QUOTES ON #ದರಾಬೇಂದ್ರೆ

#ದರಾಬೇಂದ್ರೆ quotes

Trending | Latest
6 APR 2020 AT 19:46

ಇರೋತನಕ "ದುಡಿ"
ಇದ್ದಾಗ ಕುಂತು "ಕುಡಿ"
ಸಾವು ಬಂತಾ "ನಡಿ"

ಇಷ್ಟೇ ಜೀವನ...

-


31 JAN 2021 AT 9:28

|ಬೇಂದ್ರೆ|

ಕನ್ನಡದ ವರಕವಿ
ದ.ರಾ
ಬೇಂದ್ರೆ.
ಅವರಂತೆ ನಾವಾಗಲು ಸಾಧ್ಯವೇ ?
ಬರಹಗಳಲ್ಲಿ
ಬೆಂದ್ರೆ.

-


1 FEB 2022 AT 5:13


#ವರಕವಿ
#ಅಂಬಿಕಾತನಯದತ್ತ

--ದ.ರಾ. ಬೇಂದ್ರೆ

-



— % &

-


22 MAR 2023 AT 21:58

ವರುಷಕೊಂದು ಹೊಸತುಜನ್ಮ
ವರುಷಕೊಂದು ಹೊಸತು ನೆಲೆಯು/
ಅಖಿಲ ಜೀವಜಾತಕೆ ಒಂದೇ ಒಂದು ಜನ್ಮದಲಿ/
ಒಂದೇ ಬಾಲ್ಯ/ ಒಂದೇ ಹರೆಯ
ನಮಗಿದಷ್ಟೆ ಏತಕೋ ತಂದೆ...
ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ..













-



ಒಲವೆಂಬ ಹೊತ್ತಿಗೆಯ
ಓದಬಯಸುವ ನೀನು
ಬೆಲೆ ಎಷ್ಟು ಎಂದು ಕೇಳುವೆಯೊ ಹುಚ್ಚ!
ಹಗಲಿರುಳು ದುಡಿದರೂ
ಹಲಜನುಮ ಕಳೆದರೂ
ನೀತೆತ್ತಲಾರೆ ಬಾರಿ ಅಂಚೆ ವೆಚ್ಚ!


___ದ.ರಾ. ಬೇಂದ್ರೆ...

-



ದ.ರಾ.ಬೇಂದ್ರೆ
**********
ರಸವೇ ಜೀವನ
ವಿರಸವೇ ಮರಣ
ಎಂದುಸುರಿದೀ ಕವಿಮನ
ಕಬ್ಬಿಗರಿಗದು ನಂದನವನ!!೧!!

ಕಾವ್ಯದೀ ಜಗವೆಲ್ಲ ಮಲಗಿರಲವನೊಬ್ಬನೆದ್ದ
ಎಂದ್ಹಾಡಿ ಕುಣಿದವನೀತ ಕವಿಮನದ ಸಿದ್ಧ !!೨!!

ಭಾವಶರಧಿಯೊಳೀಜಿದ ಕಾವ್ಯಕುಲದ ಬುದ್ದ
ಭಾವಗಾನದಿಂದಲೇ ಇವ ಜನಮನ ಗೆದ್ದ !!೩!!

-



ಅಕ್ಕರೆಯಿಂದ ಆನಂದದಿಂದ
ಅಕ್ಷರಗಳನ್ನು ಅಕ್ಷರಗಳನ್ನು
ಆರಾಧಿಸುವ ಅರಸುವ
ಆರಾಧಕ. ‌‌ ಅರಸಿ.

-


31 JAN 2020 AT 17:30

ಒಬ್ಬರು
ಮತ್ತೊಬ್ಬರನ್ನು
ತುಳಿದು
ಬದುಕಬಾರದು,
ತಿಳಿದು
ಬದುಕಬೇಕು.!!
- ದ.ರಾ.ಬೇಂದ್ರೆ.💐

-


31 JAN 2022 AT 11:42

ಜಗಚ್ಚಕ್ಷುವಾದ ಮಿಹಿರನು 'ಉತ್ತರಾಯಣ'ದ ಕಡೆ
ಸಾಗಿ ಜಗವ 'ಬೆಳಗು'ತ ಹಕ್ಕಿಗಳು 'ಗರಿ'ಗೆದರಿ
'ಮುಕ್ತಕಂಠ'ದಿಂದ 'ಚೈತನ್ಯ'ದಿ 'ಸಖೀಗೀತೆ'ಯ
'ನಾದಲೀಲೆ'ಯಿಂದ 'ಶ್ರೀಮಾತೆ'ಯ ನೆನೆಯುತ್ತ
'ವಿನಯ'ದಿ 'ಉಯ್ಯಾಲೆ'ಯಲ್ಲಿ 'ಹಾಡುಪಾಡು'ತ
'ಮೇಘದೂತ'ನು ನಾಚುವಂತೆ 'ಗಂಗಾವತರಣಿ'ಸುವಂತೆ
'ಒಲವೆ ನಮ್ಮ ಬದುಕೆಂದು' ಸಾಹಿತ್ಯಕ್ಕೆ 'ನಮನ' ಸಲ್ಲಿಸಿ
ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ
ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ
ಹೇಳಿದ ಧೀಮಂತ ಕವಿ, ಉತ್ತಮ‌ ವಾಗ್ಮಿ
ಜ್ಞಾನಪೀಠ ಪ್ರಶಸ್ತಿಯ ಪುರಸ್ಕೃತರಾದ
ವರಕವಿ ದ.ರಾ.‌ಬೇಂದ್ರೆಯವರ ಜನುಮ
*************************
ದಿನದ ಶುಭಾಶಯಗಳು.
💐💐💐💐💐💐💐💐💐💐💐

-