ಹಣೆಯಲ್ಲಿ ಬರೆಯದೇ ಇರೋ ಅವಳನ್ನ
ಹೃದಯದಿ ನಾ ಎಷ್ಟು ಪ್ರೀತಿಸಿದರೇನು ?
ನನ್ನ ನೆನಪೇ ಅವಳಲ್ಲಿ ಇಲ್ಲದಿರುವಾಗ
ನಾ ಅವಳ ಮೇಲೆ ಕಾದಂಬರಿಗಳ ಬರೆದರೇನು ?
ಸತ್ತ ಹೆಣಕೆ ಅತ್ತರೇನು
ಅದು ಎದ್ದು ನಮ್ಮ ಕಣ್ಣೀರ ಒರೆಸುವುದೇ ?
ಹರಿದ ಚಪ್ಪಲಿಗೆ ಚಿನ್ನದ ಹೊಲಿಗೆ ಹಾಕಿಸಿದರೇನು
ತಲೆಮೇಲೆ ಇಟ್ಟು ತಿರುಗಲು ಅದು
ಯೋಗ್ಯವಾಗುವುದೇ ?-
ಹಿಂಗ್ಯಾಕ ಗೆಳತಿ ನಿನ ನೆನಪಗಳು ?
ತಂಪೋತ್ತಿನ್ಯಾಗ ಬಿಸಿಲ ತರಿಸ್ತಾವ
ಬಿಸಿಲೊತ್ತಿನ್ಯಾಗ ಉರಿಹಚ್ಚತಾವ
ಚಂದಾಗಿ ಇರುವಂಗ ನಾಟಕ ಆಡಸ್ತಾವ
ನಾಟಕ ಆಡುವಾಗ ಅಳು ಬರಸ್ತಾವ
ಹಿಂಗ್ಯಾಕ ಗೆಳತಿ ನಿನ ನೆನಪಗಳು ?-
ನಿನ್ನ ನೆನಪು ತುಂಬಾ ಕಾಡಿದ
ಪ್ರತಿಬಾರಿಯೂ ನಾ ಅಳುವುದಿಲ್ಲ ,
ಕೆಲವೊಮ್ಮೆ ನನ್ನ ಅಕ್ಕಪಕ್ಕ ಜನರಿರುತ್ತಾರೆ.-
ನಂಗೊತ್ತು ಅದ್ಭುತ ಘಟನೆಗಳು
ಜಗತ್ತಿನಲ್ಲಿ ಪದೇಪದೇ ನಡೆಯೋದಿಲ್ಲ
ಅದರಲ್ಲಿ ಒಂದು,
ಅವಳು ನನ್ನ ಮತ್ತೆ ಪ್ರೀತಿಸುವುದು.-
ಪ್ರತಿ ಜನ್ಮದಲ್ಲೂ ನಿಮಗೆ
ಸ್ವರ್ಗವೇ ಸಿಗಬೇಕೆಂದರೆ
ಅದಕ್ಕಿರುವುದು ಒಂದೇ ದಾರಿ
ಈ ಜನ್ಮದಲ್ಲಿ
ನಿಮ್ಮ ತಂದೆ ತಾಯಿನ
ಚೆನ್ನಾಗಿ ನೋಡಿಕೊಳ್ಳುವುದು .-
ಪ್ರೀತಿನ ಪಡ್ಕೊಳೋ ತಾಗುತ್ತಿರುವುದು
ಯಶಸ್ಸಿಗೆ ಮಾತ್ರ ,
ಅದೃಷ್ಟದ್ದೆನಿದ್ದರೂ ಎರಡನೆಯ ಸ್ಥಾನ .-
ನಾವೇನು ಈಗ Lovers ಅಲ್ಲ
ಆಗಿದ್ದೆವು ಎನ್ನುವುದಕ್ಕೆ ಸಾಕ್ಷಿಯೂ ಇಲ್ಲ
ಅವಳನ್ನ ನಾ ಮರೆಯೋದು ಸುಲಭವಿಲ್ಲ
ನಂಗೊತ್ತು ಅವಳೆಂದೂ ನನ್ನ ನೆನೆದಿರೋದಿಲ್ಲ...-
ಸಾವಿಗೆ ಪ್ರಶ್ನೆ ಹಾಕುವಷ್ಟು
ಶಾಣೆ ಅದಾಳ
ಜಗತ್ತನ್ನೇ ಒಂದು ದಿನ ನಿಲ್ಲಿಸುವಷ್ಟು
ಚಂದ ಅದಾಳ
ಜಾಗ ಸಣ್ಣದಿದ್ರೂ ಹೃದಯದಾಗ
ಕುಂತು ಬಿಟ್ಟಾಳ
ಪ್ರಾಣನೇ ಕೊಡ್ತೀನ್ ಅಂದ್ರು
ನನ್ನ ಪ್ರೀತಿನ ಒದ್ದು ಹೋಗ್ಯಾಳ-