akshatha m acharya   (ಕನ್ನಡತಿ (ಅಕ್ಷತಾ ಆಚಾರ್ಯ))
2.4k Followers · 5 Following

read more
Joined 2 March 2018


read more
Joined 2 March 2018
24 SEP 2022 AT 17:22

ಸ್ಪಷ್ಟವಾದ ಮಾತಿಗೇ ಸಾವಿರ ಅರ್ಥ ಸಿಗುವಾಗ,
ಮೌನ ಸೃಷ್ಟಿಸುವ ಅರ್ಥಗಳ ಲೆಕ್ಕ ಸಿಗಬಹುದೇ!

-


19 AUG 2022 AT 1:52

ಮೊಗಮೊಗೆದು ನೀಡಿದರು ಮುಗಿಯದಷ್ಟಿದೆ ಪ್ರೀತಿ,
ಮುರಳೀಧರನೆ ಮರಳಿ ಬಾ, ಕೇಳಿ ನನ್ನೀ ವಿನಂತಿ.
ಬಾಳುವಾಸೆ ನಿನ್ನೊಂದಿಗೆ ಮೊದಲ ರೀತಿ,
ಮರೆಯುವಾಸೆ ನಿನ್ನ ಕೊಳಲ ನಾದದಿ ನನ್ನೆಲ್ಲ ಭೀತಿ.
ಕಾದಿಹೆನು ನಾ ನಿನ್ನ ತುಂಟ ತರಲೆಗಳಿಗಾಗಿ,
ಮಾತಿನಲೆ ಮೋಡಿ ಮಾಡಬಲ್ಲ ಮೋಹನನ ಧನಿಗಾಗಿ.
ನೋಯಿಸದಿರೋ ಕೃಷ್ಣ ನಿನ್ನೀ ರಾಧೆಯಾ ಮನವ,
ಈ ರಾಧೆಯ ರಮಣನಾಗೇ ನೀ ಉಳಿದು ಬಿಡೋ ಮಾಧವ.

-


23 JUL 2022 AT 13:47

ಕಾಡೊ ನಿನಗೆ ಕರುಣೆಯಿಲ್ಲ,
ಕಾಯೊ ನನ್ನಾಲೋಚನೆಗೆ ಕೊನೆಯೆ ಇಲ್ಲ.
ಸಹನೆಯೇಕೊ ಮೀರುತಿಲ್ಲ,
ಕಳೆದ ಕ್ಷಣಗಳ ಮರೆಯಲಾಗುತಿಲ್ಲ.
ಸುಳ್ಳೆಯಾದರೂ ಪ್ರೇಮಿಯಾಗಿಬಿಡು,
ಕನಸಿನಲ್ಲಾದರೂ ನನ್ಹೆಸರನೊಮ್ಮೆ ಉಸುರಿಬಿಡು.
ಹುಸಿಯಾದರೂ ಸರಿ, ಹೇಳು ನೀ ಮರಳಿ ಬರುವೆಯೆಂದು,
ಕಾಯುವೆ ನಾ, ಜನ್ಮ ಪೂರ್ತಿ ಆ ಮಾತ ನೆನೆನೆನೆದು.

-


22 JUL 2022 AT 16:10

ಕೃಷ್ಣನಂತೆ ತುಂಟತನವ ನೀ ತೋರಬೇಕಿಲ್ಲ,
ರಾಮನಂತೆ ಧರ್ಮವ ನೀ ಪಾಲಿಸಬೇಕೆಂಬ ಬಯಕೆಯಿಲ್ಲ,
ಆ ಪರಶಿವನ ಕ್ರೋದವನೇ ನೀ ತೋರಿದರೂ ಸರಿ,
ನಿನ್ನ ಕೋಪಾಗ್ನಿಯಲಿ ನಾ ಸುಟ್ಟು ಭಸ್ಮವಾದರೂ ಸರಿ,
ಮತ್ತೆ ಜನಿಸುವೆ ಪಾರ್ವತಿಯಂತೆ ನಾ,
ನೀನೊಲಿಯುವವರೆಗೂ ತಪವ ಬಿಡೆ ನಾ,
ವರುಷಗಳೇ ಉರುಳಲೀ, ಜನುಮಗಳೇ ಕಳೆಯಲೀ,
ನೀನೆ ಬೇಕು ಬದುಕಲು, ಜೊತೆಜೊತೆಯಲಿ.

-


9 FEB 2022 AT 11:46

ಶುರುವಾಗಿದೆ ಮನದಲಿ ಹೊಸ ಸಂಚಿಕೆ,
ನಿನದಷ್ಟೇ ಜಪ ನನ್ನೀ ಹೃದಯಕೆ,
ನೀನಿರೆ ಸನಿಹ, ನನಗಿಲ್ಲ ಬೇರೆ ಕೋರಿಕೆ.
ನನ್ನವನು ನೀನೆಂದು ಕೂಗಿ ಹೇಳುವೆ ನಾ ಇಡೀ ಜಗಕೆ.
ನನಗಿಲ್ಲ ಈಗ ಯಾವುದೇ ಅಂಜಿಕೆ.
ನೀ ನನ್ನ ರಮಣ. ಮಾಧವ, ನಾ ನಿನ್ನ ರಾಧಿಕೆ. — % &

-


8 FEB 2022 AT 15:57

ನನ್ಹೆಸರ ಜೊತೆ ನಿನ್ಹೆಸರ ಬರೆಯಬೇಕಿದೆ,
ತಕರಾರು ಮಾಡದೇ ಅನುಮತಿ ನೀಡುವೆಯಾ?!
ಕೈಯಲ್ಲಿ ಕೈ ಹಿಡಿದು ಮೈಲಿ ಸಾಗಬೇಕು ಸಮಯ ನೋಡದೆ,
ಹೂವಿರಲಿ-ಹುಲ್ಲಿರಲಿ, ಕಲ್ಲಿರಲಿ-ಮುಳ್ಳಿರಲಿ, ಜೊತೆ ನಡೆವೆಯಾ?!
ನೋವೆಲ್ಲ ಮರೆಸುವಾ ಬಿಗಿ ಅಪ್ಪುಗೆಯ ಬಯಕೆಯಿದೆ,
ಗಾಳಿಯೂ ನುಸುಳದಷ್ಟು ಸನಿಹ ನಿಲ್ಲುವೆಯಾ?!
ಕಡಲಷ್ಟೇ ಆಳದ ಪ್ರೀತಿ ಬೇಕಾಗಿದೆ,
ನಾ ಹೋದಲ್ಲೆಲ್ಲ ಆಗಸದಂತೆ ನೀನಿರುವೆಯ?!
ನನ್ಹೆಸರ ಜೊತೆ ನಿನ್ಹೆಸರ ಬರೆಯಬೇಕಿದೆ,
ತಕರಾರು ಮಾಡದೇ ಅನುಮತಿ ನೀಡುವೆಯಾ?!— % &

-


19 OCT 2021 AT 21:15

ನೀ ನನ್ನ ಚಂದಿರ,
ಒಮ್ಮೊಮ್ಮೆ ಸಂಪೂರ್ಣ,
ಒಮ್ಮೊಮ್ಮೆ ತಿಳಿ ರೇಖೆ,
ಮತ್ತೊಮ್ಮೊಮ್ಮೆ ನೀನಂತು ನಾಪತ್ತೆ.
ತುಸು ಜಂಬವಂತು ಹೆಚ್ಚೆ ನಿನಗೆ,
ಸುಂದರ ನೀನೆಂದು.
ಕೋಟಿ ನಕ್ಷತ್ರಗಳ ನಡುವಲ್ಲೂ ಬೇಕು ನೀನೆ ನನಗೆ,
ಬದಲಾಗದ ಭಾವವಿದು.
ನಾ ಹೋದಲ್ಲೆಲ್ಲ ನನ್ನೇ ಹಿಂಬಾಲಿಸುವೆ,
ನಾ ನೋಡಲು ಮೋಡದ ಮರೆಯಲ್ಲಿ ಅವಿತುಕೊಳ್ಳುವೆ.
ಹೇಳಯ್ಯ ಓ ಶಶಿರಾಯ,
ನಿನಗೇನೆ ಈ ನ್ಯಾಯ ಸರಿಯ?!

-


17 OCT 2021 AT 9:02

ಹೀಗೊಂದು ಮುಂಜಾನೆ,
ಮಂಜು ಕವಿದಾ ವೇಳೆ,
ಹೊರಟೆ ನಾನೊಬ್ಬಳೆ,
ನಿನ್ನನ್ನೆ ಅರಸಿ.
ಆಗಷ್ಟೆ ಸಿಹಿ ಸ್ವಪ್ನದಿಂದೆದಿದ್ದೆ ನಾನು,
ಅಲ್ಲೂನು ನಿನ್ನನ್ನೆ ಕಂಡು ಬೆರಗಾಗಿದ್ದೆ,
ನಿನ ಕಾಣೋ ದಾರಿಯ ಹುಡುಕಿದ್ದೆ,
ನೀನೇನೆ ಬೇಕೆಂದು ಬಯಸಿ.
ಹೀಗೆ ದಾರಿಯಲೊಮ್ಮೆ ಸಿಕ್ಕಿಬಿಡು ಸುಮ್ಮನೆ,
ಕಾಯಿಸಿ, ಕಾಡುವುದೇತಕೆ ನೀ ನಲ್ಲನೆ?!

-


13 OCT 2021 AT 22:16

ಹೂವು ಕೇಳಿದೆನು,
ಮುಳ್ಳು ಪಡೆದೆನು,
ನೋವಿನಿಂದ ನಾ ಕೃಷ್ಣಾ ಎಂದೆನು.
ಬರಲೇ ಇಲ್ಲ ನೀನು!!
ನಗುವ ಬಯಸಿದೆನು,
ಕಣ್ಣೀರಾದೆನು,
ಮನ ನೊಂದು ಮುರುಳಿ ನಿನ್ನ ನೆನೆದೆನು.
ಬರಲೇ ಇಲ್ಲ ನೀನು!!
ಕನಸಿನಾ ಲೋಕದಿ ಕುಣಿದೆನು,
ಕಣ್ಬಿಡಲು ಪಾತಾಳಕ್ಕೆ ಬಿದ್ದೆನು,
ವಿಶ್ವಾಸದಿಂದಲಿ ವಿಷ್ಣು ಎಂದೆನು.
ಬರಲಿಲ್ಲ ನೀನು!!
ಕಾಯಿಸಿದೆ, ಸತಾಯಿಸಿದೆ,
ಸಂಯಮವಾ ನೀ ಪರೀಕ್ಷಿಸಿದೆ.
ನಂಬಿಕೆ ಕ್ಷೀಣಿಸದಿರಲೂ,
ನೀ ನನಗೊಲಿದೆ,
ರಮಣ, ನೀ ನನಗೊಲಿದೆ.

-


23 AUG 2021 AT 15:45

ದಟ್ಟಡವಿಯಾ ನಡುವೆ, ಕಣ್ಕಟ್ಟಿ ಬಿಟ್ಟಂತೆ,
ಸುತ್ತಲೂ ಬರಿ ಕತ್ತಲೆಯೆ ಕವಿದಂತೆ,
ಮೌನದಾ ಸಪ್ಪಳದ ಹೊರತು ಬೇರೇನು ಇಲ್ಲ,
ಒಬ್ಬಂಟಿ ನಾನಾಗಿಹೆ, ನನ್ನವರೆ ನನಗಿಲ್ಲ.
ಕಣ್ಣೀರಿಟ್ಟರು ಕರಗದೀ ದುಗುಡದ ಶಿಖರ,
ಸಮಯವಿದು ಪರೀಕ್ಷೆಯೊಡ್ಡುತಿದೆ ಸಾವಿರ,
ಸಂತಸದ ಜಾತ್ರೆಯಲೂ ಕಳೆದೋಗಿದೆ ಮನಸದಲ್ಲೋ!
ಹಸನ್ಮುಖಿಯ ನಾಟಕದ ಪರದೆ ಕಳಚುವುದು ಯಾವಾಗಲೋ!

-


Fetching akshatha m acharya Quotes