QUOTES ON #ಗುಳಿ

#ಗುಳಿ quotes

Trending | Latest
30 JUN 2019 AT 21:56

ನನ್ನೀ ಕಂಗಳ ಕೊಳದಲೆಲ್ಲಾ ನಿನ್ನದೆ ನೆನಪುಗಳ
ನರ್ತಿಸುವಿಕೆ ಬಲು ಜೋರಾಗುತಾ
ನನ್ನೀ ಕಫೋಲದ ಮೇಲೆ ಜಾರುತಿದೆ ಕಣ್ಣೀರ ಧಾರೆ
ಜಡಿದ ಬೀಗ ಕಣ್ಣೀರಿಗೆ ಕರಗಿ ಬಾಯ್ತೆರೆದು
ಕದಪುಗಳ ಗುಳಿಗಳಲಿ ತುಂಬುತಿದೆ ನನ್ನೊಲವಿನ
ಕಣ್ಣೀರು ಅವನೊಲವ ನೆನೆ ನೆನೆದು!

-


23 JUL 2019 AT 10:42

ಕಿವಿಯಲಿ ಜೋತು ಬಿದ್ದ
ಜುಮುಕಿಯು ರೂಪಿಸಿದೆ
ನಿಗೂಢವಾಗಿ‌ ಸಂಚೊಂದನು,
ನಿನ್ನ ಅಂದದ ಮೊಗದ
ಚಂದದ ಗಲ್ಲದ ಅಂಚಿನಲ್ಲಿ
ಮುದ್ದಾದ ಗುಳಿ ತೋಡಲು,
ಗುಳಿಕೆನ್ನೆ ಚೆಲುವೆ‌ ಎಂದು
ಮರುನಾಮಕರಣ ಮಾಡಲು.

-



ಸುಮ್ಮನೆ ಮೌನಕ್ಕೆ ಶರಣಾಗಿ ಕದಪುಗಳ ಗುಳಿಗಳಿಗೆ ಕದವ ಜಡಿದು ಕಣ್ಣೀರ ಸುರಿಸದಿರು,
ನೀ ನಕ್ಕಾಗಲೆಲ್ಲ ಗುಳಿಯಾಳದಿ ಮಲಗಿ ನಿದ್ರಿಸಬೇಕೆಂದವನಿಗೆ ಬಿಸಿನೀರ ಸ್ನಾನ ಮಾಡಿಸದಿರು.

-


6 OCT 2022 AT 15:20

ಅದೇನು ಗುಟ್ಟಿದೆ ಗೆಳತಿ,
ಕೆನ್ನೆಯಾ ಗುಳಿಯಲಿ…
ಸುಳಿವಿಲ್ಲದಂತಾ ಸುಳಿಯಲಿ
ಪದೇಪದೇ ನಾ ಕಳೆದೋಗುವೆ…

-


2 JUN 2020 AT 11:10

ಗುಳಿ

ಯಾಕೆ ಬಿದ್ದೆನೋ
ಆಕೆಯ ಕೆನ್ನೆಯ ಗುಳಿಗೆ..?
ಅಲ್ಲಿಂದ
ಮೇಲೇರುವುದಕ್ಕೆ
ಆಗುವುದೇ ಇಲ್ಲ;
ಸರಿ ಇಲ್ಲ
ಬಿದ್ದ ಗಳಿಗೆ..!

-



ಅಂದು ಇದ್ದೆ ನಾ ನನ್ನದೇ ಗುಂಗಿನಲಿ
ಬಿದ್ದೆ ನೀ ನನ್ನ ಕಣ್ಣಿಗೆ ಗುಂಪಿನಲಿ
ಮನ ಸಿಲುಕಿತು ಸಣ್ಣ ಸುಳಿಯಲ್ಲಿ
ನೋಟ ನಿಂತಿತು ನಿನ್ನ ಕೆನ್ನೆಯ ಗುಳಿಯಲ್ಲಿ
ಇಂದು ಇರುವೆ ನಾ ನಿನ್ನದೇ ಗುಂಗಿನಲಿ
ಇರುವೆ ನೀ ಎಂದೆಂದೂ ನನ್ನ ಮನದಲಿ.

-


14 AUG 2020 AT 20:02

ಅವಳೆಂದರೆ,
ಗುಳಿ ಕೆನ್ನೆಯ
ಸುಂದರಿ,

ತನ್ನ
ಗುಳಿ ಕೆನ್ನೆಯಿಂದ
ಹುಡುಗರ
ಹಾಟ್೯
ಕೊಲ್ಲುವ
ಶೂರಪನಕೀ..😝

-


30 JUN 2019 AT 21:34

ನಿನ್ನ ಸುಂದರ ಕದಪುಗಳಲೇ ಕಟ್ಟಿದ್ದನವನು ಕನಸು.
ಕಂದರ್ಪ ರೂಪ ತಾಳಿ ಕುಣಿದಾನು ಆಗಾಗ.
ಕಂಪಿಸುತಿದೆ ಇಂದೇಕೋ ಅವನ ಕವಿಹೃದಯ
ನಿನ್ನ ಕಂಗಳಂಚಿನ ಕಂಬನಿಯ ಕಂಡು..!

-


14 AUG 2020 AT 20:37

ಹೇ ಗುಳಿ ಕೆನ್ನೆ ಚೆಲುವೆ,
ನಿನ್ನದೇ ಕನಸ ಹೊತ್ತು ಸಾಗಿರುವೆ
ಹೂ ಎಂದರೆ ನಡೆಸುವ ಪ್ರೀತಿಯ ನಾವೆ...

-


29 NOV 2020 AT 3:05

ಹುಡುಗಿ...

ಅದೇನು ನಿನ್ನ ಕೆನ್ನೆಯ ಮೇಲಿರುವುದು
ಗುಳಿಯೋ..

ಇಲ್ಲಾ....

ನನ್ನ ಹೃದಯದೊಳು ಒಲವ ಕೆತ್ತುವ
ಉಳಿಯೋ..?

-