Sudharani  
1.3k Followers · 4 Following

read more
Joined 30 December 2019


read more
Joined 30 December 2019
13 APR 2020 AT 20:52

*ನನ್ನ 101ನೆ ಕವನ ನನ್ನ ತಾಯಿಗೆ ಸಮರ್ಪಣೆ *

ನಾನಾವ ಸಾಹಿತ್ಯ ಭಂಡಾರ ಪುಸ್ತಕ ಓದಿಲ್ಲ,
ನನಗಾವ ಸಾಹಿತಿಗಳ ಪರಿಚಯವೂ ಇಲ್ಲ,
ಆದರೂ ನನ್ನ ಕವನಗಳಿಗೆ ಅಂತ್ಯವಿಲ್ಲ,

#ದೈವೀ ಸ್ವರೂಪಿಯಂತಿರುವ ನನ್ನ ತಾಯಿಯೇ, ನನ್ನೆಲ್ಲ ಕವನಗಳಿಗೆ ಸ್ಫೂರ್ತಿ 🙏 #

ಅಂಬೆಗಾಲಿಡುವ ಮುನ್ನವೇ ಆಧ್ಯಾತ್ಮಿಕ ಸಸಿ ನೆಟ್ಟವಳು,
ಪುಟ್ಟ ಹೆಜ್ಜೆ ಇಡುವಾಗ ಕೈ ಹಿಡಿದು ನಡೆಸಿದವಳು ,
ಸ್ವಲ್ಪ ಬಾಲ್ಯತನ ಬಂದಾಗ ಬದುಕಿನ ಬದಲಾವಣೆಗಳ
ಭಾವಚಿತ್ರ ತೋರಿದವಳು,
ಸಮಾಜದ ರೀತಿ ನೀತಿಗಳ ಅರಿವು ಮೂಡಿಸಿದವಳು,
ಸ್ವಲ್ಪ ಪ್ರಾಯಕ್ಕೆ ಬಂದಾಗ ಪುರಾಣ ಪುಣ್ಯಕಥೆಗಳನ್ನ ಹೇಳಲಾರಂಭಿಸಿದವಳು,
ಜೀವನದಲ್ಲಿನ ಸರಿ ತಪ್ಪುಗಳ ಸಮದೂಗುವಿಕೆ ಹೇಗೆಂದು ಕಲಿಸಿದವಳು,
ಎಷ್ಟೇ ಕಷ್ಟಗಳಿರಲಿ ಗುರಿ ತಲುಪುವವರೆಗೂ ನಿಲ್ಲದಿರೆಂದು ಪ್ರೇರೇಪಿಸಿದವಳು,
ನಾನೂ ಎಡವಿದ್ದಲ್ಲಿ ತಿದ್ದಿ ಸರಿದಾರಿಗೆ ತಂದವಳು,
ನಾನು ನನ್ನದು ಎಂಬ ಅಹಂಕಾರ ಬಿಟ್ಟಲ್ಲಿ ನಿನಗೆ ನೀನೆಂಬುವುದು ಅರಿವಾಗುದೆಂದವಳು.

"ತಾಯಿಯೇ ಮೊದಲ ದೇವರು ಎಂದು ಸುಮ್ಮನೆ ಹೇಳಿಲ್ಲ, ಅಂತಹ ದೇವರನ್ನ ಎಷ್ಟೇ ವರ್ಣನೆ ಮಾಡಿದರು ಸಾಲುವುದಿಲ್ಲ,
ಕಣ್ಣಿಗೆ ಕಾಣುವ ದೇವರು, ಗುರು, ಪ್ರಪಂಚ, ಪ್ರಕೃತಿ ಎಂದರೆ ಅದು ತಾಯಿ ಮಾತ್ರ,
ಮನದಲ್ಲಿ ಭಯ-ಭಕ್ತಿ, ಪೂಜ್ಯನೀಯ ಭಾವನೆ ಹುಟ್ಟುವುದು ತಾಯಿ ಎಂಬ ಪದ ಕೇಳಿದಾಗ "

*ಪ್ರತಿಯೊಂದು ಹೆಣ್ಣಿನಲ್ಲೂ ತಾಯಿಯ ಗುಣವಿರುವುದು ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕಷ್ಟೆ *.

-


8 MAR 2020 AT 11:39

ಹೆಣ್ಣು ಹೆರುವ ತಾಯಿ ಆಗುತ್ತಾಳೆ,
ಹೆಣ್ಣು ಮನೆಯ ನಡುಸ್ತoಭ ಆಗುತ್ತಾಳೆ,
ಹೆಣ್ಣು ಗಂಡಿನ ಸರಿಸಾಟಿಯಾಗಿ ನಿಲ್ಲುತ್ತಾಳೆ,
ಹೆಣ್ಣು ಕರುಣಾಮಯಿ,ಹೃದಯವಂತೆ,
ಇಡಿ ಪ್ರಪಂಚದಲ್ಲಿ ಹೆಣ್ಣಿಗೆ ಇರುವ ಸಾಮರ್ಥ್ಯ ಯಾರಿಗೂ ಇರಲು ಸಾಧ್ಯವಿಲ್ಲ,
ಏಕೆಂದರೆ ಹೆಣ್ಣು ತಾಯಿ ಆಗುತ್ತಾಳೆ,ಗಂಡನಿಗೆ ಸಂಗಾತಿ ಅಲ್ಲದೆ ಎರಡನೇ ತಾಯಿಯೂ ಆಗುತ್ತಾಳೆ,
ಅಕ್ಕ, ತಂಗಿ ಪ್ರೀತಿ ವಾತ್ಸಲ್ಯ ತೋರುತ್ತಾಳೆ,
ಜೀವನಲ್ಲಿ ಎಷ್ಟೇ ಕಷ್ಟ ಬಂದರು ಮೆಟ್ಟಿ ನಿಲ್ಲುವ ಶಕ್ತಿ ಅವಳಲ್ಲಿದೆ, ತ್ಯಾಗಮಯಿ ಸ್ವರೂಪಿ ಹೆಣ್ಣು,
ಈ ಸಾಲುಗಳು ಈ ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ,
ಪ್ರತಿ ದಿನದ ಪುಷ್ಪಾರ್ಚನೆ,

ನಮ್ಮ ಭಾರತದಲ್ಲಿ ಹೆಣ್ಣಿಗೆ ತುಂಬಾ ಮಹತ್ವವಾದ ಸ್ಥಾನವಿದೆ ಅದನ್ನು ಉಳಿಸಿಕೊಂಡು ಹೋಗೋಣಾ,

ಹೆಣ್ಣನ್ನ ಅವರು ಹಾಕಿಕೊಳ್ಳುವ ವಸ್ತ್ರಾಭರಣಗಳಿಂದ ಅಳಿಯಬೇಡಿ ಬದಲಾಗಿ ಅವಳಲ್ಲಿರು ವಿಶೇಷ ಗುಣಗಳನ್ನು ಅಳವಡಿಕೊಳ್ಳಿ.

"ಹೆಣ್ಣು ಮಕ್ಕಳ ಶೋಷಣೆ ತಡೆಯಿರಿ, ನಮ್ಮ ಸಂಸ್ಕೃತಿ ಉಳಿಸಿ "

"ಹೆಣ್ಣು ಒಂದು ಬೃಹತ ಶಕ್ತಿ
ಒಲಿದರೆ ನಾರಿ ಮುನಿದರೆ ಮಾರಿ"

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು 🙏

-


23 OCT 2021 AT 18:36

***ಚಿಟ್ಟೆಯ ಮನಸ್ಸು***

ಚಂಚಲ ಮನಸ್ಸಿನಲ್ಲಿ,
ಚಿಗುರೋಡೆದ ಪ್ರೇಮಾಂಕುರ
ಚಟಪಟಿಸಿದೆ ಹಗಲಿರುಳು....

ಗೊಂದಲ ಶುರುವಿನಲ್ಲಿ,
ಗಡಿಬಿಡಿಯ ಅವತಾರ
ಗುರುತಿಸಲಾಗದಂತಾಗಿದೆ ತಿರುವುಗಳು...

ಅಚಲ ನಂಬಿಕೆಯಲ್ಲಿ,
ಅರ್ಥವಿರುವುದು ಸಾವಿರ
ಅನುಮತಿಸುತಿದೆ ಕಾರಣಗಳು...

-


19 OCT 2021 AT 20:20

ಬೀಸೋ ಗಾಳಿ,
ತಂಪಾಗಿರಲಿ ಅಥವಾ
ಬಿಸಿಯಾಗಿರಲಿ...
ಅಮ್ಮ ನಿನ್ನ ಉಸಿರು ಮಾತ್ರ,
ನನ್ನ ಜೀವನಕ್ಕೆ ಆಸರೆಯಾಗಿರಲಿ...

-


19 OCT 2021 AT 19:59

**ಖುಷಿಯಾಗಿದೆ ಈ ಮನ **

ನೆಪವೊಂದೇ ಸಾಕು
ಕಣ್ಮುಚ್ಚಿ ನೆನೆಯೋಕೆ...

ಸಲಿಗೆಯೊಂದು ಬೇಕು
ಸನಿಹ ಬರುವುದಕೆ...

ಜಾಗರಣೆಗೆ ಜಾರಿದೆ
ಮನದ ಭಾವ...

ಮುಗಿಲಿಗೆ ಏರಿದೆ
ಸಂತಸದ ಜೀವ...

-


31 JUL 2021 AT 13:41

ಕನ್ನಡಿಯ ಮುಂದೆ ನಮ್ಮದೇ
ಪ್ರತಿಬಿಂಬವಿದ್ದರೂ ಕೂಡಾ,
ಪ್ರತಿಬಿಂಬಕದ ರೂಪದಲ್ಲಿರುವ,
ನಮ್ಮ ಕಣ್ಣೀರನ್ನೋರೆಸಲು
ನಮ್ಮ ಕೈಗಳಿಗೆ ಅಸಾಧ್ಯ...

-


5 JUL 2021 AT 11:35

ಆಚಾರವಂತರಿಗೆ ಆಡುವ ಮಾತುಗಳೇ ಅಲಂಕಾರ,
ಅದೆನಿಸುವುದು ಬೇರೆಯವರಿಗೆ ದುರಹಂಕಾರ,
ಅರ್ಥೈಸಿಕೊಳ್ಳುವ ಮುನ್ನವೇ ಆಗುವುದು ಅವಾಂತರ,
ಇದರ ಮಧ್ಯೆ ಜೀವನವೊಂದು ಜಾರದೆ ನೋಡಿಕೊಳ್ಳಿ ಎಚ್ಚರ...

-


5 JUL 2021 AT 11:18

ಅಧ್ಯಾಯದ ಕೊನೆಯ ಪುಟಗಳು,
ಕೊನೆಯ ಸಾಲುಗಳು,
ಓದಲು ಹಾತೋರೆಯುತ್ತಿರುವ ಮನಸ್ಸು,
ಬೇಡ ಎನ್ನುತ್ತಿರುವ ಬುದ್ಧಿಶಕ್ತಿ,
ಮುಕ್ತಾಯವಿಲ್ಲದ ಪೈಪೋಟಿ,
ರಾಜಿಯಾಗಲು ಸಾಧ್ಯವೇ ಇವೆರೆಡನ್ನು ದಾಟಿ...

-


5 JUL 2021 AT 11:00

ಜೀವನದಲ್ಲಿ ತುಂಬಾ
ಅಗತ್ಯವಿರುವ ವಸ್ತುಗಳನ್ನ
ಕೆಲವೊಂದು ಬಾರಿ ಬೇಕಂತಲೇ
ಕಳೆದುಕೊಳ್ಳಬೇಕಾಗುತ್ತದೆ,
ಏಕೆಂದರೆ ಅದರಿಂದ ನೋವುಗಳೇ
ತುಂಬಾ ಜಾಸ್ತಿ ಆದಾಗ,
ಅದು ಅಗತ್ಯ ವಸ್ತುವೆಂದು ಅನಿಸಿಕೊಳ್ಳುವುದಿಲ್ಲ...

-


5 JUL 2021 AT 10:52

ಬೇರೆಯವರು ಅತ್ತಾಗ
ಪ್ರತಿಕ್ರಿಯೆ ಮತ್ತು ಸ್ಪಂದನೆ
ನೀಡಲಿಲ್ಲ ಅಂದ್ರೆ ನಾವು,
ಅವರಿಗಿಂತ ಜಾಸ್ತಿನೇ
ಕಣ್ಣೀರು ಹರಿಸಿದ್ದೀವಿ ಎಂದರ್ಥ...

-


Fetching Sudharani Quotes