ನೂರು ಜನ್ಮದ ಪುಣ್ಯ ಫಲವು, ನಾ ಪಡೆದನು ಅಮ್ಮನೊಲವು;
(Read caption....👇...)-
ಮಗುವನ್ನು
ಮಮತೆಯಿಂದ
ಮುದ್ದಿಸಿ
ಮಾನವಿಯತೆಯನ್ನು
ಮನಕರ್ಥೈಸಿ
ಮನುಷ್ಯನನ್ನಾಗಿ
ಮಾರ್ಪಡಿಸುವವಳು
ಮಾತೆಯೊಬ್ಬಳೆ....
-
ಪ್ರೀತಿಯೆಂದರೆ ಕೇವಲ
ಕಾಮ ಎಂದು ತಿಳಿದವರಿಗೆ
ಒಂದು ಕಿವಿ ಮಾತು,
ತಾಯಿಯೆಂದರೆ,
ಕೇವಲ ಹೆರುವವಳಲ್ಲ.
ಅಗಣಿತ ವಾತ್ಸಲ್ಯಗಳ ಪರ್ವತ...
ಹಾಗೇನೇ ಪ್ರೀತಿ ಕೂಡ
ಪ್ರೀತಿಯೆಂದರೆ,
ಎಣಿಸಲಾಗದ ಭಾವನೆಗಳ ಸರಮಾಲೆ.
ವರ್ಣಿಸಲಾಗದ ಪದಗಳ ನಿಘಂಟು...
-
ಭಾರತಾಂಬೆಯ ಹೆಮ್ಮೆಯ ಪುತ್ರಿ
ಭುವನೇಶ್ವರಿಗೆ ನಮೋ ನಮೋಃ
(Read Caption)....👇👇👇👇👇
🌷🌷🌷🌷💐💐💐💐🌷🌷🌷🌷-
ತೋರಿಸುವಳು ನಮಗೆ ಜಗವ ಅವಳೇ ಅಮ್ಮ
ಸಹನೆಯ ಮೂರ್ತಿಯವಳು ಅವನಿಗೆ ಸಮ
ಮಾತೆಯ ಮನಸದು ಕೋಮಲ ಕುಸುಮ
ಅವಳನು ನಗಿಸಿದರೆ ಸಾರ್ಥಕ ಜನುಮ
ಜೊತೆಯಾಗಿ ಬರುವರವರು ತಂಗಿ, ಅಕ್ಕ
ಮಾಡದೇ ಬಿಡರವರು ಕೀಟಲೆ ಪಕ್ಕಾ
ಮದುವೆಯಾಗಿ ಹೋದರೂ ಮನೆಯ ಹೊರಗೆ
ಹರಸುತಲೇ ಇರುವರು ಮನಸಿನ ಒಳಗೆ
ಜೀವನದಲಿ ಬರುವಳಾಕೆ ಮಡದಿಯಾಗಿ
ಕಾಯುವಳು ಮನೆಗೌರವ ಕುಲವಧುವಾಗಿ
ಮನೆಯಲ್ಹುಟ್ಟೋ ಮಗಳು ಅವಳೇ ಪುಟ್ಟತಾಯಿ
ಕಳೆಯುವಳು ಮನದ ದುಗುಡ ಮಹಾಮಾಯಿ
ಅಮ್ಮ, ಮಗಳು, ಅಜ್ಜಿ, ಅವಳು, ಸೋದರಿಯಾಗಿ
ಇರುವಳೆಮ್ಮ ಜೀವನದಲಿ ಬೆನ್ನೆಲುಬಾಗಿ
ಕಷ್ಟಗಳ ಸೈರಿಸುವ ಶಕ್ತಿರೂಪಿಣಿ
ನಮನ ನಿತ್ಯ ಹೆಣ್ಣಿಗಾಕೆ ಸಹನೆಯಾ ಗಣಿ-
*ನನ್ನ 101ನೆ ಕವನ ನನ್ನ ತಾಯಿಗೆ ಸಮರ್ಪಣೆ *
ನಾನಾವ ಸಾಹಿತ್ಯ ಭಂಡಾರ ಪುಸ್ತಕ ಓದಿಲ್ಲ,
ನನಗಾವ ಸಾಹಿತಿಗಳ ಪರಿಚಯವೂ ಇಲ್ಲ,
ಆದರೂ ನನ್ನ ಕವನಗಳಿಗೆ ಅಂತ್ಯವಿಲ್ಲ,
#ದೈವೀ ಸ್ವರೂಪಿಯಂತಿರುವ ನನ್ನ ತಾಯಿಯೇ, ನನ್ನೆಲ್ಲ ಕವನಗಳಿಗೆ ಸ್ಫೂರ್ತಿ 🙏 #
ಅಂಬೆಗಾಲಿಡುವ ಮುನ್ನವೇ ಆಧ್ಯಾತ್ಮಿಕ ಸಸಿ ನೆಟ್ಟವಳು,
ಪುಟ್ಟ ಹೆಜ್ಜೆ ಇಡುವಾಗ ಕೈ ಹಿಡಿದು ನಡೆಸಿದವಳು ,
ಸ್ವಲ್ಪ ಬಾಲ್ಯತನ ಬಂದಾಗ ಬದುಕಿನ ಬದಲಾವಣೆಗಳ
ಭಾವಚಿತ್ರ ತೋರಿದವಳು,
ಸಮಾಜದ ರೀತಿ ನೀತಿಗಳ ಅರಿವು ಮೂಡಿಸಿದವಳು,
ಸ್ವಲ್ಪ ಪ್ರಾಯಕ್ಕೆ ಬಂದಾಗ ಪುರಾಣ ಪುಣ್ಯಕಥೆಗಳನ್ನ ಹೇಳಲಾರಂಭಿಸಿದವಳು,
ಜೀವನದಲ್ಲಿನ ಸರಿ ತಪ್ಪುಗಳ ಸಮದೂಗುವಿಕೆ ಹೇಗೆಂದು ಕಲಿಸಿದವಳು,
ಎಷ್ಟೇ ಕಷ್ಟಗಳಿರಲಿ ಗುರಿ ತಲುಪುವವರೆಗೂ ನಿಲ್ಲದಿರೆಂದು ಪ್ರೇರೇಪಿಸಿದವಳು,
ನಾನೂ ಎಡವಿದ್ದಲ್ಲಿ ತಿದ್ದಿ ಸರಿದಾರಿಗೆ ತಂದವಳು,
ನಾನು ನನ್ನದು ಎಂಬ ಅಹಂಕಾರ ಬಿಟ್ಟಲ್ಲಿ ನಿನಗೆ ನೀನೆಂಬುವುದು ಅರಿವಾಗುದೆಂದವಳು.
"ತಾಯಿಯೇ ಮೊದಲ ದೇವರು ಎಂದು ಸುಮ್ಮನೆ ಹೇಳಿಲ್ಲ, ಅಂತಹ ದೇವರನ್ನ ಎಷ್ಟೇ ವರ್ಣನೆ ಮಾಡಿದರು ಸಾಲುವುದಿಲ್ಲ,
ಕಣ್ಣಿಗೆ ಕಾಣುವ ದೇವರು, ಗುರು, ಪ್ರಪಂಚ, ಪ್ರಕೃತಿ ಎಂದರೆ ಅದು ತಾಯಿ ಮಾತ್ರ,
ಮನದಲ್ಲಿ ಭಯ-ಭಕ್ತಿ, ಪೂಜ್ಯನೀಯ ಭಾವನೆ ಹುಟ್ಟುವುದು ತಾಯಿ ಎಂಬ ಪದ ಕೇಳಿದಾಗ "
*ಪ್ರತಿಯೊಂದು ಹೆಣ್ಣಿನಲ್ಲೂ ತಾಯಿಯ ಗುಣವಿರುವುದು ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕಷ್ಟೆ *.-