Neel   (V)
1.3k Followers · 174 Following

read more
Joined 14 July 2018


read more
Joined 14 July 2018
10 APR AT 21:25

A friend of mine shared a reel with a beautiful girl in it. She was just trying to be a good friend there. You know my love for the moon, don't you? And I caught the moon in the reel and replied- "Last I heard, the earth had only one moon". But she's a star, she said, referring to the girl in the video. To which I said, "Well then, I'll enjoy her presence from afar.  I'll settle for the moon. All that a mere mortal like I, can do".  That was when it hit me. You are my Star! The humankind has managed to reach only thus far, till the moon, you see.

-


10 MAR AT 19:49


I'd be a mortal,
trying hard to find out
if I am a fact in her fiction.



I'd be an immortal,
trying hard to appear normal
as the world looks on.

-


10 MAR AT 19:17

ನೆಟ್ಟಗೆ, ಉದ್ದನೆಯ ರೋಡು ಮುಂದೆ.
ಮೇಲೆ ನೆತ್ತಿ ಸುಡುವ ಬಿಸಿಲು.
ಕರಿ ರೋಡಿನ ಮೇಲೆ ಬಿಳಿ ಗೆರೆ ಎಳೆವಾಗ
ಹಣೆಯ ಬೆವರ ಹನಿ ಕಣ್ಣ ಹೊಕ್ಕಾಗ
ದೂರದೂರಿನ
ತನ್ನ ಮನೆಯಲ್ಲಿನ ತನ್ನವಳ
ತಂಪು ಸೆರಗಿನ ನೆನಪಾಗಿ
ಮೈಮರೆತು ಚೂರು ಸೊಟ್ಟಗಾದ ಪಟ್ಟಿ.
ಎಡಕ್ಕೆ ೧೯೮೩ರ ಕಬ್ಬಿಣದ ಕಂಬಗಳು
ಅದರ ವೈರ್ ಎಲ್ಲಾ
ಊರಿನ ಇಂದಿನ ಶ್ರೀಮಂತರ ಇಟ್ಟಿಗೆಗಾಗಿದೆಯಂತೆ.
ಬಲಕ್ಕೆ ೨೦೧೫ರೀಚೆಗಿನ ಸಿಮೆಂಟ್ ಕಂಬಗಳು
ಇಂದಿನ ಬಡವರ ಮನೆಯ ಬೆಳಕ ಭಾಗ್ಯ.

ನೆರಳು ಬಯಸಿ ಹಾರುವ ಹಕ್ಕಿಗೆ
ಕುಂಭದಿಂದ ಚೆಲ್ಲಿದ ಅಮೃತದ ಬಿಂದುವಿನಂತೆ
ಅಲ್ಲೊಂದಿಲ್ಲೊಂದು ಕಾಣುವ ಮರ.
ಅದ್ಯಾರೋ ಪುಣ್ಯಾತ್ಮ ಕಷ್ಟಬಿದ್ದು
ಕಲೆಹಾಕಿದ ಭಾವಗೀತಾಗುಚ್ಚದ ಸಾಲುಗಳು ಕಿವಿಯಲ್ಲಿ.

೧೯೭ ಕಿ. ಮೀ.
ಆ ಗೀತೆಗಳಂತರಾಲದಲ್ಲಿ ಜೊತೆಯಾದ
ನಿನ್ನ ನೆನಪಿನೊಟ್ಟಿಗೆ
ದಾರಿ ಹೋದದ್ದೇ ಗೊತ್ತಾಗಲಿಲ್ಲ ನೋಡು.

"ಸೇರಬಲ್ಲೆನೆ ಒಂದು ದಿನ..."?

-


8 MAR AT 20:44

I want to be a writer
Just to feel the pain of giving birth

-


3 MAR AT 22:21

You are here.

You are there.


Are you there?

-


28 FEB AT 20:46

Writing is a tough, boring job. Or is it the "showing the world that you have written" part? Because you can just keep it in your head. Is writing for the writer to free himself from the thoughts that haunt him, that run all haywire and constantly short-circuit normal brain functioning? Or is it for the world to read and for the non-writers to feel represented and expressed? Enough with the overthinking now.

Okay. I urgently need a person who can read my mind and if they can write, lucky me. And if not, find me another who can. It is just random scribbling and some word and sentence rearrangement. Proofreading, I shall do that myself. I like finding faults in others or, let's say and, their work. I love that, in fact. So, let me know when you find them.

Eligibility- They should know to read and write Kannada.

"So, why the ad in English"? That is because currently, my English brain is active. But everything I want to be written is all in Kannada. The language debate, Kannada-Hindi, North-South (you see they are hyphenated and not v/s), ah well, we shall keep it for another day. We will do that when you find a person who can read and write the Hindi from my brain. Okay, bye.

-


24 FEB AT 20:17

ಸಣ್ಣಂವಿದ್ದಾಗ ನಿನ್ಹೆಸರ ಹೇಳೇಳಿ
ಕಾಡಸ್ತಿದ್ದ ದೋಸ್ತರ, ಇಂದ

ನಿನ್ಹೆಸರ ಹೇಳಬೇಕ, ಅದೂ
ಒಡಪ್ಹಚ್ಚಿ, ಅಂತ ನಿಂತಾರ

-


20 FEB AT 21:21

ಒಲವು ಮೂಡಲೇಕೆ ಬೇಕು ಜಾತಿ- ಜಾತಕ?
ಜೀವ ಬೆಸೆಯಲೆರಡು ಹೃದಯ ಮಾರ್ಗದರ್ಶಕ
ಬೆರೆಯಲೆಣಿಸೆ ಮನಸು ವಯಸದಾವ ಸೂಚಕ?
ತೊಡೆದು ನಡೆಯಬೇಕು ಜಗದ ಸೂಕ್ಷ್ಮದರ್ಶಕ

-


18 FEB AT 20:22

ನನ್ನದಲ್ಲದ ಕಂಗಳು ಸೆರೆ ಹಿಡಿಯುವುದ ಬಿಡಿ,
ಎದುರಾದರೆ ಸಾಕು-
ಅವಳ ನಗು ಅದೆಲ್ಲಿ ಮರೆಯಾಗುವುದೋ!
ಹುಸಿನಗಲೂ ಒದ್ದಾಡಿ ಹೋಗುತ್ತಾಳೆ.
ಪಾಪ!
ಒಳ ಒಳಗೇ ನಗುತ್ತೇನೆ
ಅವಳ ಮುಜುಗರ ಕಂಡು...
"ಸುಳ್ ನಗುವಿನ ಕಳ್ ಕಂಗಳ ಸಖ"
ಪದೇ ಪದೇ ಛೇಡಿಸುತ್ತ
ತನ್ನವರಿಗೆ ನನ್ನ ಪರಿಚಯಿಸುವ ಪರಿ ಅವಳದ್ದು.

ನಾ ಮುಂದಿದ್ದರೆ ನಾಚುತ್ತಾಳೆ...
ಅದು ನನಗೂ ಒಂಥರಾ ಇಷ್ಟ ಅನ್ನಿ.
ಹಳೆಗಾಲದ ಹೊಸ ಪ್ರೇಮಿಗಳು ಅನ್ನಿ.

ಯಾರೂ ನೋಡುತ್ತಿಲ್ಲವೆನಿಸಿದಾಗ,
ನನ್ನ ನೆನಪಾಗಿ
ನನ್ನನಗೇ ಅಂತ ಇರುವ
ಅವಳ ಒಟ್ಟಂಚಲ್ಲಿ ಮೂಡುವ
ಅವಳ ಸ್ವಂತದ,
ಅದರ ಮೈತುಂಬ ನನ್ನ ಹೆಸರಿರುವ,
ಅವಳ
ಆಹ್! ಆ ನಿಜ ನಿರ್ಮಲ ನಗು
ತಪ್ಪದೇ ಸೆರೆಯಾಗುವುದು
ಕಂಬದ ಹಿಂದಿನಿಂದ
ಕದ್ದು ನೋಡುವ ನನ್ನ ಕಣ್ಣುಗಳಲ್ಲಿ ಮಾತ್ರ!
ನಿಶ್ಚಲವಾಗಿ ನಿಲ್ಲುವುದು ನನ್ನೆದೆಯ ಪಟಲದಲ್ಲಿ ಮಾತ್ರ!

-


14 FEB AT 7:57

ನಿನ್ನಿರವಿನ
ಅಲ್ಪಾವಶ್ಯಕತೆಯೂ ಇಲ್ಲದೆ
ಬದುಕುವುದನ್ನು ಸಿದ್ಧಿಸಿಕೊಂಡಿದ್ದೇನೆ ಈಗ.
ಹುಚ್ಚು ಹಿಡಿಸುವಂತ
ನಿತ್ಯ ನಿಚ್ಚಳ ಪ್ರೇಮ
ಮನದಲ್ಲಿ ಮನೆಯಾದ ಮೇಲಲ್ಲವೇ
ದಾಸರು ಹಾಡಿದ್ದು -
ನೀನ್ಯಾಕೋ ನಿನ್ನ ಹಂಗ್ಯಾಕೋ?

-


Fetching Neel Quotes