ಮಂದಸ್ಮಿತೆ ✍️💞   (ವಿಜಿ ✍️💞)
908 Followers · 328 Following

read more
Joined 18 December 2018


read more
Joined 18 December 2018

ನಿಜ ದೇವಾ...
ನಾನವನ
ಜೊತೆಯಾದ
ಮೇಲೂ
ಈ ನಿನ್ನ
ಸನ್ನಿಧಾನಕೆ
ಬಂದೇ ಬರುವೆ,
ನಾವಿಬ್ಬರು
ಒಂದಾದ
ಮೇಲೂ
ನಮ್ಮ
ಬದುಕಿಗಾಶ್ರಯ
ನಿನ್ನ
ಪಾದಾರವಿಂದವೇ...
- ವಿಜಿ ✍️💞

-



ಮೊಗದಲ್ಲೊಂದು
ನಗು
ಮೂಡಿಸುವ
ನೀನೊಬ್ಬ
ಅದು
ಯಾವ
ಜನುಮದ
ನಂಟನೋ?🤔

-



ಪ್ರತಿ
ಘಳಿಗೆಗಳಿಗುಂಟು
ಪ್ರೇಮ ಪರ್ವದ
ಲೇಪನ...
ಮುಳುಗೇಳುವ
ಭಾನುವೇ
ಪ್ರತಿ ಕನಸಿನ
ಉದ್ದೀಪನ..!

-



ಇದು
ಕೇವಲ
ಒಂದು
ಸಣ್ಣ
ಝಲಕ್ಕು...
ಇರು,
ಪುನಃ
ಬರುವೆ
ಮಾಡಿ
ಇನ್ನಷ್ಟು
ಮೇಕಪ್ಪು..!

-



ಅಗತ್ಯತೆ ಇರುವಾಗ ಹೊಗಳಿದವರೇ
ಅವಶ್ಯಕತೆ ಮುಗಿದಾಗ ದೂರುವರು
ಯಾರ ಮಾತಿಗೂ ಕಿವಿಗೊಡದಿರು,
ನಿನಗನಿಸಿದ್ದನ್ನು ನೀ ಮಾಡು.

-



ನಾ ಹಿಡಿದಿಟ್ಟ
ನೂರು ಭಾವಗಳ
ನೀ ಗುರುತಿಸಬಲ್ಲೆಯಾ,
ನಾ ವಿವರಿಸದ
ಸಾವಿರ ಕನಸುಗಳ
ನೀ ಕಾಣಬಲ್ಲೆಯಾ,
ನಾ ಆಡದ
ಅಸಂಖ್ಯ ಮಾತುಗಳ
ನೀ ಆಲಿಸಬಲ್ಲೆಯಾ,
ನಾ ಹೇಳದೆಯೇ
ನನ್ನ ನೀ ಅರಿಯಬಲ್ಲೆಯಾ,
ಹೇಳು ಇನಿಯಾ...

-



ಸುಲಭ ದಾರಿಗಳನ್ನೇ ಆಶ್ರಯಿಸುವವರಿಗೆ
ಸಣ್ಣ ಕಷ್ಟಗಳೆದುರಾದರೂ ಜೀವನ ಕ್ಲಿಷ್ಟಕರವಾಗುವುದು,
ಕಷ್ಟಗಳಿದ್ದರೂ ಛಲದಿಂದ ನಡೆಸುವ ಜೀವನ
ಯಶಸ್ವೀ ಬದುಕಿಗೆ ಬುನಾದಿಯಾಗುವುದು.

-



ಗೆಳೆಯಾ...
ನಿನ್ನೆಲ್ಲಾ
ತಲೆನೋವಿಗೆ
ನಾ
ಕಂಡುಹಿಡಿದೆ
ಮದ್ದೊಂದು,
ವ್ಯಥಾ
ಕೋಪ
ಮಾಡುವುದ
ಬಿಟ್ಟು
ನನ್ನ ಜೊತೆ
ರಾಜಿಯಾಗಿರು
ಎಂದೆಂದೂ.
- ವಿಜಿ ✍️💞

-



ನಿಂತರೂ
ಹಾಗೆ
ಸುಮ್ಮನೇ,
ಮನ ತುಂಬಾ
ನೀನೇನೇ,
ಹೋದ ನಿನ್ನ
ಬೆನ್ನ ಹಿಂದೆನೇ,
ಗಿರಿಕಿ
ಹೊಡೆಯುತ್ತಿವೆ
ನನ್ನ ಯೋಚನೆ..!

-



'ಮರೆಗುಳಿಗೆ' ಇದ್ದಿದ್ದರೆ ಚೆನ್ನಾಗಿತ್ತು..😃

-


Fetching ಮಂದಸ್ಮಿತೆ ✍️💞 Quotes