#ಅವ್ವ
ಗುಡಿಯಲ್ಲಿ ದೇವರಿದ್ದಾನೋ ಇಲ್ಲವೋ ಗೊತ್ತಿಲ್ಲ..
ಆದರೆ ನಿನ್ನ ನಗುವಿನಲ್ಲಂತೂ ಖಂಡಿತವಾಗಿಯೂ ದೇವರಿದ್ದಾನೆ.. 🌷
ಅದಕ್ಕಾಗಿಯೇ ನಾನು ದೇವರ ಗುಡಿಯ ಬದಲಿಗೆ
ನಿನ್ನಡಿಗಳಿಗೆ ಕೈ ಮುಗಿಯುತಿರುವೆ..!!🙏
ಸಾವಿನಲ್ಲೂ ಬದುಕಬೇಕೆನ್ನುವ ಸ್ಫೂರ್ತಿ ನೀನು..
ನೋವಿನಲ್ಲೂ ನಗಬೇಕೆನ್ನುವ ಮೂರ್ತಿ ನೀನು..
ನೊಂದ ಜೀವಕೆ ಹರುಷ ನೀಡುವ ಧಾತ್ರಿ ನೀನು..
ಎನ್ನ ಹೃದಯದಲಿ ನೀನಿರಲು ಅಜೇಯ ಸ್ಪರ್ಧಾರ್ಥಿ ನಾನು..!!🤗— % &-
#ಜವಾಬ್ದಾರಿ
ತನಗಲ್ಲದಿದ್ದರೂ ತನ್ನ ಆತ್ಮೀಯ
ವಿದ್ಯಾರ್ಥಿಗಳ ಉತ್ತಮ ಭವಿಷ್ಯದ
ಹಿತದೃಷ್ಟಿಯ ಸಲುವಾಗಿಯಾದರೂ
ಶಿಕ್ಷಕನಾದವನು ವಜ್ರಕ್ಕಿಂತಲೂ
ಕಠಿಣಹೃದಯಿಯಾಗುತ್ತಾನೆ
ಮತ್ತು ಅತ್ಯುತ್ತಮ ಆದರ್ಶಗಳನ್ನು
ಮೈಗೂಡಿಸಿಕೊಳ್ಳುತ್ತಾನೆ...!!!☺️-
#ಹೃದಯದ ಮಾತು
ಕಣ್ಣುಗಳಲ್ಲಿ ಅದ್ಭುತವಾದ ಕನಸುಗಳಿರಲಿ..😍
ಹೃದಯದಲ್ಲಿ ಸಾಧಿಸುವ ಅದಮ್ಯವಾದ ನಂಬಿಕೆಯಿರಲಿ.❤️
ನಿನ್ನ ವ್ಯಕ್ತಿತ್ವ ಜಗತ್ತಿನ ಎಲ್ಲರಲ್ಲೂ
ಸ್ನೇಹವನ್ನು ಕಾಣುತ್ತಿರಲಿ..🤝🏽😊
-
ಅಪರಿಚಿತ ತಾಣಗಳಲ್ಲಿ
ಅನಿರೀಕ್ಷಿತ ತಿರುವುಗಳ ಮೂಲಕ ನಡೆಸಿ..
ಅಸಾಧಾರಣ ಪ್ರವೃತ್ತಿಯನ್ನು ರೂಢಿಸಿಕೊಳ್ಳಲು
ಅಸಾಧ್ಯವನ್ನೂ ಸಾಧ್ಯವಾಗಿಸುವ ದಿಸೆಯಲ್ಲಿ
ಅಗಣಿತ ಶಕ್ತಿಗಳನ್ನು ಎನಗೆ ನೀಡಿ..
ಅದ್ಭುತ ವ್ಯಕ್ತಿತ್ವವನ್ನು ಎನ್ನಲಿ ಸೃಷ್ಟಿಸಿದ
ಅದ್ವಿತೀಯ ಪರಬ್ರಹ್ಮನು
ಮತ್ತೊಂದು ವರ್ಷವನ್ನು ಬದುಕೆಂದು
ಎನಗೆ ಗುರಿಗಳನ್ನು ನೀಡಿದ್ದಾನೆ...
ಅಂತಹ ಸೃಷ್ಟಿಕರ್ತನಿಗೆ ಎನ್ನ ಅನಂತ ಧನ್ಯವಾದಗಳು.🙏😀-
ದ.ರಾ.ಬೇಂದ್ರೆ
**********
ರಸವೇ ಜೀವನ
ವಿರಸವೇ ಮರಣ
ಎಂದುಸುರಿದೀ ಕವಿಮನ
ಕಬ್ಬಿಗರಿಗದು ನಂದನವನ!!೧!!
ಕಾವ್ಯದೀ ಜಗವೆಲ್ಲ ಮಲಗಿರಲವನೊಬ್ಬನೆದ್ದ
ಎಂದ್ಹಾಡಿ ಕುಣಿದವನೀತ ಕವಿಮನದ ಸಿದ್ಧ !!೨!!
ಭಾವಶರಧಿಯೊಳೀಜಿದ ಕಾವ್ಯಕುಲದ ಬುದ್ದ
ಭಾವಗಾನದಿಂದಲೇ ಇವ ಜನಮನ ಗೆದ್ದ !!೩!!-
ಲಕ್ಷ್ಮಣ ಸರ್....
YQನಲಿ ನೀವೊಂದು ವಿಚಾರಗಳ ಒರತೆ !
ಅದನೋದುತ್ತಿದ್ದರೆ ನನಗಾಗದು ಭಾವನೆಗಳ ಕೊರತೆ !!
👍👍😃😃😃👍👍
ಹೀಗೆಯೇ ಸದಾಕಾಲ...
ನಿಮ್ಮ ಬರಹದ ದೀಪ ಉರಿಯುತಿರಲಿ..
ಹಾಸ್ಯದ ಬೆಳಕನು YQನಲಿ ಹೊಮ್ಮಿಸುತಿರಲಿ..
ನಿಮ್ಮ ಪುಣ್ಯದ ದೀಪದ ಬೆಳಕಲಿ
ಈ ಜಗವು ನಲಿಯುತಿರಲಿ ಎಂದು ಹಾರೈಸುವೆ...!
😊😊👍👍
#1811 ಬರಹಗಳನ್ನು ಪೂರೈಸಿರುವ
ನಿಮ್ಮ ಲೇಖನಿಯ ಜೀವಧಾರೆಗೆ, ಮೌನಧಾರೆ &
YQ ಮಿತ್ರರ ಪರವಾಗಿ ಅಭಿನಂದನೆಗಳು..
💐💐💐-
#ರಾಷ್ಟ್ರೀಯ ಯುವ ದಿನ #12-1-2022
ಮನುಷ್ಯ ತನ್ನ ವ್ಯಕ್ತಿಗತ ಸ್ವಾರ್ಥವನ್ನು ಪಕ್ಕಕ್ಕಿಟ್ಟು ರಾಷ್ಟ್ರಹಿತಕ್ಕಾಗಿ ದುಡಿದಾಗಲೇ, ದೇಶದ ಯುವಶಕ್ತಿಯಿಂದ ರಾಷ್ಟ್ರದ ಉನ್ನತಿಯನ್ನು ಸಾಧಿಸಲು ಸಾಧ್ಯ.
👍🏼🌱⏳🌳
Nation first then rest ...
🤝🏼🇮🇳😁🤗
ನನ್ನ ಆತ್ಮೀಯ ದೇಶಬಂಧುಗಳಿಗೆ ಸ್ವಾಮಿ ವಿವೇಕಾನಂದರ ಜನುಮ ದಿನದ ಶುಭಾಶಯಗಳು.. 💐💐🙏🏻🙏🏻❤️😊-