ಒಲವ ಪಾಠ ಶಾಲೆಯಲ್ಲಿ ಶಿಸ್ತಿನ ಶಿಕ್ಷಕನವನು,
ತರಲೆ ಮಾಡುವ ಪೆದ್ದು ವಿದ್ಯಾರ್ಥಿನಿ ನಾನು,
ಬೆರಳ ಹಿಡಿದು ತಿದ್ದಿ ತೀಡಿ ಕಲಿಸುವವನು ಅವನು,
ಮುದ್ದು ಮಾಡಲೆಂದೆ ಹುಸಿ ತಪ್ಪುಗಳ ಮಾಡುವವಳು ನಾನು,
ಕಯ್ಯಚಾಚಿ ಬಾಚಿ ತಬ್ಬಿ ಬದುಕಿನ ಹೊಸ ಅಧ್ಯಯದ ತರಗತಿಗೆ ಮಾಸ್ಟರ್ ಅವನು, ಆಸೇ ಕಂಗಳಲ್ಲಿ ಕಲಿಯಲು ನಿಂತಿರುವ ಅವನ ಸ್ಟೂಡೆಂಟ್ ನಾನು❤️
-
ಮಗುವಾಗಿ ನೀನು ಮಡಿಲಾಗಿ ನಾನು,😘
ಮಂದ ಬೆಳಕಿನಂತ ಬದುಕಿನಲ್ಲಿ ಮಂದಹಾಸ
ಬೀರು ನೀ,❤️
ಹೆಗಲಾಗಿ ನಾನು ಪುಟ್ಟ ಕೂಸಾಗಿ ನೀನು,😍
ಹೆದರದಿರು ನೀ ಬೆದರುಗೊಂಬೆಯಂತಾಗದಿರು
ಬೊಗಸೆಯೊಳ್ಳಿಟ್ಟು ಕಾಪಾಡುವೆ ನಾ,🤗
ಬಂಗಾರ ನೀನು ಭಯವೇಕೆ ಇನ್ನು ನೆರಳಂತೆ
ನಿನ್ನ ಕಾಯುವೆನು ಚಿನ್ನ😚
ಅಳುಕದಿರು ನೀ ಅಂಜದಿರು ನೀ ಬಿಟ್ಟುಕೊಡಲಾರೆ
ನಾ ಬಿಟ್ಟು ನಡಿಲಾರೆ,ಒಂಟಿ ಮಾಡಲಾರೆ,
ಭಯ ಪಡದಿರು ನೀ,🥰
ಕಂದಮ್ಮ ನೀ ನನಗೆ, ಅಮ್ಮನಾಗುವೇ ನಾ ನಿನಗೆ,
ಒಂಟಿಯಲ್ಲ ಎಂದಿಗೂ, ಕಾಯುವೆನು,
ಕಾಪಾಡುವೆನು ಎಂದೆಂದಿಗೂ.😘-
ಕೈ ಮುಗಿದು ಬೇಡುವೆನು ಭಗವಂತ,😍
ಪ್ರೀತಿ ಕೊಟ್ಟ ಜೀವವದು ಕೊಡದಿರು ಅವಳಿಗಿನ್ಯಾವ
ನೋವ,😘
ಹಸುಗೂಸು ಅವಳಿನ್ನು, ಪೆಟ್ಟಾದರೆ ಸಹಿಸೇನೂ
ಪಾಪ ಮಗು ಅಂತವಳು,🤗
ಕೊಟ್ಟು ಬಿಡು ನನ್ನೆಲ್ಲ ಸಂತಸವನ್ನು ಅವಳಿಗೆ,
ಅವಳಷ್ಟು ನೋವುಗಳು ನನಗಷ್ಟೇ ಉಳಿಸಿಡು,🩵
ಕಂದಮ್ಮ ಅವಳು ಕೊಡದಿರು ನೀ ಕಷ್ಟಗಳ, ಬರೀ
ನಲಿವಿನ ಹೂವ್ ಬರೆದಿಡು ಅವಳೆಸರಿಗೊಂದಿಷ್ಟು
ಸಾಕಷ್ಟೆ ನನಗೆ ಬೇಡೆನು ಮತ್ತೇನನು 😊-
ಮುಂಜಾನೆಯ ಮಂಪರಿನಲ್ಲಿ ಹಿತವಾದ ನಿನ್ನೆದೆ ಬಡಿತದ ನಡುವೆ, ನೀನುಸುರುವ ಬಿಸಿ ಉಸಿರ
ಶಾಖದಿ ಪುಳಕಗೊಳ್ಳುವ ನನ್ ಮನಕ್ಕೆ, ಕನವರಿಕೆಯ ಕದಲಿಕೆಯಲ್ಲೂ ನನ್ನೆಸರ ಪಿಸುಗುಟ್ಟುವ ಪರಿಯೇ ಮನಮೋಹಕ😘,
ನಿದ್ದೆಯಲ್ಲೂ ಬಿಗಿದಪ್ಪಿ ನಸುನಗುವ ರೀತಿಯೇ
ರೋಮಾಂಚಕ 😍-
ಸುಮ್ಮನೆ ಸನಿಹ ಬಂದು ಕೂಡು
ಹಾಗೊಮ್ಮೆ ಕಯ್ಯ ಚಾಚಿ ನೋಡು,
ಮುನಿಸ ಮರೆತು ತೋಳ ಸೇರಿ
ಅಪ್ಪಿ ಕೂಡುವೆ ಸಣ್ಣ ಮಗುವಿನಂತೆ,
ನಿನ್ನ ಬೆಚ್ಚನೆಯ ಎದೆ ಗೂಡಲ್ಲಿ ನಾ ಗುಬ್ಬಿ
ಆಗುವೆ ಅರೆಕ್ಷಣ ಜಗವ ಮರೆವೆ,
ಮೈ ಕೊರೆವ ಚಳಿಯಲ್ಲಿ ಒಂದೊಂದೇ
ಗುಟುಕು ಕಾಫೀ ಹೀರಿದಂತೆ, ಬದುಕಿನ
ಪ್ರತಿ ಘಟ್ಟವನ್ನು ಗುಟುಕರಿಸಿ ಸವಿಯುವೆ
ನಿನ್ನ ಬಿಗಿಯಾದ ಅಪ್ಪುಗೆಯಲ್ಲಿ ನಾ
ಶಾಶ್ವತ ಬಂದಿಯಾಗಿ ಬಿಡುವೆ.-
ಅವನು❤️
ಅರ್ಧ ಓದಿ ಮುಚ್ಚಿಟ್ಟ ಹೊಸ ಪುಸ್ತಕದಂತವನು😍,
ಬರೆಯದೆ ಉಳಿದ ಮೊದಲ ಪ್ರೇಮ ಪತ್ರದಂತವನು😘,
ನಸುಕಿನ ಜಾವದಿ ಸುಮ್ಮನೆ ಬಂದು ಕೆಣಕಿ
ಹೋದ ಅಸ್ಪಷ್ಟ ಕನಸಿನಂತವನು🤗,
ಎಂದೋ ಎಡವಿ ಬಿದ್ದ ಹೆಬ್ಬರಳ ಗಾಯದ
ಗುರುತಿನಂತವನು🩵.
ಶಾಲೆಯಲ್ಲಿ ಕಂಠಪಾಠ ಮಾಡಿ ಮರೆತೋದ
ಇಷ್ಟದ ಪದ್ಯದಂತವನು.
ಸದಾ ಎದೆಯಲ್ಲಿ ಗುನುಗೋ ಹಳೆಯ ಹಾಡಿನ
ಹಿತವಾದ ರಾಗದಂತವನು🤌.-
ನೀ ಸನಿಹವಿರದಿರೆ ದೊಡ್ಡ ಗುಂಪಿನಲ್ಲೂ
ಒಬ್ಬೊ0ಟಿ ಮೂಕಿ ನಾ,
ನೀ ಸನಿಹವಿದ್ದರೆ ಹಸುವ ಕಂಡು ಅಂಬಾ ಎನ್ನುತ ಕುಣಿದಾಡುವ ಕರುವಿನ ಹಾಗೆ ನಾ.-
ಪ್ರೀತಿಗೊಬ್ರು ಮದ್ವೆಗೊಬ್ರು,
ಕಷ್ಟಕ್ಕೊಬ್ರು ಸುಖಕ್ಕೆ ಇನ್ನೊಬ್ರು,
ಮನಸಲ್ಲೊಬ್ರು ಮಂಟಪದಲ್ಲಿ ಮತ್ತೊಬ್ರು,
ಊರೆಲ್ಲ ಕೈ ಹಿಡಿದು ಸುತ್ತೋಕೊಬ್ರು,
ಸಪ್ತಪದಿ ತುಳಿಯೋಕೆ ಮತ್ತೊಬ್ರು,
ಕಣ್ಣೀರ್ ಹಾಕೋಕೆ ಒಬ್ರಾದ್ರೆ ಕರಿಮಣಿಗೆ ಮತ್ತೊಬ್ರು,
ಅಂತ ಒಬ್ರಿಗ್ ವಂಚನೆ ಮಾಡಿ ಮತ್ತೊಬ್ಬರ
ಜೊತೆ ಜೀವನ ಮಾಡೋರಿಗೆ ಏನ್ ಮಾಡ್ಬೇಕು??-