯತ್ನಿಸಿ ಸೋತು ಬಿಡುವುದು!!
ಅವಳು ಎಲ್ಲವನ್ನೂ ಎಲ್ಲರನ್ನು ಮರೆತು ಏಕಾಂತವ
ಬಯಸಿದಾಗ ಮನದೊಳಗಿನ ಹಲವು ಆಸೆಗಳು
ಅವಳೊಂದಿಗೆ ಏಕಾಂತವ ಸವಿಯಲು ಇಷ್ಟಪಡುವುದು!!-
"ಅವಳಿಗೊಂದಷ್ಟು ಸಾಲುಗಳು"
*********************
ಅವಳಂತರಾಳದ ಭಾವನೆಗಳು
ನನ್ನ ಮನಸಿಗೆ ನಾಟುವಾಗ ಅದೆಲ್ಲ
ದಿನ ನಿತ್ಯ ಆಗುವ ಅನುಭವವೆನಿಸಿತು!!
ಅವಳೊಳಡಗಿರುವ ಭಾವೊದ್ವೇಗಗಳು
ಒಮ್ಮೆಲೆ ನನ್ನ ಕಣ್ಣ ಮುಂದೆ ನರ್ತಿಸುವಾಗ
ರೌದ್ರ ಭಾವವು ನಲಿಯುವಂತೆ ಕಾಣಿಸಿತು!!
ಅವಳೊಳಗಿನ ಮನಸಿನ ಮಾತುಗಳು
ನನ್ನ ಕಿವಿಗೆ ಬಂದಪ್ಪಳಿಸುವಾಗ ಕಡಲ
ಅಲೆಗಳು ಅಪ್ಪಳಿಸುವಂತೆ ಭಾಸವಾಯಿತು!!-
"ಅವಳಿಗೊಂದಷ್ಟು ಸಾಲುಗಳು"
*********************
ಅವಳಾಡಿದ ಮಾತುಗಳೆಲ್ಲವೂ
ಸಿಹಿ ಮುತ್ತುಗಳಂತೆ ಹೊಳೆಯುವ
ರತ್ನಗಳಂತೆ ಮತ್ತು ನಡುರಾತ್ರಿಯಲಿ
ದಿನವೂ ಕಾಡುವ ಕನಸುಗಳಂತೆ!!
ಅವಳಾಡುವ ಮಾತುಗಳೆಲ್ಲವೂ
ಮನದ ನೋವುಗಳ ತಣಿಸಲಿರುವ
ಮದ್ದಂತೆ ಮತ್ತು ಬೇಸರಿಕೆಯ ಮರೆಸುವ
ಸ್ಫೂರ್ತಿಯ ಸಾವಿರಾರು ಮಾತುಗಳಂತೆ!!
ಅವಳಾಡುತ್ತಲಿರುವ ಹತ್ತು ಹಲವು ಪ್ರೀತಿಯ
ಮಾತುಗಳು ದಿನವಿಡೀ ಹೊಟ್ಟೆ ತುಂಬಿಸುವ
ಊಟದಂತೆ ಮತ್ತು ಬಹುದಿನಗಳ ಕನಸನ್ನು
ನನಸು ಮಾಡುವ ಇಷ್ಟಗಳ ಗೊಂಚಲಂತೆ!!-
"ಅವಳಿಗೊಂದಷ್ಟು ಸಾಲುಗಳು"
*********************
ಆಕೆಯು ಮುನಿಸಿಕೊಂಡರೆ ಮನವು
ಮಿಡಿದು ಅವಳೊಳಗೆ ಲೀನವಾಗಲು
ಹಂಬಲಿಸಿ ಅವಳಿಗಾಗಿ ಮರುಗುವುದು!!
ಆಕೆಯು ಬೇಸರಿಸಿಕೊಂಡರೆ ಮನವು
ಬೇಗನೆ ಅವಳ ಬೇಸರಕೆ ಕಾರಣವ ತಿಳಿದು
ಅವಳನ್ನು ಸಮಾಧಾನಿಸಿ ಬಿಡು ಎನ್ನುವುದು!!
ಆಕೆಯು ಕೋಪಗೊಂಡರೆ ಮನವು ಅವಳ
ಮನಸನ್ನು ಮೊದಲು ಸಮಾಧಾನಿಸಿ ನಂತರ
ಅವಳ ಕೋಪವ ತಣಿಸು ಎಂದು ಬಿಡುವುದು!!-
"ಅವಳಿಗೊಂದಷ್ಟು ಸಾಲುಗಳು"
*********************
ಅವಳೊಂದಿಗೆ ನಡೆಸಿದ ಸಂಭಾಷಣೆ
ಮಾಡಿತು ಮನದೊಳಗೆ ಹಲವಾರು
ವಿಷಯಗಳನ್ನು ಹೊತ್ತ ನಿವೇದನೆ!!
ಅವಳೊಂದಿಗೆ ಮಾತನಾಡಿದ ಕೆಲವು
ವಿಷಯಗಳು ನನ್ನೊಳಗೆ ಮೂಡಿಸಿತು
ನವ ನವೀನವಾದ ವಿಭಿನ್ನ ಸಂಚಲನ!!
ಅವಳೊಂದಿಗೆ ಹರಟಿದ ಸಾವಿರಾರು
ಆಲೋಚನೆಗಳೆಲ್ಲವೂ ಮನಸಿನೊಳಗೆ
ಬೀರಿದೆ ಎಂದಿಗೂ ಬತ್ತದ ಮುಗುಳುನಗೆ!!-
"ಅವಳಿಗೊಂದಷ್ಟು ಸಾಲುಗಳು"
*********************
ಆಕೆಯ ಮೊಗವರಳಿ ನಗುವು
ಕಿರು ನಗೆಯನ್ನು ಬೀರಿ ನನ್ನಯ
ಮನದ ನೋವುಗಳ ತಣಿಸಿವೆ!!
ಆಕೆಯ ಮೊಗವು ಸ್ವಚ್ಚಂಧವಾದ
ಭಾವನೆಗಳ ಪಾಠವ ನನ್ನಯ ಮನದ
ಭಾವನೆಗಳಿಗೆ ದಿನವೂ ನೀಡುತ್ತಿವೆ!!
ಆಕೆಯ ಮೊಗದೊಳಗಿನ ಅಸಂಖ್ಯಾತ
ಸಂತಸದ ಸರಕುಗಳು ನನ್ನಯ ಬದುಕಿನ
ಬಂಡಿಯ ಜೊತೆಗೆ ಸಾಗಲು ಹಂಬಲಿಸಿವೆ!!-
"ಅವಳಿಗೊಂದಷ್ಟು ಸಾಲುಗಳು"
********************
ಅವಳ ಬದುಕಿನ ಆಲೋಚನೆಗಳನ್ನು
ಅವಳ ಚಿಂತೆಗಳು ತಿಂದು ಹಾಕಿದರೆ
ಅವಳ ಬದುಕಿನ ಹಲವು ಕನಸುಗಳನ್ನು
ಅವಳ ಬಡತನವು ತಿಂದು ಬಿಡುತ್ತಿದೆ!!
ಅವಳ ಬದುಕಿನ ನಿಷ್ಕಲ್ಮಶ ಬಂದವನ್ನು
ಅವಳ ಭಾವನೆಗಳು ತಿಂದು ಹಾಕಿದರೆ
ಅವಳ ಬದುಕಿನ ಪ್ರಣಯದ ಕ್ಷಣಗಳನ್ನು
ಅವಳ ಸ್ವಾಭಿಮಾನವು ತಿಂದು ಬಿಡುತ್ತಿದೆ!!
ಅವಳ ಸಾವಿರಾರು ಮನದ ಮಾತುಗಳನ್ನು
ಅವಳ ಮೌನಗಳೆಲ್ಲವೂ ತಿಂದು ಹಾಕಿದರೆ
ಅವಳ ಸಂತಸ ತುಂಬಿದ ಸುಂದರ ದಿನಗಳನ್ನು
ಅವಳ ಹಳೆಯ ನೋವು ಕೊಂದು ಬಿಡುತ್ತಿದೆ!!-
"ಅವಳಿಗೊಂದಷ್ಟು ಸಾಲುಗಳು"
*********************
ಶುಭ್ರ ಕನ್ನಡಿಯಂತಿದ್ದ ಅವಳ ಮನಸು
ಈಗೀಗ ಒಡೆದ ಕನ್ನಡಿಯಂತಾಗಿ ನೋವು
ಮತ್ತು ನಲಿವುಗಳನ್ನು ಸಹ ಸವಿಯಲಾಗದೆ
ಮನಸಿನೊಳಗಡೆಯೇ ಚಡಪಡಿಸುತ್ತಿರುವಳು!!
ಶುಭ್ರ ಕನ್ನಡಿಯು ಅವಳ ಮನದ ಮಾತುಗಳನ್ನು
ಕ್ಷಣಾರ್ಧದಲ್ಲಿ ಹೇಳುವಂತೆ ಮಾಡುತ್ತಿದ್ದಳು ಆದರೆ
ಈಗ ಕನ್ನಡಿಯೂ ಸಹ ಅವಳ ಮನದ ಮಾತನ್ನು
ಹೇಳದಂತೆ ಕನ್ನಡಿಯ ಬಾಯಿಯ ಮುಚ್ಚಿಸಿರುವಳು!!
ಶುಭ್ರ ಕನ್ನಡಿಯೊಳಗೆ ಅವಳ ಮೊಗವು ಅಂದ
ಚಂದದ ಕನಸುಗಳನ್ನು ಕಟ್ಟಿಕೊಳ್ಳುವಂತೆ ನಿತ್ಯವೂ
ಮಾಡುತ್ತಿದ್ದಳು ಆದರೀಗ ಅವಳ ಮೊಗವು ಕನ್ನಡಿಯ
ನೋಡದೆ ಮನಸು ಮತ್ತು ಭಾವನೆಗಳನ್ನು ಬೇಸರಿಸಿರುವಳು!!-
"ಅವಳಿಗೊಂದಷ್ಟು ಸಾಲುಗಳು"
*********************
ಅವಳ ಅಂದ ಚಂದವು ಮೊಗಕಷ್ಟೇ
ಸೀಮಿತವಾಗಿಲ್ಲ ಮತ್ತು ತೋರ್ಪಡಿಕೆಗಷ್ಟೆ
ಅವಳು ಚಂದದ ಮಾತುಗಳನ್ನಾಡುವುದಿಲ್ಲ!!
ಅವಳ ದುಃಖ ದುಮ್ಮಾನಗಳು ಮನದೊಳಗಿನ
ಭಾವನೆಗಳಿಗಷ್ಟೇ ಪರಿಚಯವಾದುದಲ್ಲ ಮತ್ತು
ದುಃಖ ದುಮ್ಮಾನಗಳನ್ನು ಬಚ್ಚಿಟ್ಟುಕೊಳ್ಳಲಲ್ಲ!!
ಅವಳ ಪ್ರೀತಿ ಪ್ರೇಮದ ಭಾಷೆಗಳು ಮಾತಿಗಷ್ಟೇ
ಬಳಕೆಯಾಗುವುದಿಲ್ಲ ಮತ್ತು ಪ್ರತಿ ಸಲವೂ ಸಹ
ಪ್ರೀತಿ ಪ್ರೇಮವು ಮನಸಿಗೆ ಘಾಸಿಗೊಳಿಸುವುದಿಲ್ಲ!!
ಅವಳ ನೋವು ನಲಿವುಗಳು ಮೊಗದ ಮೇಲಷ್ಟೇ
ಮೂಡುವ ಭಾವಗಳಲ್ಲ ಮತ್ತು ನೋವು ನಲಿವುಗಳ
ಅನುಭವಿಸಿ ಸುಮ್ಮನೆ ವ್ಯಥೆಪಡುತ ಕೂರುವುದಕ್ಕಲ್ಲ!!-