ಕೊರೋನ ಎಂಬ ಭಯಾನಕ ರೋಗವೊಂದು ಬಂದಿದೆ.
ಅದರ ರೌದ್ರತೆಗೆ ವಿಶ್ವವೇ ತತ್ತರಿಸಿ ಹೋಗಿದೆ.
ಮನೆಯೊಳು ಸೇರಿಹ ಮಾನವನಿಂದ ಜಗವೇ ಶಾಂತವಾಗಿದೆ.
ಪ್ರಕೃತಿ ಶೃಂಗಾರ ಕಾಲದ ಸಂಭ್ರಮಾಚರಣೆ ಮಾಡಿದೆ.
ಕೊರೋನಾ ಎದುರು ವೀರರಂತೆ ಹೋರಾಡುತಿಹರು,
ವೈದ್ಯಕೀಯ ಸಿಬ್ಬಂದಿಗಳೂ, ಪೋಲೀಸರು, ಪೌರಕಾರ್ಮಿಕರು.
ಆದರೆ, ಹಾಸ್ಯವಾಗಿ ಕಾಣುತಿಹರು,
ಗಾಂಭೀರ್ಯತೆ ಅರಿಯದ ಕೆಲವರು,
ಭೀಭತ್ಸವೆನಿಸುವ ಮೌಢ್ಯರು.
ಎಲ್ಲರ ಮೂರ್ಖತ್ವವ ಕ್ಷಮಿಸಿ, ಕರುಣೆ ತೋರು ದೇವನೇ!
ಬಂದ ಸಂಕಷ್ಟ ವಿನಾಶವಾಗೋ ಅದ್ಭುತವೊಂದಾಗಲಿ ಬೇಗನೆ.-
ಶೃಂಗಾರ, ಹಾಸ್ಯ, ಕರುಣಾ,
ರೌದ್ರ, ವೀರ, ಭಯಾನಕ, ಭೀಭತ್ಸ,
ಅದ್ಬುತ, ಶಾಂತಗಳೆಂಬ ನವರಸಗಳ
ಹಿತಕ್ಕೆ ತಕ್ಕಂತೆ ಮಿತವಾಗಿ ಬಳಸಿ,
ಹ್ರುದಯರಾಗವ ತಿದ್ದಿರುವೆ.!
ಮಾತಲಿ ತೋರಲಾಗದ ಸಹಸ್ರ ಭಾವಗಳ
ಸರಾಗವಾಗಿ ಬಿಚ್ಚಿಟ್ಟಿರುವೆ.!
ನಿನಗೆ ಅರ್ಥವಾಗದ ಸಾಲುಗಳ ಹುಡುಕಿ
ನಿಮಿಷದಲಿ ತೆಗೆದು ಹಾಕಿರುವೆ.!
ಪುರುಸೊತ್ತು ಸಿಗದ ಕೆಲಸದ ನಡುವೆ
ನಿನ್ನ ಸೊತ್ತೆಂದು ತಿಳಿದು,
ನಾ ಬರೆದ ಪುಟಗಳ ಒಮ್ಮೆ ತಿರುವಿ ಹಾಕು.!
ಅಲ್ಲಿ ನೀ ಅರ್ಥ ಮಾಡಿಕೊಳ್ಳಲೇ ಬೇಕಾದ
ನನ್ನ ಅಂತರಂಗದ ಪಕ್ವ ಭಾವರಸಗಳಿವೆ.!!
ನಿನ್ನ ವೀರತ್ವಕ್ಕೆ ಶೃಂಗಾರವಿದೆ.
ನೀ ಬೆಚ್ಚಿದರೆ ನಗಿಸಲು ಹಾಸ್ಯವಿದೆ,
ನೀ ಕರುಣೆ ತೋರಿದರೆ ಶಾಂತಸ್ಥಿತಿಯಲಿ
ಅದ್ಭುತಗಳ ಪರಿಚಯಿಸಿರುವೆ...!!-
ಪಿಸುಗುಟ್ಟಿದೆ ನನ್ನ ಹೃದಯದಿ ಹೊಸ ಮಾತಿನ ಪದನಿಸ,,
ಗಮನಿಸಿದೆ ನೀನ ಚಹರೆಯಲಿ ನಸು ನಾಚಿಕೆಯ ನವರಸ,!-
ನಿನ್ನ ಒಲವಿನ ಪದಗಳೇ
ನನ್ನ ಬಾಳಿನ ಸಂಗೀತ..
ನನ್ನ ಹೃದಯದ ತಂತಿ ಮೀಟುವುದು
ನಿನ್ನ ಮಾತುಗಳು ಪ್ರತಿನಿತ್ಯ..!
- ವಿಜಿ✍️
-
ಪಸರಿಸುತ್ತಿದೆ ನನ್ನೀ ಮನದಿ ಮತ್ತಿನ ಪ್ರೇಮ ಪಾದರಸ
ಗುಂಗಿಡಿದಿದೆ ಕನಸಲ್ಲೂ ನಿನ್ನದೇ ಬಿಸಿ ಮುತ್ತಿನ ನವೋಲ್ಲಾಸ-
ಹೆಪ್ಪುಗಟ್ಟಿದೆ ನೆನಪುಗಳಲ್ಲಿ ನಿನ್ನದೆ ಸರಿಗಮ-ಕನ-ನಿಸ
ಒಪ್ಪದೆ ಹೋದರೆ ನೀ ನನ್ನ ಶುರು ಇಂದಿನಿಂದ ನನ್ನ ವನವಾಸ!-
ಯಾರು ಅರಿಯುವವರೊ ಯಾರು ಅರೆಯುವವರೊ
ಕವಿತ್ವ...ಕವಿಸತ್ವವ..ನವರಸದಲಿ
ನವನೀತಾವಗಿ ಜನ್ಮಿಸುವ..ಕವನಕೆ
ಮರುಗಿತ೦ತೆ...ಮನ
ನನಗಾಗಿ ಜನ್ಮಿಸಿತೊ ಎ೦ಬ೦ತೆ
ಮರುಗದಿರು...ಕೊರಗದಿರು
ನಿತ್ಯವು ಸತ್ಯವಲ್ಲ..ಕೃತಿಯ ಕಂಡು ಧೃತಿಗೆಡದಿರು..ಮುದ್ದು ಮನವೆ.-
ಅನುಗ್ರಹ
ಅರಳಿ ನಿಂತ ಕನಸ್ಸಗಳು
ಮಲೆನಾಡಿನಂತೆ ಹಸುರಾಗಿ
ಬರುವ ಘಳಿಗೆಯು ನಿನ್ನದು..
ಜೋಪಾನವಾದ ಸಂಬಂಧ
ಯಾರದೋ ಮೂರರ ಮಾತು
ಸುಳಿಯದಂತ ನೋಡುವ
ಕಾಯಕ ಘಳಿಗೆ ಸೃಷ್ಟಿ ನಿನ್ನದು..
ನನ್ನದೆನ್ನುವುದು ಏನಿದೆ ಇಲ್ಲಿ
ಸೂತ್ರಧಾರ ನಿನಾಗಿ ನಿರ್ದೇಶಿಸಿದಂತೆ
ಮುಂಬಾಗ ಬರಿ ಅಮೋಘ ಅಭಿನಯ
ಸುಂದರವಾಗಿ ಬಿಂಬಿಸು ನನ್ನನ್ನ...
ನಿನ್ನಯ ಅನುಗ್ರಹದಲಿ
ನೂರು ಪ್ರಶ್ನೆ ಮನದಲಿ
ಸುಖ ದುಃಖವು ಸಮಾನವಾಗಿ
ನವರಸಗಳ ತಂದಿಡು ಉತ್ತರವಾಗಿ...-
ನವರಸಗಳು ಬೆರೆತಾಗ ಹುಟ್ಟಿದ ರಸ "ಪ್ರೀತಿ"
ಸೌಂದರ್ಯಕ್ಕೆ ಅವಳೊಂದು ಅದ್ಭುತ ರಸ.
ಮುತ್ತಿನಂತ ಮಾತುಗಳಲ್ಲಿ, ಕಾಣೆಯಾಗದು ಎಂದಿಗು ಕರುಣೆ ರಸ.
ಕಿರುನಗೆಯಲ್ಲಿ ಅಡಗಿರುವ ಹಾಸ್ಯ ರಸಕ್ಕೆ ,
ಕಳೆದುಕೊಳ್ಳುವ ಕವಿ ತನ್ನ ವೀರ ರಸ.
ತಾಳಬೇಡ ರೌದ್ರ ರಸ,
ತೋರಬೇಡ ಬೀಭತ್ಸ ರಸ.
ಜೊತೆಯಲ್ಲಿ ನಾನಿರುವಾಗ ಅಗತ್ಯವಿಲ್ಲ ಅಲ್ಲಿ ಭಯಾನಕ ರಸ.
ಸ್ಮರಿಸುವೆ ನಾನೆಂದಿಗು ನಿನ್ನೆದುರು ಶಾಂತಿ ರಸ.
ದಕ್ಕಿದರೆ ನಿನ್ನ ಮನದೊಳಗೊಂದು ಜಸ.
ಬಾಳೋಣ ಇಬ್ಬರು ಎಂದೆಂದಿಗು ಅಪ್ಪಿಕೊಂಡು "ಶೃಂಗಾರ" ರಸ-