ಮೋನಿಕಾ ರುದ್ರ   (ಪಂಚಮಿ)
1.6k Followers · 41 Following

ಬದ್ಕು , ಪುಸ್ತಕ , ವಿಚಾರ , ತೇಜಸ್ವಿ......
Joined 1 January 2020


ಬದ್ಕು , ಪುಸ್ತಕ , ವಿಚಾರ , ತೇಜಸ್ವಿ......
Joined 1 January 2020

ಎದುರಿರಲು ನೀ ಬಂದಿಸುವೆ
ಕಣ್ಕಾಡಿಗೆಯ ಪರಿಧಿಯಲ್ಲಿ
ನಗುತಿರಲು ನೀ ಮನದುಂಬಿ
ಬದುಕಿಬಿಡುವೆ ಆ ಕ್ಷಣದಲ್ಲಿ
ದೂರಾಗಲು ನೀ ಪದಕಟ್ಟುವೆ
ಮನದ ತಿಳಿ ಬಿಳಿಹಾಳೆಯಲ್ಲಿ
ಮುತ್ತಿಡಲು ನೀ ಪಿಸುಗುಟ್ಟುವೆ
ಮತ್ತೊಂದೆಂದು ನಿನ್ಕರ್ಣಗಳಲ್ಲಿ
ನಿಂದಿಸಲು ನೀ ಹಸುನಗುವೆ
ಮರೆತದನು ಅಣುವೇಳೆಯಲ್ಲಿ!!!
-ಪಂಚಮಿ


-



ಆಕಾಶನೆದುರೊಂದು ಪ್ರೇಮ ಪ್ರಸ್ತಾವನೆಯನಿಟ್ಟೆ? ಅದನೊಪ್ಪಿದವನೀಗ ನನ್ಖುಷಿಗೆ ಮಳೆ ಸುರಿಸುವ,
ನಾ ಕಂಡು ಹಿಗ್ಗಲೆಂದು ಕ್ಷಣಕ್ಕೊಂದು ಮೇಘ ಚಿತ್ರಗಳ ರಚಿಸುವ, ಅವನ ಬಯಸಿ ಶಿರವೆತ್ತಿದ ಅನುಕ್ಷಣವು ನಾನ್ ಪ್ರಪಂಚವೇ ಅವನೆಂಬಂತೆ ಜಗದುದ್ದಕ್ಕೂ ರೂಪ ಪಡೆದಿಹ!

-



ಹೃದಯ ಹಗುರಾಗಿ ಖುಷಿಯ ಅಂಬರದೆಡೆಗೆ ಹಾದಿಹಿಡಿದಿದೆ, ಕಪಟ ತನದಿಂದ ತುಂಬಿದ ವಾತಾವರಣದಿ ದೇಹವು ಶೂನ್ಯದಂತೆ ಭಾಸವಾಗಿದೆ!!

-



ಯಾರದೇ ಬದುಕಿನಲ್ಲಾಗಲಿ ಯಾವುದೋ ಒಂದು ಸಂದರ್ಭದಲ್ಲಿ ನಮ್ಮ ಅನುಪಸ್ಥಿತಿ ಅವರನ್ನ ಕಾಡಿಲ್ಲ ಅಂದಾಗ ಅದರ ಕುರಿತು ಪ್ರಶ್ನೆ ಮಾಡೋದಕ್ಕೆ ಹೋಗಬಾರದು!
ನಾವು ಬೇಡದೆ ಇರುವವರ ಕುರಿತು ನಮಗಿರುವ ನಿರೀಕ್ಷೆಗಳನ್ನ ಅವರಿಗೆ ಅರ್ಥ ಆಗೋ ಹಾಗೆ ಮಾಡಿ ಮತ್ತಷ್ಟು ಸಣ್ಣವರಾಗಿ ಬಿಡ್ತಿವಿ ಅವರ ಮುಂದೆ!

-



ನನಗೂ ಕನಸುಗಳಿವೆ
ಲಿಂಗದ ಪರಿವಿಲ್ಲದೇ
ಸೃಜಿಸಿದ ಆತ್ಮದ
ಕನಸುಗಳವು, ಹೆಣ್ಣೆಂದು
ನೀ ಹಾಕಿದ ಕಾನೂನು
ಬಹಿಷ್ಕಾರಗಳ ಪರಿವೂ
ಲಿಂಗವಿರದೆನ್ನ ಕನಸುಗಳಿಗಿಲ್ಲ
ನಿನ್ನದೇ ಕೃತಕ ಸೃಷ್ಟಿಯ
ಕಾನೂನನ್ನು ಮೀರಿದೆನೆಂಬ
ಅಪವಾದ ಮೈಮೇಲೆರ
-ಗಿದರೂ ಸಹ ಸರಿಯೇ
ನನಂತರಾತ್ಮದ ಕನಸುಗಳ
ನನಸಾಗಿಸಿಯೇ ತೀರುವೆ
ನನ್ಬದುಕ ನನ್ನಿಚ್ಛೆಯಂತೆಯೇ
ಜೀವಿಸುವೆ!

-



ನನ್ನೊಂದು ಮಾತಿಗೆ
ಸಾವಿರ ಅರ್ಥಗಳಿವೆ
ಅವನ ಬಳಿ ,ಪ್ರತಿಬಾರಿ
ಅವನ ಆಯ್ಕೆಯೆ!
ನನ್ಮಾತಿನ ಆಶಯವ
ಅವನರಿತು ನನ್ನ
ಅಪೇಕ್ಷೆಯಂತೆ ಅವನ
ಪ್ರತ್ಯುತ್ತರ ದೊರೆತ
ಆ ಕ್ಷಣ ನನ್ನ ಪಾಲಿಗೆ
ಅದೃಷ್ಟವೇ ಸರಿ!

-



ದೀಪ ನೀನಾಗುವೆ
ಎಂಬ ಭ್ರಮೆಯಲ್ಲಿ
ಬೆಳಕ ಬಿಟ್ಟು ಅಜ್ಞಾತ
ಕತ್ತಲಿನೂರ
ಒಂಟಿಯಾಗಿ ಸೇರಿದೆ ,
ನೀ ದೀಪವಾದದ್ದಂತು
ಸತ್ಯವೆ ಆದರೆ
ನನ್ನಂತರಂಗದ
ಅನೃತಗಳಷ್ಟೆ ಅರಿವಿಗೆ
ಬರುವಂತೆ ಬೆಳಕ
ಪಸರಿಸಿದ್ದು ಊಹೆಗೂ
ಮೀರಿದ ಸತ್ಯ!

-



ನನ್ನವರಿವರು ಎಂಬುವರು ಸಾವಿರ ಮಂದಿ , ಬಹುಶಃ ನನ್ನಂತರಾಳ ಬಲ್ಲರಿವರೆಂಬೆನ್ನ ಊಹೆಗೆ ಸಾಕ್ಷಿಯೊಂದು ನೂರು ಮಂದಿ, ಪ್ರಸ್ತುತ ನನ್ನರಿತು ನನ್ಮನ ಬಯಸುವ ಸಾಂತ್ವನವನಿತ್ತು ಪ್ರತಿ ಸಂದರ್ಭದಿ ಜೊತೆನಿಲ್ಲುವರಂತೂ ಶೂನ್ಯ!

-



ನನ್ನ ಬದುಕಿನ ಬಗ್ಗೆ ನನಗಿಂತ ಹೆಚ್ಚು ಕಾಳಜಿ,ಆತಂಕ ಇನ್ಯಾರಿಗೂ ಇರೋದಕ್ಕೆ ಸಾಧ್ಯವೆ ಇಲ್ಲ , ಒಂದು ವೇಳೆ ಯಾರದಾದರೂ ನಡತೆ ಹಾಗೆನಾದ್ರು ಇರಬಹುದು ಅನಿಸಿದರೆ ಅದೂ ಅವರ ಇಚ್ಛೆಯಂತೆ ನನ್ನ ಬದುಕನ್ನ ನಿರ್ಧಾರ ಮಾಡಿ ನನ್ನ ಮೇಲೆ ಹೇರುತ್ತಿರುವ ಒತ್ತಡ ಅದು!

-



ಒಂದು ಜೀವವನ್ನ ಶುದ್ದ ಮನಸ್ಸಿನಿಂದ ಪ್ರೀತ್ಸೋರಿಗಿಂತ , ಮಾತಲ್ಲಿ ಪದೇ ಪದೇ ಹೇಳಿ ಹೇಳಿ ಪ್ರೀತಿಸ್ತೀನಿ ಅಂತ ಸಾಬೀತುಪಡಿಸೋ ಕೆಲಸವನ್ನಷ್ಟೇ ಮಾಡೋರು ಹೆಚ್ಚು!!

-


Fetching ಮೋನಿಕಾ ರುದ್ರ Quotes