Vನಾಯಕ ಮುದಡಗಿ   (\/ನಾಯಕ ಮುದಡಗಿ✍🏻)
165 Followers · 105 Following

read more
Joined 8 December 2018


read more
Joined 8 December 2018

ತಿಳಿಯದೇ ತಿಳಿಸಿದೆ
ತಡವಾಗಿ ತಿರಸ್ಕರಿಸಿ
ತಾನು ತಾನಾಗಿ
ತನ್ನವನ ತಾರೆಯಾಗಿ
ತಾನಾಗಿಯೆ ತಿಳಿಸಿದಳು
ನೀ ನನ್ನವ(ನಲ್ಲ)ವೆಂದು......

-



ಏನೆಂದು ಹೇಳಲಿ ಅವಳ ಈ ಪ್ರಶ್ನೆಗೆ
ಒಲವ ನರಿಯದ ರಂಗಿನ ಸೆರಗಿಗೆ
ಬಣ್ಣ ಯಾವುದಾದರೇನು
ಋಣಿಯಾಗಿರಬೇಕು ಆಕೆಯ ಅಂದದ ಸಿರಿಗೆ
ಕಾಮನಬಿಲ್ಲು ಆಕಾಶದ ಹೊಳಪನು ಹೆಚ್ಚಿಸಲು
ದೀಪದ ಕಾಂತಿ ಒಲವಿನ ಅಂಗಳದಲ್ಲಿ ಚೆಲ್ಲಲು
ಹಸಿರು ಸಿರಿಯ ಒಡತಿ ಇವಳು
ಚಂದನ ವನದ ಗಿರಿಮಗಳು
ಕನ್ನಡಾಂಬೆಯ ಸಿರಿ ಇವಳು...!!!

-



ಬರಿ ಕಣ್ಣಿನಲ್ಲಿ ನನ್ನ ನೋಡಿ
ಮಾತಾಡದೆ ಮೌನದಿ ಕಾಡಿ
ಆ ನಿನ್ನ ಅಂದದ ಮೋಡಿ
ನೀ ಮಾಡಿದೆ ನನ್ನ ಶರಾಭಿ

-



ಮಗುವಿನ ನಗುವಿನ ಒಡತಿ
ಧರಿಸಿಹಳು ಹೊಂಬಿಸಿಲ ಸೂಸುವ ಮೂಗುತಿ
ಸೆರಗಿನಲಿ ಸರೆಯುತ್ತಿದೆ ಯೌವ್ವನದ ಭೀತಿ
ಅದು ಕಂಡು ನಾಚುತಿದೆ ಮೌನವು ಬಾಚಿ
ಮನ ಬಯಸಿದೆ ಕ್ಷಮೆಯಾಚಿ
ಒಡೆದ ಪ್ರೇಮದ ಓಲವ ಸವ್ಯಸಾಚಿ
ಕಾಲವು ಕೂಡಬೇಕಿದೆ ಯುವತಿ
ನೀ ತಿಳಿಯದೆ ಹೋದೆ ನಿಜ ಸಂಗತಿ..

-



ರಾತ್ರಿಯೇಕೆ ಮಾಯವಾಗುತ್ತಿದೆ ನೀ ಕರೆ ಮಾಡಿದಾಗ
ಬಾನ ಚಂದಿರ ಮುನಿಸಿಕೊಂಡಿಹನು ಇರಳು ಕಾಣದಾಗ
ಮಾತಿನಲಿ ಮೌನದ ಸದ್ದನ್ನು ಹೇಳಕೊಡಲೆನಗೆ
ಹುಃ - ಹುಃ ಎಂದೇ ಬಡಿದೆಬ್ಬಿಸಿದೆಳ್ ಒಮ್ಮೆಲೇ ಎನಗೆ
ಸೋಲು ಗೆಲುವಿನ ಬಳ್ಳಿಯ ಆಸರೆಯಾದೆ ನನಗೆ
ನನ್ನ ಜೀವನ ಸಾರದ ಹೂ- ಬಳ್ಳಿ ಎರವಲು ನಿನಗೆ..

-



ಲತ್ತೆಯ ವ್ಯಥೆಯ ಕಥೆಯಲ್ಲಿ
ಬೆಳಕಿನ ಕೂಸು ಕೂಗುತ್ತಿತ್ತು,
ಕಾರ್ಮೋಡ ಕಾಡುವ ಹಾದಿಯಲ್ಲಿ
ಹನಿ ಕವನ ಬೀಗುತ್ತಿತ್ತು,
ಅವಳ ಅಂತರಂಗದ ಮಂಚದಲ್ಲಿ
ಅವನ ಪ್ರೀತಿಯ ಹಸಿಗೂಸು ಆಡುತ್ತಿತ್ತು,
ಬಯಲಿನ ಭಾವನೆಯ ಬಂಧದಲಿ ಇರುವವನಿಗೆ
ಅವಳ ಭಾವಚಿತ್ರ ಬೇಡವೆನಿಸಿತು ... !!!

-



ಕಿಚ್ಚಹತ್ತಿದೆ ಮಳೆಗಾಳಿಯಲಿ
ಬೆಚ್ಚಿಬಿದ್ದಿದೆ ನಿನ್ನಯ ನೆನಪಿನಲಿ
ಅಚ್ಚಾಗಿರುವ ಈ ಮನದಲಿ
ಹೆಚ್ಚಾಗುತ್ತಿದೆ ನಿನ್ನ ಅಮಲಿನಲಿ
ಮೆಚ್ಚಿ ಚುಚ್ಚುತ್ತಿದೆ ನೀನಿಲ್ಲದ ಈ ರಾತ್ರಿಯಲ್ಲಿ...

-



ಶಕ್ತಿ ಯುಕ್ತಿ ಮುಕ್ತಿದಾತೆ
ದುಷ್ಟ ಸಂಹಾರ ಮಾಡುವ ಜಗನ್ಮಾತೆ
ಮಾತೃ ಹೃದಯಿಯ ಮಂಗಳದಾತೆ
ಕೈ ಹಿಡಿದು ನಡೆಸುವ ಸುವಿದಾತೆ

ಜಗದ ರಕ್ಷಣೆ ಮಾಡುವ ನಿನಗೆ
ನಿನ್ನ ನೆಲದಲ್ಲಿಯೇ ರಕ್ಷಣೆಯಿಲ್ಲದಾಯಿತೆ
ಪ್ರೀತಿ ಮಮತೆಯ ಸಹಕಾರ ಮೂರ್ತಿಗೆ
ಇಂದು ತನ್ನವರ ಸಹಕಾರವಿಲ್ಲದಾಯಿತೆ

ಜಾತಿ ಮತ ಭೇದಗಳ ಬೇಲಿಯ ಬಿಟ್ಟು
ಸ್ವತಂತ್ರ ವೀರವನತೆಯ ಶಕ್ತಿಯ ತೊಟ್ಟು
ಮತ್ತೆ ಮೈದವಡಿ ರಣಚಂಡಿಯಂತೆ
ಸಂಸಾರ ಸಾಗರದಲ್ಲಿ ಅಡಗಿರುವ ಸುನಾಮಿಯಂತೆ

ಎದ್ದು ಬಾ ತಾಯೆ...!
ಅಬಲೆಯಲ್ಲಾ ನೀನು
ಆಹಾ ...! ಭಲೆಯನ್ನುವ ಹಾಗೆ ಪುಟಿದೆದ್ದು ಬಾ !!

-



ಶಕ್ತಿ ಯುಕ್ತಿ ಮುಕ್ತಿದಾತೆ
ದುಷ್ಟ ಸಂಹಾರ ಮಾಡುವ ಜಗನ್ಮಾತೆ |
ಮಾತೃ ಹೃದಯಿಯ ಮಂಗಳದಾತೆ
ಕೈ ಹಿಡಿದು ನಡೆಸುವ ಸುವಿದಾತೆ ||

ಜಗದ ರಕ್ಷಣೆ ಮಾಡುವ ನಿನಗೆ
ನಿನ್ನ ನೆಲದಲ್ಲಿಯೇ ರಕ್ಷಣೆಯಿಲ್ಲದಾಯಿತೆ |
ಪ್ರೀತಿ ಮಮತೆಯ ಸಹಕಾರ ಮೂರ್ತಿಗೆ
ಇಂದು ತನ್ನವರ ಸಹಕಾರವಿಲ್ಲದೆ ಆಯಿತೆ ||

-



ಅವಳೆಂದರೆ 
ಮಗುವಿನ ಒಲವ ಸುರಿವ ಬೆಳದಿಂಗಳು 
ಮಾತಿನಲ್ಲಿ ಮನ ಕಲಕುವ ಕಲೆ ಇರುವವಳು 
ಮಂಗನಾಟವ ಮೀರಿಸುವ ತುಂಟತನದವಳು 
ಮೌನವನ್ನ ಅರಸಿ ಕೂಗಿ ಕರೆಯುವವಳು 
ಮನದ ಕಿಟಕಿಯಿಂದ ಸೂಸುವ ರಂಗಿನವಳು 
ಮನಸೆನ್ನದೆ ಕನಸೆನ್ನದೆ ಹಗಲೆನ್ನದೇ ಇರುಳೆನ್ನದೆ
ಕಾಡುತ್ತಿರುವವಳು......!!!

-


Fetching Vನಾಯಕ ಮುದಡಗಿ Quotes