ಕುವಿ   (ಕುವಿ)
691 Followers · 31 Following

read more
Joined 3 June 2020


read more
Joined 3 June 2020
14 FEB 2023 AT 9:38

ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು |
ಕಾಣದೊಂದು ಕನಸ ಕಂಡು ಮಾತಿಗೊಲಿಯದಮೃತವುಂಡು |
ದುಃಖ ಹಗುರವೆನುತಿರೆ ಪ್ರೇಮವೆನಲು ಹಾಸ್ಯವೇ? ||
- ಕೆ ಎಸ್ ನ







-


28 NOV 2022 AT 17:11

ಕಾಡುವಿಕೆ-೦೪
'ಶ್ರದ್ಧೆ'
ಅದೊಂದು ಪೂಜೆ,
ಮೌಢ್ಯವಲ್ಲ.
ಅದೊಂದು ಭಕ್ತಿ,
ತೋರಿಕೆಯಲ್ಲ.

-


27 NOV 2022 AT 15:16

ಕಾಡುವಿಕೆ-೦೩
'ಕೆಲಸ'
ಮಾತಿನಲ್ಲಿ ಹೇಳೋದಲ್ಲ,
ಶ್ರದ್ಧೆಯಿಂದ ಮಾಡಿತೋರ್ಸೋದು.

-


26 NOV 2022 AT 14:38

ಕಾಡುವಿಕೆ-೦೨
'ಆದರ್ಶ'
ನನ್ನೊಳಗೆ ನಾನೇ ಸಂಚರಿಸಿ,
ಅವರಂತಾಗಲು ಹಪಹಪಿಸಿದ್ದು.

-


25 NOV 2022 AT 17:13

ಕಾಡುವಿಕೆ-೦೧
'ಭಯ'
ನಾನು ನಾನಾಗಿರದೇ ಹೋದಾಗ,
ನನ್ನೊಳಗೆ ನಾನಿರದಿರುವಾಗ.

-


14 OCT 2022 AT 16:33

ಅಭಿಮಾನವೆಂದರೆ,
ವಿಶ್ವಾಸವೆಂದರೆ ಇನ್ನೇನು?
ಅವರು ನೆನಪಿಡಲಾಗದ ಅವರದೇ ದಿನಚರಿಯನ್ನ ನಾವು ನೆನಪಿಡುವುದು...
ಅವರು ಕಂಡಾಗ ಏನು ಮಾತಾಡಬೇಕೆಂಬುದು ತಿಳಿಯದೆ ಮುಗುಳು ನಗುವುದು....
ಅವರ ಮಾತುಗಳನ್ನು ಗಮನವಿಟ್ಟು ಕೇಳುವುದು,
ಹಾಗೆಯೇ ನೆಡದುಕೊಳ್ಳಲು ಸದಾ ಹವಣಿಸುವುದು...
ಎದೆಯಲಿ ಅವರ ಕುರಿತು ಅಗಾಧ ಗೌರವ ತುಂಬಿಕೊಳ್ಳುವುದು...
ದೂರದಿಂದಲೇ ಹೃದಯ ತುಂಬಿ ಹರಸುವುದು‌..

-


1 JUL 2022 AT 23:33

ನಾನೂ ಸೋಮಾರಿಯೇ
ನಾನೇ ಕರೆಮಾಡಿದರೂ ಅವರೇ ಕಾಲ್ ಕಡಿತಗೊಳಿಸಲೆಂದು ಸುಮ್ಮನೆ ಅಲೆಯುಲಿ ಕುಕ್ಕಿಬಿಡುವೆ.
ನಾನೂ ಸೋಮಾರಿಯೇ
ನಿದ್ದೆಯಲ್ಲೂ ಬೆರ್ಶೀಟ್ ಅನ್ನು ಕಾಲಿಂದಲೇ ಕಷ್ಟ ಬಿದ್ದು ಹೊದ್ದುಕೊಳ್ಳುವೆ..
ಜಡೆ ಹೆಣೆಯಲು ಕಷ್ಟವೆಂದು ಊರ್ತುಂಬ ಕ್ಲಿಪ್ ಹುಡುಕುವೆ.

-


30 JUN 2022 AT 0:20

ಬೇಕು ಬೇಕೆನಲೇ

-


29 JUN 2022 AT 0:44

ನಿನ್ನೊಲವ

-


28 JUN 2022 AT 18:53

ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ
ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ
ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು
ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ

-


Fetching ಕುವಿ Quotes