ಹೊಸ ವರುಷದ ದಿನವು
ಹೊಸ ಋತುವಿನ ಚೆಲುವು
ಮನಕೆ ಮೋಹಕತೆಯ ಆನಂದವು
ಬೇವು ಮಾವುಗಳ ಘಮವು.!
ಶ್ರೀ ವಿಶ್ವಾವಸು ನಾಮ ಸಂವತ್ಸರವು
ಎಲ್ಲರಿಗೂ ಶುಭವನ್ನು ತರಲೆಂದು
ಹೊಸ ವರ್ಷದ
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.-
ನಾನು ಕನ್ನಡತಿ.Hash tag #shruthishaiva
ಮಸ್ತಕದಲ್ಲಿ ತುಂಬಿದೆ ಜ್ಞಾನ... read more
ಎಲ್ಲಾ ಪ್ರೀತಿಯ
ಸಹೋದರರಿಗೂ
ಪವಿತ್ರ ಬಂಧವಾದ
ರಕ್ಷಾ ಬಂಧನದ
ಹಾರ್ದಿಕ
ಶುಭಾಶಯಗಳು.-
ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನ ಶಲಾಕಾಯಾ|
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರುವೇ ನಮಃ||
"ಗುರು"ವೆಂದರೆ ಅಂಧಕಾರವನ್ನು ಅಳಿಸಿ
ಸುಜ್ಞಾನದ ದೀವಿಗೆಯ ನೀಡುವ ದಿನಪ
ಬರಿದಾದ ಮಸ್ತಕಕ್ಕೆ ಅಕ್ಷರಗಳ ಬೀಜಬಿತ್ತಿ
ಸದ್ಗುಣವೆಂಬ ನೀರೆರೆದು ಗುರಿಯ ಚಿಗುರಿಸಿ
ಅರಿವಿನ ಹಸಿವಿಗೆ ಜ್ಞಾನಾಮೃತವ ಧಾರೆ ಎರೆದು
ಸರಿ ತಪ್ಪುಗಳ ತಿದ್ದಿ ಮಾನವೀಯ ಮೌಲ್ಯ ಕಲಿಸಿ
ಸನ್ಮಾರ್ಗದೆಡೆಗೆ ಕರೆದೊಯ್ಯುವರು ಸದ್ಗುರುವಾಗಿ
ಸೋತಾಗ ಪ್ರೋತ್ಸಾಹಿಸಿ ಗೆದ್ದಾಗ ಬೆನ್ನು ತಟ್ಟಿ
ಉನ್ನತ ಸ್ಥಾನಕ್ಕೇರಿಸಿ ತನ್ನೊಳಗೆ ಸಂತಸ ಪಡುವ
ಏಕೈಕ ಹೃದಯವೆಂದರೆ ಅದು ಗುರು ಮಾತ್ರ
ಈ ನಿಸ್ವಾರ್ಥ ಸೇವೆಗೈಯುವ ಗುರುವೃಂದಕ್ಕೆ
ಭಕ್ತಿ ಪೂರ್ವಕ ನಮನಗಳು.🙏🙏🙏
ಎಲ್ಲಾ ಗುರುಗಳಿಗೂ ಗುರುಪೂರ್ಣಿಮೆಯ
ಶುಭಾಶಯಗಳು. 💐💐
_✍️ಶೃತಿ ಶೈವ
-
ಬದುಕಿಗೊಂದು ಬೇಕು ಸಾಧಿಸಲು ನಿಶ್ಚಿತ ಗುರಿ,
ಗುರಿ ಮುಟ್ಟಲು ನಿರ್ಣಯಿಸಬೇಕು ಸುಗಮ ದಾರಿ.-
ಅಪ್ಪ ಎನ್ನುವ ಎರಡಕ್ಷರ ಮನದ ಭಾವದ ಮಿಡಿತದ ರೂಪ,
ತ್ಯಾಗದ ಹಿಂದಿನ ನಿಸ್ವಾರ್ಥ ಪ್ರೇಮದ ಮೂರ್ತಿಯ ಸ್ವರೂಪ.-
ವರ್ಷೆಯ ಸಿಂಚನಕ್ಕೆ ಪ್ರೀತಿಯಿಂದ ಕಾದು ಬಸವಳಿದ ಅವನಿಯ ತುಡಿತ,
ಮಳೆಯಲಿ ಮಿಂದೆಂದು ನಲಿದಾಡಿದ ಖಗ- ಮೃಗಗಳ ಸಂತಸದ ಕುಣಿತ.-
ನೆನೆಗುದಿಗೆ ಬಿದ್ದ ನೆನಪು
ಮತ್ತೆ ಮನಸ್ಸಿನ ಬಾಗಿಲು
ತಟ್ಟಿದೆ ಹೊಸದಾಗಿ ಲಗ್ಗೆಇಡಲು.-
ಕಾರ್ಯ ನಿರ್ವಹಣೆ
ಉತ್ತಮವಾಗಿರಬೇಕು
ದೇಶವನ್ನಾಳುವ ದೊರೆ
ಪ್ರಜ್ಞಾವಂತನಾಗಿ ರಾಷ್ಟ್ರದ
ಅಭಿವೃದ್ಧಿಗೆ ಸದಾ ಚಿಂತಿಸಿ
ಪ್ರಜೆಗಳ ಹಿತರಕ್ಷಣೆಗೆ ಶ್ರಮಿಸಬೇಕು.
ಎಲ್ಲಾ ಕ್ಷೇತ್ರಗಳಲ್ಲೂ ಸೂಕ್ತ
ಯೋಜನೆಗಳ ಜಾರಿಗೆ ತಂದು
ಅಭಿವೃದ್ಧಿಪಡಿಸಬೇಕು.-
ಸೋಲು ಗೆಲುವಿನ ಓಟದಲ್ಲಿ
ವಿಜಯದ ಮಾಲೆಧರಿಸಿ ಭಾರತವನ್ನಾಳಲು ಸನ್ನದ್ಧರಾಗಬೇಕು ಉತ್ಕೃಷ್ಟ ದೊರೆ.-
ಜೀವನವೆಂಬ ಓಟದಲ್ಲಿ ಬದುಕಲು ಪಡಬೇಕು ಪ್ರಯಾಸ,
ಸಂಕಷ್ಟಗಳ ನಿವಾರಣೆಗೆ ಹೋರಾಡಬೇಕು ಅವಿರತ ಪ್ರಯತ್ನ.-