ಒಂದು ಕುಟುಂಬವನ್ನು
ಪ್ರೀತಿ ಮತ್ತು ವಾತ್ಸಲ್ಯದಿಂದ
ಕಾಣುವ ಒಬ್ಬ
ಜವಾಬ್ದಾರಿವುಳ್ಳ ವ್ಯಕ್ತಿ
ಕಲ್ಲಿನ ಮೂರ್ತಿಯಂತಾದ್ರೆ
ಮುಗಿಯಿತು ಆ
ಕುಟುಂಬದ ಸದಸ್ಯರ
ಭಾವನೆಗಳೆಲ್ಲ
ಕೇವಲ ಅಭಿಷೇಕವಷ್ಟೇ!-
ಇತ್ತೀಚಿನ ದಿನಗಳಲ್ಲಿ
ನಾನಿಲ್ಲದೆ ನೀನು
ಬದುಕಲು ಸಾಧ್ಯವಿಲ್ಲ,,,,,
ಅಂತ ಹೇಳುವ ಹಕ್ಕು
ದುಡ್ಡಿಗೆ ಮಾತ್ರ ಸಾಧ್ಯವಿದೆ.
ಮನುಷ್ಯರಿಗೆ ಅದು ಇಲ್ಲ ,,!-
ಈ ಬದುಕು ನಗು,ಅಳು
ಮತ್ತು ನೆನಪುಗಳನ್ನು ಹೊತ್ತು ತರುತ್ತದೆ,
ಕೆಲವೊಂದು ಬಾರಿ ನಗು ಅಳುವನ್ನು
ಮಂಕಾಗಿಸುತ್ತದೆ,
ಆದರೆ ಕಳೆದ ನೆನಪುಗಳು ಹಾಗಲ್ಲ
ಶಾಶ್ವತವಾಗಿ ಮರಕಳಿಸುತ್ತಿರುತ್ತವೆ.-
ನಾವು ಜೊತೆಯಾದ ಒಲುಮೆಗೆ
ಎರಡಲ್ಲ,ಮತ್ತೊಂದು ವಸಂತ ಕಳೆಯಿತು,
ಹೀಗೆ ನೂರೊಂದು
ವಸಂತಗಳತ್ತ ಸಾಗೋಣ,,
Happist ವಾರ್ಷಿಕೋತ್ಸವ ಹೆಂಡತಿ,,,-
ಬದುಕಿನಲ್ಲಿ ಒಂದು ಬಾರಿ
ಯಾವುದೇ ವಸ್ತು ಅಥವಾ
ವ್ಯಕ್ತಿಯ ಬೆಲೆ ಗೊತ್ತಾದ
ಮೇಲೆ ಮತ್ತೆ ಅವುಗಳಿಗೆ
ಮೌಲ್ಯ ಕಟ್ಟಬಾರದು.,,,-
ಅವರ ಮನೆಗೆ ಹೋಗಿ ಮಜ್ಜಿಗೆ ಕೇಳಿದ್ರು ಕೊಡಲಾರದ ಜನ,
ನಮ್ಮನೆಗೆ ಬಂದು ಪಕ್ಕದಲ್ಲಿ ಕುಳಿತು ಹಾಲು ಕೊಡುತ್ತಿದ್ದಾರೆ ಅಂದ್ರೆ,
ಅದರಲ್ಲಿ ಪಕ್ಕ ವಿಷ ಬೆರೆಸಿದೆ ಅಂತನೇ ಅರ್ಥ!-
ನಾವು ಜೊತೆಯಾದ ಅನುಬಂಧಕ್ಕೆ
ಮತ್ತೊಂದು ವರುಷವಾಯಿತು,
ನಮ್ಮ ಪ್ರೀತಿಯ ಭಾವನೆಗಳಿಗೆ
ಒಲವಿನ ಹರುಷವಾಯಿತು,
ಈ ಖುಷಿ ಕ್ಷಣದ, ನಗು ಮೊಗದ
ನಲ್ಮೆಯ ಮಡದಿಗೆ
ವಿವಾಹ ವಾರ್ಷಿಕೋತ್ಸವದ
ಶುಭ ಹಾರೈಕೆಗಳು,,,,💐💐-
ಬದುಕೊಂದು ಭಾವನೆಗಳ ಸಂತೆ
ಇಲ್ಲಿ ಬರೀ ಘಟಿಸಿದ ನೋವುಗಳದೇ ಚಿಂತೆ
ಮಾರಾಟವಾಗುತ್ತಿವೆ ಮಾನವೀತೆಯ ಕಂತೆ
ಕಳುಚಿತಿದೆ ಮನುಷ್ಯನ ನಿಜರೂಪದ ಅಂತೆ-
ನಿನ್ನ ಮಡಿಲಿನ ಗುಡಿಯೊಳಗೆ
ನನ್ನುಸಿರು ಸೇರಿಸಿದೆ ನೀನು,
ಇನ್ನೇನು ಬೇಕು ರುಜುವಾತು
ನಾನೇ ನಿನ್ನ ನಕಲು ಎನ್ನಲು!-