ನನ್ನವಳು
ಮತ್ತು ನಾನು
ಪ್ರೀತಿಯೆಂಬ ಪುಸ್ತಕದ ಮೇಲೆ
ಅಳಿಸಲಾಗದ ಶಾಹಿಯ ಹೆಜ್ಜೆ ಗುರುತುಗಳು-
ನನ್ನ ಕನಸ ದೋಣಿಗೆ⛵️ ನಾನೊಬ್ಬನೇ ನಾವಿಕ,
ಜೊತೆಯಾದರೆ ಅವಳು ಬಲುರೋಚಕ...💕
ನನ್ನವಳು
ಮತ್ತು ನಾನು
ಪ್ರೀತಿಯೆಂಬ ಪುಸ್ತಕದ ಮೇಲೆ
ಅಳಿಸಲಾಗದ ಶಾಹಿಯ ಹೆಜ್ಜೆ ಗುರುತುಗಳು-
ನಾನಂದುಕೊಂಡೆ ಪಡೆದಿರುವೆ
ಅವಳ ಪ್ರೀತಿ ಗುತ್ತಿಗೆ,
ಆದರಿಂದು ನೀಡುತಿಹಳು
ನೆನಪುಗಳ ಕಿರುಹೊತ್ತಿಗೆ....💞💞-
ಅವಳ ಮುಂಗುರಳ
ಸ್ಪ್ರಿಂಗಲ್ಲಿ ಬಂದಿಯಾಗುವಾಸೆ,
ನನ್ನ ಪ್ರತಿ ಕವನಗಳಲ್ಲಿ ಅವಳ
ಬಂದಿಸಿಡುವಾಸೆ...💞-
ನನ್ನ ಪ್ರೀತಿ ಜಾತ್ರೆಯ ತೇರು
ನೀ ಬರದೇ ಹಾಗೆ ನಿಂತಿದೆ,
ನೀ ಕಾಣದ ಜಗದಲ್ಲಿ
ನನ್ನದು ಅಂತ ಇನ್ನೇನಿದೆ,
ಬರದಿರುವ ನಿನ್ನ ಬರುವಿಕೆಗೆ
ಈ ನನ್ನ ಹುಚ್ಚು ಮನ ಕಾದಿದೆ....-