ರೆಡಿಯಾಗೇನೋ ಬಂದ್ಬಿಟ್ಟೆ
ಎಲ್ಲಿಗಂತ ನಾನೂ ಕೇಳಲಿಲ್ಲ
ಅವನೂ ಹೇಳಲಿಲ್ಲ...?-
ವಯಕ್ತಿಕ ಬದುಕಾದ್ರು ಸರಿ ಸಾರ್ವಜನಿಕ ಬದುಕಾದ್ರು ಸರಿ ಅಲ್ಲಿ ಒಬ್ಬ ವ್ಯಕ್ತಿ ತುಂಬಾ ಮುಖ್ಯ ಪಾತ್ರ ವಹಿಸ್ತಾನೆ.
ಜೊತೆಗಿರುವ ವ್ಯಕ್ತಿಯ ಏಳು _ಬಿಳು ಹಾಗೆ ದೇಶದ ಉನ್ನತಿ & ಅವನತಿ.-
ಕಿಟಕಿ ತೆಗ್ದು ಬಿಡು ಇಲ್ಲಾ ಬಾಗ್ಲು ತೆಗಿ
ಕತ್ತಲು ತಾನಾಗೇ ಹೋಗುತ್ತೆ.
✨✨🍃🏹✨✨✨🍃🏹🍃🏹
ಹಳೇದನ್ನ ಮರ್ತು ಬಿಡು,
ಹೊಸದನ್ನ ಸ್ವಾಗತಿಸು.-
ಮುಚ್ಚಿದ ಕಂಗಳಲ್ಲಿ ಕಣ್ತುಂಬಿಕೊಂಡೆ ನಿನ್ನನ್ನ ಅಷ್ಟೇ,
ನೀ......!!¡¡
ಬಿಟ್ಟಹೋದದ್ದು ಗೊತ್ತಾಗದಂತೆ
ಬಂಧಿಸಿಬಿಟ್ಟಿವೆ ಈ ನನ್ನ ಕಂಗಳು ಕೃಷ್ಣಾ...!!-
ಬಂದಾಗಿದೆ ನೆನಪಿನೂರಿಗೆ,
ನಾವಿಬ್ರು ಸುತ್ತಾಡಿದ ಸುಂದರ ಊರುಲ್ಲಿ,
ಶುಭ್ರಾವಾದ ಗಾಳಿಲಿ ಗಂಧದ ಪರಿಮಳವಿತ್ತು, ಸ್ವಚ್ಚoದ ಆಕಾಶದಲ್ಲಿ ಮೋಡಗಳ ಓಟವಿತ್ತು ,ಮೇಲಾಗಿ ನಾನೂ ನೀನೂ ಹೆಜ್ಜೆ ಮೇಲೆ ಹೆಜ್ಜೆ ಇಟ್ಟ ಕಾಲ್ಗೆಜ್ಜೆಯ ಸಪ್ಪಳವಿತ್ತು, ಅವೆಲ್ಲವನ್ನು ಈಗ ನೆನಸ್ಕೊಬೇಕಷ್ಟೆ.-
ನಮ್ಮ...
ಪ್ರಯತ್ನನ ನಾವೂ ಬಿಡಬಾರ್ದು ಅಷ್ಟೇ.
🌈
🌈
🌈
ಬಿದ್ದರೇ ಗೊತ್ತಲ್ಲಾ ಹಾಳಿಗೊಂದು ಕಲ್ಲು.-
ಕಾಯ್ತಿದೆ ಖಾಲಿ ಬೆಂಚು ಜೊತೆಗೆ ಹಸುರೆಲೇ ಗೆಳೆಯ,
ಬರಬಾರದೇ ಬರಗಾಲ ಶುರುವಾಗೋದ್ರೊಳಗೆ.-
ಮೊದಲ_ಮಳೆ ☔✨
ಶುಭ್ರಾವಾದ ಆಕಾಶದಲ್ಲಿ
ಆಕರ್ಷಣೆ ಆಗಿ ಕಂಡದ್ದು ಅಂದ್ರೇ
ಅದೂ ನೀನೇನೆ.! ಬಾಕಿ ಎಲ್ಲಾನೂ ಖಾಲಿ_ಖಾಲಿ
ಹೃದಯದಲಿ ಬಚ್ಚಿಟ್ಟ ಕನಸುಗಳೆಲ್ಲವೂ ಜಾಲಿ_ಜಾಲಿ.-
ಬಂಧ ನಿನ್ನೊಂದಿಗೆನೆ
ಕಾರಣ ನೂರಿವೆ ಹೇಳ್ಳಾ..?
ನನ್ನವರೇ ಸಾವಿರಾರು ಸಂಬಂಧಿಕರು ಇದ್ರು
ನನ್ನವ್ವ ಇವರೇ ನಿನ್ನವರು ಅಂತ ಕಣ್ಣು ಮುಚ್ಚಿದ್ರು
ಆದರೇಕೋ ನಿನ್ನ ನೆನಪೇ ಕಾಡ್ತಿದೆ ಗೆಳೆಯ...?
ಏನ್ ಮಾಡ್ಲಿ...?
ಮರೆಯಾಗಿ
ಅತ್ತುಬಿಡಲೇ.?
ನೀ ಸಿಗಲ್ಲ ಅಂತ
ಸತ್ತುಬಿಡಲೇ..?-
ಬಾಲ್ಯದ ದಿನಗಳಲ್ಲಿ ನೀನೂ_ನಾನೂ
ಇಷ್ಟೇ ಗೊತ್ತಿತ್ತು ಅದೇ ಚೆಂದವಿತ್ತು, ಯಾರನ್ನೂ
ಮೆಚ್ಚಿಸುವ, ಜವಾಬ್ದಾರಿ ಇರದ ಬದುಕಿತ್ತು ಅದೇ
ಚೆಂದವಿತ್ತು,ಈಗಲೂ ಟೈಂ ಟ್ರಾವಲರ್ ಇದ್ದರೇ ಅಲ್ಲಿಗೆ ಹೋಗ ಬಯಸುವೆ ನಿನ್ನೊಂದಿಗೆ ಅಷ್ಟೇ 🙌ಬೇರೇನೂ ಬೇಡಾ.-