ತರು,,, ✍  
821 Followers · 88 Following

read more
Joined 20 January 2019


read more
Joined 20 January 2019
7 JUN 2023 AT 20:18

ಕತ್ತೆತ್ತಿ ನೋಡಲು ಎತ್ತೆತ್ತಲೂ ಕತ್ತಲೇ ನನ್ನವ್ವ
ಕಾಡ ನಡುವಣದ ಕಕ್ಕಾಬಿಕ್ಕಿ ಎದುರೆದುರು
ಮುತ್ತಾಗಿಸಬೇಡ ಮತ್ತೆ ಮತ್ತೆ ಅರೆಗಣ್ಣುಗಳ
ಸುಖಗಾಣದ ಸುಕ್ಕು ಕೆನ್ನೆಗಳವು
ಮುಕ್ಕಾದಾವು ಬಿಸಿನೀರ ಮರೆಯಲ್ಲೆ!

ಎಲ್ಲಾ ಕಡುಕಷ್ಟಗಳನೊಟ್ಟುಗೂಡಿ ಸುಟ್ಟುಬಿಡುವ
ಆ ದಿನ ಬಂದಾತು ಮುಂದೊಮ್ಮೆ
ಮಾತು ಮಾತಿಗೂ ಬಿಕ್ಕಳಿಸಬೇಡೇ ನನ್ನವ್ವ
ತುತ್ತು ಅನ್ನಕ್ಕೂ ದಾರಿಬಿಡದೆ
ಕರುಳ ಗಂಟಾಗಿಸಿದೆ ಎದೆಗಂಟದ ದುಃಖ!

ದೂರದ ನಕ್ಷತ್ರದಾಸೆ ನಾ ತೋರಿಸಿಲ್ಲ
ಚಿಮುಣಿ ಬೆಳಕಾದರೂ ಹೊತ್ತು ತರುತೇನೇ ನನ್ನವ್ವ
ನಿನ್ನೊಳಗೆ ನಿನ್ನೆಯಿದ್ದ ಆ ಗಟ್ಟಿ ತನದ ಕಸುವ ನೀಡು
ಹೆಚ್ಚೇನು ಬ್ಯಾಡ ; ನೋಡು
ಎದಿಯೊಳಗೇನೂ ಮುಚ್ಚಿಡಬ್ಯಾಡ!

-


17 FEB 2023 AT 22:47

ನೀ ಭಾಳ ನಿರಾಳ., ನಿಜ! ನೀನೀ ಬಾಳ ನಿರಾಳ..

-


28 NOV 2022 AT 11:33

ಏನೊಂದರಲ್ಲಿಯೂ,
ನೆಮ್ಮದಿಯಿದೆ ಎನಿಸುತ್ತಿಲ್ಲ ಇಲ್ಲಿ
ನನ್ನ ಹಸಿವನ್ನು, ಅನ್ನವನ್ನೂ;
ನನ್ನ ಧರ್ಮವನ್ನು, ಜಾತಿಯನ್ನೂ;
ನನ್ನ ನಂಬಿಕೆಯನ್ನು, ನನ್ನ ಭಕ್ತಿಯನ್ನೂ;
ನನ್ನ ನೆಲವನ್ನು, ಜಲವನ್ನೂ;
ನನ್ನ ನಾಡನ್ನು, ನುಡಿಯನ್ನೂ;
ಇನ್ನೂ ನನ್ನವೇ ಏನೇನನ್ನೋ
ರಾಜಕೀಯಕ್ಕಿಳಿಸಿದ್ದಾರೆ ಇಲ್ಲಿ
ಅವರವರ ಲಾಭನಷ್ಟಗಳ ತಕ್ಕಡಿಯಲ್ಲಿ!

-


19 NOV 2022 AT 21:28

ನಿಜ, 'ಕನ್ನಡ ಮನಸಲ್ಲಿದ್ರೆ ಸಾಕಾಗಲ್ಲ'
ಮತಿಯ ಮಾತಾಗಬೇಕು ಮುತ್ತಾಗಬೇಕು
ಎದೆಯ ಪ್ರೀತಿಯಾಗಬೇಕು! ಕನ್ನಡ
ಹೃದಯ ಜ್ಯೋತಿಯಾಗಬೇಕು!

ನೀತಿಯಾಗಬೇಕು ನಿರ್ಭೀತಿಯಾಗಬೇಕು
ಹೊತ್ತೊತ್ತಿನ ತುತ್ತಾಗಬೇಕು, ಸ್ವತ್ತಾಗಬೇಕು
ಯಾವೊತ್ತಿನ ಗೊತ್ತಾಗಬೇಕು ಗತ್ತಾಗಬೇಕು! ಕನ್ನಡ
ಕೊರಳ ಕತ್ತಾಗಬೇಕು ಕತ್ತಲೊಳಗಿನ ಕಿಚ್ಚಾಗಬೇಕು!

ಅನ್ನವಾಗಬೇಕು ಚಿನ್ನವಾಗಬೇಕು
ಭಿನ್ನವೆಣಿಸದ ಅವಿಚ್ಛಿನ್ನವಾಗಬೇಕು
ಕಣ್ಣಾಗಬೇಕು ಕಪ್ಪು ಮಣ್ಣಾಗಬೇಕು! ಕನ್ನಡ
ಬಣ್ಣ ಬಣ್ಣದ ಭಾವಬೆಳಕಾಗಬೇಕು!

-


11 AUG 2022 AT 22:44

ಬೆಳಕಾಗಬೇಕು, ಸುಡು ಸೂರ್ಯನಲ್ಲ
ಚಂದ್ರನಂಥ ತಂಬೆಳಕು
ಅದಕೆ ಇರುಳಾಗಬೇಕು, ತಿಳಿಯಾಗಸ ಬೇಕು
ಇರುಳಾಗುವ ತನಕ ಕಾಯಬೇಕು
ಕಾಯದೆಲ್ಲಾ ಮರುಳ ಮರೆಯಲಿರಸಬೇಕು!

ಮೌನವಾಗಿರಬೇಕು, ನಿಶ್ಯಬ್ದ ಮಸಣವಲ್ಲ
ಹರಿವ ತೊರೆಯಷ್ಟೇ ಗುನುಗಿನಿಂಪಿರಬೇಕು
ಅದಕೆ ನದಿಯಾಗಬೇಕು ನಿಧಾನಬೇಕು
ಆ ತನಕ, ನಿರಾಳಬೇಕು ನೀರಾಗಬೇಕು
ಬೇವುಬೆಲ್ಲಗಳ ಅಲ್ಲಗಳೆಯಬೇಕು!

ಮಾತಾಗಬೇಕು, ಮೊನಚು ಮುಳ್ಳಿನಂಥಲ್ಲ
ಮೃದುಲ ಮಧುರ ಮುತ್ತಿನಂತಿರಬೇಕು
ಹೋಲಿಕೆ ಚೊಕ್ಕ ಚುಕ್ಕಿಯಾಗಬೇಕು
ಅಂಥದಕೆ ತಿಳಿತಾಳ್ಮೆ ತಾಗಬೇಕು
ಸರಳ ಸೌಜನ್ಯಗಳೇ ಜೋಗುಳವಾಗಬೇಕು!

-


26 APR 2022 AT 10:05

ಹಸಿವೆಗೆ ಖುಷಿಯ ಅನ್ನವ ಹರಸಿದರೆ
ಹೃದ್ದವಡೆ ನೆನೆಯದ ನೀರ ನೀಡೀತು
ತೃಷೆಗೆ ನೆಮ್ಮದಿಯ ಸಿಹಿನೀರ ನೆನೆದರೆ
ನಿರಾಸೆಯ ಬೇಸರ ಎದುರಾಯಿಸೀತು,
ದಣಿವಿಗೆ ನೆರಳ ಬೇಡಿದರೆ
ಬಾಗು ಬೆನ್ನನೇ ಧಗೆ ಬಿಸಿಲಿಗೆ ದೂಡೀತು
ಹರಸದೇ ಏನೊಂದನೂ ವರಿಸದೇ ಸಾಗಬೇಕಿಲ್ಲಿ
ಆ ವಿಧಿಯ ತಿದಿಯ ಕಿಡಿಬೆಳಕಿನಡಿಯಲ್ಲಿ!

-


31 JAN 2022 AT 22:48

ಏಸು ಭಾವದ ಬಾವಿಯ ನೀರ
ಒಂದ ಬಿಂದಿಗಿ ತುಂಬಿದಿ ಪೂರ
ಬಸಿದಷ್ಟೂ ಹನಿ ಹನಿಯೂ ಭಾರ
ಭವಿಸಿದಷ್ಟೂ ತೀರದ ಸಿಹಿದಾಹ ಸಾರ!

ನೋವಿಗೊಂದ ಹೆಸರ ಕೊಡತಿ
ಹೆಸರಿಗದು ನೋವೇ,?ಎಂದೂಡತಿ
ಹಾಡತಿ ಹಾಡನೇ ಹಾಡಿಸತಿ
ಕುಣಿಸಿ ಪದವ ಗುಣಿಸಿ ರಸಭಾವ
ನಿನ್ನಲ್ಲದ ನಿನ್ನಕ್ಷರಕ್ಕೆದುರಾದವಗೂ
ಕಲ್ಲು ಸಕ್ಕರೆಯ ಸಿಹಿಪಾಕ ಉಣಿಸತಿ!

ಸಾವಿರದ ಸಾವಿರ ಸಾಲ್ಗಳೂ ಸವಿಜೇನು
ಮಾಗಿರದ ಎಳೀಯ ಹುಳಿಮಾವ ಜೊನ್ನು
ಯಾ ಕಾಲಕೂ ಅವ ಸಿರಿಸುಖದ ಗಿರಿಗಣ್ಣು
ಕಾವ್ಯ ಕಾಮಧೇನು ನೀನು
ನುಡಿಗುಡಿಯ ಗಣ್ಯಗೋಣು!!— % &

-


1 JUN 2021 AT 10:58

ಹ್ಯಾಪಿ ಹುಟ್ದಬ್ಬ ಹುಡ್ಗಾ,❤

ಒಳ್ಳೇದಾಗಲಿ,ಒಳಿತಷ್ಟೇ ನಿನ್ನೆಲ್ಲವನ್ನೂ ತಾಗಲಿ;
ಪ್ರತಿ ಮಾತು ಅಕ್ಷರವಾಗಲಿ
ಪ್ರತಿ ಅಕ್ಷರವೂ ಪ್ರೀತಿ ಸಾರಲಿ
ಪ್ರತೀ ಪ್ರೀತಿಯು ಅನಂತವಾಗಲಿ
ಆ ಅನಂತದಲಿ ನಿನ್ನರಿವು ಇರವು ಲೀನವಾಗಲಿ.!

ಪ್ರಚ್ಛನ್ನ ಚಿಗುರು ಚೇತನ ನೀನು ಅನಿಕೇತನವಾಗು
ಸ್ವರ್ಣಸಮ ಸ್ಮೃತಿಸೆಲೆ ನೀನು ಸಾಗರವಾಗು
ಬಣ್ಣ ಬಣ್ಣದ ಭಾವ ನೀನು ಅನುಭಾವವಾಗು
ಎಲ್ಲರನೂ ತಬ್ಬುವ ಎಲ್ಲರೆದೆಗೂ ಹಬ್ಬುವ
ಪ್ರೇಮಸ್ಪರ್ಶಸ್ಪುರಿತ ಹಚ್ಚಸಿರ ರಸಬ್ಳಳಿಯಾಗು.!

ಸಿಹಿ ನಗುವೇ ಉಚ್ವಾಸವಾಗಲಿ
ಸವಿ ದನಿಯೇ ನಿಚ್ವಾಸವಾಗಲಿ
ಪ್ರಾಣಾಣುಕಣಕಣದಲಿ ಪ್ರತಿಚಣದಲೂ
ಮಧುರ ಮತಿಯ ವಾಸವಾಗಲಿ
ಅತಲ ನಲುಮೆ ನಿಲ್ಲಲಿ ಮನ ಮನೆಯಲಿ..!

-


7 JAN 2022 AT 22:36

ಎಲ್ಲವೂ ಹೊಲಸಾಗಿದೆ ಇಲ್ಲಿ
ನನ್ನ ನಿನ್ನ ಅಂತರಾಳದ ಒಲವನ್ನೊರತುಪಡಿಸಿ
ಜೋಪಾನವಾಗಿ ಕಾಯ್ದುಕೊಳ್ಳಬೇಕು ನಾವದನು
ಯಾವ ಹೊಲಸಿನ ಮುಲಾಜಿಗೂ ಬಲಿಯಾಗದಂತೆ!

ಎಲ್ಲವೂ ಕಲ್ಮಶವೇ ಕೇಳಿಲ್ಲಿ
ರೂಪು ರುಚಿ ರೀತಿಗಳ ಕೋಟೆಯಿಲ್ಲದೆ
ಸ್ವಚ್ಛಂದವಾಗಿ ಹರಿವ ತೊರೆಯನೋಲುವ
ನನ್ನ ನಿನ್ನ ಎದೆನಾಲೆಯಾ ಒಲವ ಹೊರತು
ಕಣ್ಣಿಟ್ಟು ಕಾಪಾಡಬೇಕು ನಾವದನು
ಯಾವ ಕೊಚ್ಚೆ ಕೆಸರಿನೊಂದಿಗೂ ಕೈಕುಲಕದಂತೆ!

ಎಲ್ಲವೂ ಭ್ರಷ್ಟ, ನಿಕೃಷ್ಟಾನಿಷ್ಟವೇ ನೋಡಿಲ್ಲಿ
ಮೋಹ ದಾಹಗಳ ಜಯಿಸಿ ನೇಹದಿ ಜೀವಿಸುವ
ಶ್ವಾಶೋಚ್ವಾಸದ ಶ್ರೇಷ್ಠೋತ್ಕೃಷ್ಠ ಒಲವನ್ನೊರತುಪಡಿಸಿ
ಕಾಯಬೇಕು ನಾವದನಾವ ಮಾಯಾನಿಷ್ಟ ತಾಗದಂತೆ!

-


27 NOV 2021 AT 10:51

ಕಾಡಬೇಕು, ಕಳೆಯದಿದ್ದರೂ
ಅದನು ಹುಡಕಾಡಬೇಕು
ಅದಕಾಗಿ ಮಿಡಿಯಬೇಕು
ಅದಕೆಂದೇ ತುಡಿಯಬೇಕು
ಬೇಕು ಇನ್ನೂ ಬೇಕು ಎನ್ನಬೇಕು
ಹೊನ್ನು ಹೆಣ್ಣು ಮಣ್ಣು ಚರವಾಗಬೇಕು!

ಅಡಿಗಡಿಗೆ ಹಿಡಿಮುಡಿಯ ತಾಗಬೇಕು
ಅದಾವುದೂ ತಾಗದಂತೇ ಸಾಗಬೇಕು
ಬೇಕು ಬೇಕು ನಿರಾಳವೆನಿಸಬೇಕು
ಸಾಕು ಸಾಕೆಂದರೂ ಆಸೆ ಚಿಗಿಯಬೇಕು
ಆ ಚಿಗುರು ಮೋಹದ ಮೀಸೆಯ ಮುರಿಯಬೇಕು
ದಾಹದಾಚೆಯ ದಾರಿಯ ಅರಿಯಬೇಕು!

ನಿಜ, ನಿಜ ಒಲವಿಗಷ್ಟೇ
ಈ ಪರಿ ಸರಿಗಳ ಪರಿಚಯವಿರಬೇಕು
ಒಲವ ಹೊರತುದದೆಲ್ಲವ ಹೊರನೂಕು
ಉಸಿರುಸಿರಿಗೂ ಒಲವೇ ಬೇಕು
ಒಲವಿನಲೇ ಉಸಿರಿಸಬೇಕು
ಒಲವನೇ ಸಾಕು ಒಲವೇ ಸಾಕು!

-


Fetching ತರು,,, ✍ Quotes