ಹೊಸತು ಬಂತು
ನಮ್ಮದಲ್ಲದ ಹೊಸ ವರುಷ
ನಿಮ್ಮದಾಗುತೆ ಕೊನೆವರೆಗೂ
ಬೇಡ ಬೇಡವೆಂದರೂ
ಕುಣಿಯುತ ಬಂತು ನಿಮಿಷ
ಕಹಿಯ ಮರೆತು ಸಿಹಿಯ ಬೀರಿ
ಈ ನವ ವರುಷ ಸ್ವಾಗತಿಸೋಣ.
-
ಬೇಲಿ
ಒಂದು ಸುಂದರ ಕಾಂಡ
ಈ ಬದುಕಲಿ ಪಾತ್ರಗಳು ಅನೇಕ
ಅವರವರಿಗೆ ತಕ್ಕಂತೆ ಭಾವಾಭಿನಯ !
ದೊಡ್ಡವರ ದೊಡ್ಡಸ್ತಿಕೆಯ ಮೇಲೆ ಕೂತು,
ಸಣ್ಣವರ ಸಣ್ಣತನವೇ ಬಾಲೀಶ !
ಅಲ್ಲೊಂದು ಪ್ರೀತಿ ಪ್ರೇಮ ಮೊಹಬ್ಬತ್ !
ಬೇಲಿಗೆ ಬೀಗ ಹಾಕಿ ಒಳಬರಲಾರದೆ,
ಮರುಗುತ್ತಿದೆ ಮರೆಯಾಗುತ್ತಿದೆ !!-
ಜೊತೆಯಾಗು
ಸಾಮಿಪ್ಯವೇ ಸಮಾಗಮಾ.
ಹಾಡೋಣವಾ ಸರಿಗಮಾ !
ಪ್ರೀತಿ ಪ್ರೇಮದ
ಪದಪದ್ಯಗಳೊಳಗೆ,
ಒಂದೊಳ್ಳೆಯ ಕವನಕೆ
ಮುನ್ನುಡಿಯಾಗಿ.-
ಮೋಹ
ಹೆಣ್ಣೆಂಬ ಮೋಹದಿ
ಮುಲುಗಿದ ಮನ್ಮಥ!
ಕಣ್ಗಳೆರಡು ಕುರುಡಾಗಿ
ಲೋಕವೆ ನಶ್ವರ!!
-
ಒಡಕು
ಒಡಕಾದ ಮಡಿಕೆಗೆ
ತಡಕಾಡಿದರೇನೂ ಬಂತು.
ಜತನದಿಂದ ಮಡಗಬೇಕು!
ಜೀವವಿರುವವರೆಗು.!!
-
ಸಂತತಿ
ಸ್ವಚ್ಛ ಮನಸಿನ ಕುದುರೆಗೆ
ಪ್ರೀತಿಯ ವ್ಯಾಮೋಹ!
ಪ್ರೀತಿಯಲಿ ಮಿಂದೇಳಲು!!
ಲಗಾಮಿನ ಬಂಧಿಯಲಿ
ಮಾಲಿಕನ ಮರ್ಜಿಯೊಳಗೆ.
ಹೊಟ್ಟೆ ಗೆ ಹಿಟ್ಟಿದ್ದರೂ
ಹೊಟ್ಟೆಯೊಳಗೆ ಮೊಟ್ಟೆಯಿಡಲು!!
ಋತುಗಳು ಬಲೆಯೊಳಗೆ
ಜೀವಜಂತುಗಳು!!.
-
ಅವಳು,
ನಲ್ಮೆಯ ನತ್ತು ಸುಂದರಿ.
ಒಲುಮೆಯಲಿ ಅಂಟಿಕೊ!
ಕುಲುಮೆಯಲಿ ಕಾದಿದೆ!!
ಪ್ರೀತಿಯೆಂಬ ಬಂಗಾರ.
-
ಮಳೆಯ'ವಳು
ಮಳೆಯೇ......
ನೀ ನಗುವಾಗ ನೆಗೆದೆ.
ನೀ ಅಳುವಾಗ ಅಳಿದೆ
ಅವಳ ಸಂಗದಲಿ,
ಮೈಮರೆತಾಗ ಸಿಂಚನವಾಗಿ,
ಪ್ರೀತಿಯ ಮಳೆ ಸುರಿಸಿ,
ಮನವನು ತೋಯಿಸಿದೆ.
-
ಫೀನಿಕ್ಸ್
ನೀಲಿ ಕಂಗಳ
ಸಮುದ್ರ ದಂಡೆಯಲ್ಲಿ
ಹೊಂಚು ಹಾಕಿ ಕುಳಿತು ಹಕ್ಕಿ!
-
ಕಣ್ಣು
ಕಣ್ಣಂಚಿನ ಹನಿಗಳು
ಬೀಳಲು ಕಾತುರ!
ಕಣ್ಣಿಗೆ ಬೇಸರ!!
ಮನಸ್ಸೊಂದು ಸೋತು,
ಹನಿಗಳ ಬಿಟ್ಟು ಅಳುತ್ತಿತ್ತು!!
-