ಸಾಧ್ಯವಾದರೆ ಬದುಕು ಕಷ್ಟ ಅನ್ನೋರಿಗೆ ಬುದ್ದಿ ಹೇಳು
ಬದುಕೋದೇ ಕಷ್ಟ ಅನ್ನೋರಿಗೆ ತಿದ್ದಿ ಬುದ್ದಿ ಹೇಳು.-
ಉದ್ದೇಶ ಪೂರಕವಾಗಿ ... read more
ಬೇಕಿದ್ದರೆ ಯಾರಾದರೂ ಒಬ್ಬರನ್ನ ಕೇಳಿ ನೋಡಿ
ಹಿಂದೆ ಜೀವನದಲ್ಲಿ ತುಂಬಾ ನೋವು ಅವಮಾನಗಳನ್ನ
ಎದುರಿಸಿ ಸಹಿಸಿಕೊಂಡವನೇ..
ಇಂದು ಒಳ್ಳೆಯ ಹಾಸ್ಯಗಾರನೆನಿಸಿಕೊಂಡಿರುತ್ತಾನೆ.-
ಯಾರೂ ಕೂಡ ತನ್ನನ್ನ ಗೌರವಿಸ್ತಾಯಿಲ್ಲ
ಯಾರೂ ತನ್ನನ್ನ ಗಮನಿಸುತ್ತಾಯಿಲ್ಲ,
ಹಾಗೆ ಯಾರೂ ತನ್ನನ್ನ ಗುರುತಿಸ್ತಾಯಿಲ್ಲ
ಅಂದ್ಕೋಳ್ಬೇಡ. ಯಾಕಂದ್ರೆ
ತುಳಸಿ ಗಿಡನ ಯಾರೂ ಗೊಬ್ಬರ ಹಾಕಿ ಬೆಳೆಸಲ್ಲ
ಅದು ಎಷ್ಟು ಬೆಳೆದಿದ್ಯೋ ಹೇಗೆ ಬೆಳೆದಿದ್ಯೋ
ಅಷ್ಟೇ ಶುಧವಾಗಿ ಹಾಗೆ ಶ್ರೇಷ್ಠವಾಗಿ
ಬೆಳೆದಿರುತ್ತೆ ನೀನು ಹಾಗೇನೆ ಅಂತ ತಿಳ್ಕೊ.-
ನಾಳೆ ಅನ್ನೋದು ನಿನ್ನೆಯ
ಹಾಗೆ ಕಳೆದು ಹೋಗುತ್ತೆ ,
ಇಂದು ಅನ್ನೋದೇ ನಿಂದು
ಹಾಗಾಗಿ ಇಂದು ಮಾತ್ರ
ನಂದು ಅಂತ ಬದುಕು.-
ಸಂಭಂಧಗಳನ್ನ ಬೆಳೆಸೋಕೆ ಸಂಭಂಧಗಳನ್ನ ಬಳಸಿಕೊಳ್ಳೊಕೆ ಸಾಕ್ಷಿಗಳು ಬೇಕಾಗುತ್ತೆ.
ಆದ್ರೆ ಸಂಭಂಧಗಳನ್ನ ಉಳಿಸಿಕೊಳ್ಳೊಕೇ ಮನಸಾಕ್ಷಿ ಇರಬೇಕಾಗುತ್ತೆ.-
ಅಂಕಿ ಸಂಖ್ಯೆಗಳ ಆಧಾರದ ಮೇಲೆ
ಮೇಲು ಕೀಳು , ಬಡವ ಶ್ರೀಮಂತ
ಅಂತ ನಿರ್ಧರಿಸ್ಬಾರ್ದು, ಯಾಕೆಂದ್ರೆ
ಪ್ರಪಂಚಕ್ಕೆ ಗಣಿತ ಪರಿಚಯವಾಗೊ
ಮುಂಚೆನೇ ವ್ಯಕ್ತಿತ್ವ ಪರಿಚಯವಾಗಿತ್ತು.-
ಜಿಮ್ನಲ್ಲಿ ಬೆವರು ಸುರಿಸುತ್ತಾ ದೇಹ ದಂಡಿಸುತ್ತಿರುವ ಮಗನನ್ನು ಕಂಡ ಮುಗ್ದ ತಾಯಿಯೊಬ್ಬಳು ಜಿಮ್ನನ ಮಾಲಿಕನ ಬಳಿ ಹೀಗೆ ಕೇಳಿಕೊಂಡಳಂತೆ, ನನ್ನ ಮಗ ನಿಮಗೆಷ್ಟು ಹಣ ನೀಡಬೇಕೋ ಅದನ್ನು ನಾನು ನೀಡುತ್ತೇನೆ ನಾಳೆಯಿಂದ ಅವನನ್ನ ಈ ರೀತಿ ದುಡಿಸಿಕೊಳ್ಳಬೇಡಿ ಅಂತ.
-
ಕಾನೂನು ದೃಷ್ಟಿಯಲ್ಲಿ ನಿರಪರಾಧಿಯೊಬ್ಬನಿಗೆ ಅಪರಾಧಿಯೆಂದು ಶಿಕ್ಷೆಯಾಯಿತಂತೆ ಕಾರಣ ದೃಷ್ಟಿ ಕಳೆದುಕೊಂಡ ಕಾನೂನಿಗೆ ಅಪರಾಧಿನೇ
ಕನ್ನಡಕ ಕೊಡಿಸಿದ್ದಂತೆ-
ನಾನು ಹುಟ್ತಾನೆ ಸೈಕಲ್ ಓಡಿಸ್ತಾ ಬೆಳೆದವನಲ್ಲ ಸೈಕಲ್ ಟಯರ್ ಓಡಿಸ್ತಾ ಬೆಳೆದವ್ನು
ಮೊದ್ಲು ಓಡೋದು ಕಲಿತು ನಂತರ ಓಡಿಸೋಕೆ ಕಲಿತವನು.
ದೇವ್ರು ಕಷ್ಟನ ಎದುರಿಸೋ ಶಕ್ತಿನೂ ನೀಡಿದ್ದಾನೆ ಹಾಗೆ ಸುಖಾನ ಅನುಭವಿಸೋಕು ಕಲಿಸಿದ್ದಾನೆ.-
ನೆನಪಿಟ್ಟುಕೊ...
ಮನುಷ್ಯ ನಿರ್ಮಿಸಿದ ಕಾನೂನು ವ್ಯವಸ್ಥೆಯಲ್ಲಿ ಗಂಡು - ಹೆಣ್ಣು, ಬಡವ - ಶ್ರೀಮಂತ, ಜಾತಿ- ಧರ್ಮದ ಆಧಾರದ ಮೇಲೆ ಮೀಸಲಾತಿಯಿದೆ.
ಆದರೆ...
ಕರ್ಮ ನಿರ್ಮಿಸಿದ ಕಾನೂನು ವ್ಯವಸ್ಥೆಯಲ್ಲಿ ಯಾರಿಗೂ ಯಾವುದೇ ಮೀಸಲಾತಿಗಳಿಲ್ಲ ಎಲ್ಲರ ಪಾಪ ಕರ್ಮಕ್ಕೂ ಸಮಾನತೆಯಿದೆ.-