Deepak Kumar  
23 Followers · 52 Following

I write because I wasn't right!!
Joined 17 November 2019


I write because I wasn't right!!
Joined 17 November 2019
7 AUG AT 23:10

When you don’t have money, you lose the right to talk — because money has the power to shut your mouth, even when you have the right thing to say

-


31 JUL AT 20:18

ಅವಳು ಉಸಿರಾಡುವಾಗ, ಕಣ್ಣುಗಳು ಅರಳಿದವು.
ಆ ಮುದ್ದು ಮೂಗಿನ ಚಲನವಲನ ನನ್ನ ಗಮನವನ್ನು ಸೆಳೆಯಲು,
ಕದ್ದು ನೋಡುವ ಕಣ್ಣುಗಳು ಕೊನೆಗು ಕವಿಯಾಯಿತು.
ಈಗ ಆ ಕವಿ, ಅರ್ಧ ಚಂದಿರನ ಜೊತೆಗೆ ಕೂತು,
ಆಕೆಯ ಒಂದೊಂದು ಕ್ರಿಯೆಯನ್ನು ಕವಿತೆಯನ್ನಾಗಿ ಬರೆಯಲು ಪ್ರಯತ್ನಿಸುತ್ತಿರುವ.

-


28 JUL AT 20:45

ಆ ಕಣ್ಣುಗಳಲ್ಲಿ ಅಷ್ಟೊಂದು ಒಳ್ಳೆತನ, ಆದರೂ ಸುಸ್ತು.
ಆ ಕಣ್ಣುಗಳಲ್ಲಿ ಅಷ್ಟೊಂದು ಕಾಳಜಿ, ಆದರೂ ಕಳವಳ .
ಆ ಕಣ್ಣುಗಳಲ್ಲಿ ಅಷ್ಟೊಂದು ಕರುಣೆ, ಆದರೂ ಭಯ.
ಕತ್ತೆ ವಯಸ್ಸಾದ ಮೇಲೆ, ಕತ್ತೆತ್ತಿ ನೋಡಿದಾಗ,
"ಜೀವನದಲ್ಲಿ ಎಲ್ಲವನ್ನೂ ಅನುಭವಿಸಿರುವ ನನ್ನ ತಂದೆಯ ಕಣ್ಣುಗಳನ್ನು ನೋಡಿ ಮಾತನಾಡುವಷ್ಟು ಧೈರ್ಯ ಇನ್ನು ನನಗೆ ಬಂದಿಲ್ಲ".

-


22 JUL AT 21:08

I never knew that money and comfort could make me a coward.

-


3 JUL AT 21:19

ಹೆಚ್ಚಾಗಿ ಕೇಳಿದಷ್ಟು, ಹೆಚ್ಚಾಗಿ ಕಾಳಜಿ ತೊರಿಸಿದಷ್ಟು,
ಬಹಳ ಕೀಳಾಗಿ ನೋಡಲಾಗುತ್ತಿದ್ದೇನೆ.
ನನ್ನ ಆತ್ಮಗೌರವವನ್ನು ಪಕ್ಕಕ್ಕೆ ಇಟ್ಟು,
ಅವರ ಮುಂದೆ ಭಿಕ್ಷುಕನ ಹಾಗೆ ಬೇಡುವ ಭಾವನೆಯ ಹೆಸರು ಪ್ರೀತಿ ಎಂದರೆ,
ದೇವರೇ, ನನಗೆ ಆ ಭಾವನೆಯನ್ನು ಕೊಡಬೇಡ!
ಏನಾದರೂ ಆ ಭಾವನೆಯನ್ನು ಅನುಭವಿಸಬೇಕೆಂದು ಮುಂಚೆ ಯಾವಾಗಲಾದರೊಮ್ಮೆ ಕೇಳಿದ್ದರೆ,
ನನ್ನನ್ನು ದಯವಿಟ್ಟು ಕ್ಷಮಿಸಿಬಿಡು!

-


28 JUN AT 21:42

"Your real downfall is when you know you're interested & good at something, but life leaves you with zero hope of pursuing it."

-


3 JUN AT 22:07

ನಾನು ಅವಳೊಂದಿಗೆ ಮಾತನಾಡುವಾಗ ನನ್ನ ಕಣ್ಣುಗಳ ತುಂಬಾ ತುಂಬಿಕೊಂಡಿರುವುದು ಪ್ರೀತಿ ಮಾತ್ರ.
ಒಂದು ಕ್ಷಣ ಕಣ್ಣು ಮಿಟುಕಿಸಿದಾಗ ಅರಿವಾಯಿತು,
ಅವಳು ನನ್ನ ಎದುರಿನಲ್ಲಿಯೇ ಇದ್ದರು ಅದು ಆಕೆಯನ್ನು ತಲುಪಲಾರದೆ ಕಣ್ಣಿನಲ್ಲಿಯೇ ಬಚ್ಚಿಕೊಂಡು ಪರದಾಡುತ್ತಿದೆ ಎಂದು.

-


13 MAY AT 22:03

ಭೂಮಿ ಏಕೊ ಮೆಲ್ಲನೆ ಸುತ್ತುತ್ತಿದೆ.
ಹುಬ್ಬು ಎತ್ತುವುದಕ್ಕು ಕೂಡ ಸುಸ್ತಾಗುತ್ತಿದೆ.
ಮುಂದೇನು, ಮತ್ತೇನೂ ಎಂಬ ಪ್ರಶ್ನೆಗಳ ಮಧ್ಯೆ,
ಇಂದೇನು ಎಂಬುದೇ ಮರೆತು ಹೋಗಿದೆ.
ಕೆಲವೊಮ್ಮೆ ಉತ್ಸಾಹ, ಕೆಲವೊಮ್ಮೆ ಉಡಾಫೆ.
ಸದ್ಯಕ್ಕೆ ಉಸಿರಾಡಿದರೆ ಸಾಕು,
ಎಲ್ಲವು ಸರಿ ಆಗುವುದಕ್ಕೆ, ಕೆಲವರ ಮೌನ ಮುರಿಯಲೇಬೇಕು.

-


9 MAY AT 20:34

Love? Not really.
But she’s the only star in my midnight skies,
The reason behind my silent sighs.

-


2 MAY AT 20:20

I love how she completes me like a song, where I am the lyrics and she adds beauty to it by being the music.

-


Fetching Deepak Kumar Quotes