ವಿಪರ್ಯಾಸ
ಮಗನನ್ನು ಓದಿಸಿ
ಮಾಡಿದರು
ಎಂಜಿನೀರು
ಈಗವರಿಗೆ
ಸಿಗುತ್ತಿದೆ ಬರೀ
ಗಂಜಿನೀರು!-
Harish Nayak
(ಹರೀಶ್ ನಾಯಕ್)
211 Followers · 265 Following
ಹುಟ್ಟೂರು ಕೇರಳದ ಕಾಸರಗೋಡು|ವೃತ್ತಿಯಲ್ಲಿ ಕನ್ನಡ ಉಪನ್ಯಾಸಕ| ಹನಿಗವನ ರಚನೆ ಹವ್ಯಾಸ| ಮಾಹಿತಿ ತಂತ್ರಜ್ಞಾನ ... read more
Joined 7 May 2020
24 MAR AT 18:16
ಗೌತಮ
ಬದುಕನ್ನು ಹಾಳು
ಮಾಡುವುದು
ಇಹವೆಂಬ ತಮ
ಎಂದರಿತ ಸಿದ್ಧಾರ್ಥ
ಬೆಳಕನ್ನು ಕಂಡು
ಆದ ಗೌತಮ-
23 MAR AT 12:22
ನಲ್ಲೆ
ಅಂದು ನನ್ನ ನಲ್ಲೆ
ತುಂಬಾ ಮಾತಾಡುತ್ತಿದ್ದಳು
ನನ್ನಲ್ಲೇ
ಇಂದು ಯಾವಾಗಲೂ
ಮಾತಾಡುತ್ತಾಳೆ
ಫೋನಲ್ಲೇ-
8 MAR AT 21:45
ಶುಭಾಶಯ
ಮಹಿಳಾ ದಿನದಂದು
ಮಹಿಳೆಯರಿಗೆ ಶುಭಾಶಯ
ಕೋರಿದೆ, ನಗೆಯ ಬೀರಿದೆ
ಇದನ್ನು ನೋಡಿ ನನ್ನಾಕೆ ಅಂದಳು
ಏನ್ರೀ ಈಗೀಗ
ಹುಚ್ಚು ಜೋರಿದೆ-
16 JAN AT 10:32
ನಂಜು
ಸೂರ್ಯನ ಬಿಸಿಲಿಗೆ
ಕರಗುತ್ತದೆ
ಮಂಜು
ಬಿಸಿಲು ಬಿದ್ದರೂ ಕರಗದ್ದು
ಮನುಷ್ಯನೊಳಗಿನ
ನಂಜು-
1 JAN AT 11:42
ಹೊಸ ವರುಷ
ಬಂದಿದೆ
ಎರಡು ಸಾವಿರದ
ಇಪ್ಪತ್ತೈದು
ಎಂದಿನಂತೆ
ಇಂದೂ ಎಬ್ಬಿಸಿದ್ದಾಳೆ
ಬೈದು ಬೈದು
-