ಮಳೆಯಲಿ ಜೊತೆಯಲಿ
(Monsoon Letter To Her)
-
ಜಯಂತ್ ಕಾಯ್ಕಿಣಿ ಅಭಿಮಾನಿ
ಉತ್ತರ ಕರ್ನಾಟಕ #ಮುನವಳ್ಳಿ❤
Weight ಸ್ವಲ್ಪ ಕಮ್ಮಿ 😉
Addicte... read more
ಗಾಢ ರಾತ್ರಿಯ ಅಂದಗೊಳಿಸಲು
ಬೆಳದಿಂಗಳ ತೇಯ್ದು ನಿನ್ನ
ವದನಕೆ ಲೇಪಿಸಲೇ?
ಅಬ್ಬ! ದರೋಡೆ ಮಾಡಿದ
ಬೆಳದಿಂಗಳ ಹುಡುಕಲು
ಚಂದ್ರನು ಬಂದರೆ, ತುಸು ನೀನೇ
ಸಂಭಾಳಿಸುವೆಯಾ?
ನಾ ನಿನ್ನ ಮರೆಯಲ್ಲೇ ನಿಂತಿರುವೆ
ಅಂಜಿಕೆಯ ಹಿಂಬಾಲಿಸಿ!-
ಹಿಂದೊಮ್ಮೆ ಹಿತವಾದ ಭೇಟಿ ಅವಳರಮನೆಯಲ್ಲಿ,
ಮತ್ತೆ ಸಿಹಿ ರೂಪದ ದಾಟಿ ಮಿಠಾಯಿ ಅಂಗಡಿಯಲ್ಲಿ,
ಸದ್ದಿಲ್ಲದೆ ನುಸುಳಿ ಬಂದಳಾಕೆ ಎನ್ನ ಮನದಂಗಳಕೆ,
ಮನವು ಹಿಗ್ಗಿ ಹುಡುಕುತ್ತಿತ್ತು ಅವಳನ್ನೆ ನೆನಪಿಸಿತ್ತು,
ಒಲವ ಸಾಗರದ ಅಲೆಗಳು ಏರಿಳಿತವಾಗಿ ಬಿತ್ತರಿಸಿವೆ,
ನನ್ನೆದೆಯ ವಾಹಿನಿಯಲ್ಲಿ ಬರೀ ಅವಳದೇ ವಾಣಿ!
ನೋಟದ ಸನ್ನೆ ನಾಚಿಕೆಯ ಮೂಡಿಸಿದೆ ವದನದಲ್ಲಿ,
ನಗುವಿನ ನೃತ್ಯವದು ಖಾಯಂ ನೆಲೆಸಿದೆ ತುಟಿಗಳಲ್ಲಿ,
ಶುರುವಾಗಬಹುದು ಸ್ವಪ್ನದಲ್ಲೂ ಅವಳ ಕನವರಿಕೆ,
ಮೈಮರೆತರೆ ಎದುರಾಗಬಹುದು ಹೃದಯಕ್ಕಾಪತ್ತು,
ರವಾನಿಸಿದ ಸಂದೇಶಗಳೆಲ್ಲ ತಡೆ ತಡೆದು ವಿಸ್ತರಿಸಿವೆ,
ನನ್ನೆದೆಯ ವಾಹಿನಿಯಲ್ಲಿ ಬರೀ ಅವಳದೇ ವಾಣಿ!-
ಹಿರ್ಯಾರ ಹೇಳ್ತಿದ್ರ "ಈ ಮದ್ವಿ ಗಿದ್ವಿ ಎಲ್ಲಾ ಸ್ವರ್ಗದಾಗ ನಿಶ್ಚಯ ಆಗಿರ್ತಾವಂತ"
ಈಗ ಅದ ಹಿರ್ಯಾರ ಮುಂದ್ ನಿಂತ್ ಅಲ್ಲ, ಹೊಲದಾಗ ನಿಂತ ಮದ್ವಿ ಮಾಡಾತಾರ.
|ಹಿರಿಯಾಸೆ|
ಮದುವೆಯ ಮಮತೆಯ ಕರೆಯಲೊಲ್ಲೆ-
ಅವಳೇನು ನಸುಕಿನ ಕನಸಲ್ಲಿ ಬಂದವಳಲ್ಲ
ಮುಂಜಾನೆಯ ಮೌನದಲ್ಲಿ ಕಣ್ಣಿಗೆ ಬಿದ್ದವಳಲ್ಲ
ಪಕ್ಕದಲ್ಲೇ ಕೂತು ಸೊಗಸಾಗಿ ಕಿವಿಯಲ್ಲಿ ರಿಂಗಣಿಸಿ
ತೂಕಡಿಸುವ ಕಾಯವ ನಿಚ್ಚಳಿಸಿ
ಹಿತವಾಗಿ ಹಿತನುಡಿಗಳ ಹೇಳಿಸಿದವಳು.
ಸಂಜೆಗೆಂಪು ಸೂರ್ಯ ಸರಿದ ಮೇಲೆ
ಬರುವಳು ರಾತ್ರಿ ಕಾಣದ ಬೆಳ್ಳಿ ಮೋಡವಾಗಿ,
ಸುರಿಸುವಳು ಭಾವನೆಗಳ ಸವಿ ಮಳೆಯ
ವೇಳೆಯ ಅರಿವಿಲ್ಲದೆ ಚಿಟಪಟ ನಿನಾದದಲಿ.
ಎಡೆಬಿಡದೆ ಮಳೆಯ ಸುರಿಸಿದವಳು ಈಗೆಲ್ಲಿ?
ಚಲಿಸಿದಳು ಕಂಡ ಕನಸುಗಳ ನನಸಾಗಿಸಲು,
ನಡೆಯುತಿರುವಳು ಗೊತ್ತಿರುವ ಕಾರಣವ ಕೋಪಿಸುತ್ತ.
ಅವಳು ನಿರೀಕ್ಷೆ ಎಂಬ ಶೀರ್ಷಿಕೆಗೆ ಹೊಸ ಸೇರ್ಪಡೆ
ಆ ಕೋಣೆಯ ಮಂದ ಬೆಳಕಿನಲಿ,
ಅದೇನೋ ನಿಶ್ಯಬ್ದತೆ ಈ ರಾತ್ರಿಯಲಿ...-
ಬರವಣಿಗೆಯ ಅದ್ಭುತ ಜ್ಞಾನ,
ಹಿರಿಯ ಹಾಗೂ ಅನುಭವಿ ಸಾಹಿತಿ,
ಜೀವನಾನುಭವಗಳ ಬರಹಗಳಲ್ಲಿ ಚಿತ್ರಿಸುವ ಕೃತಿಕಾರ,
ಎಲ್ಲ ಪ್ರಕಾರದ ಸಾಹಿತ್ಯದಲ್ಲೂ ಅಗಾಧ ತಿಳುವಳಿಕೆ,
ಕಿರಿಯರಿಗೆ ದಣಿವರಿಯದೆ ಬರೆಯಿರಿ ಎಂದೆನ್ನುವ ಉತ್ಸಾಹದ ಚಿಲುಮೆ.
ಒಳ್ಳೆದಾಗ್ಲಿ ಸರ್,
ಇನ್ನಷ್ಟು ಪ್ರಶಸ್ತಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿ.-
ಇವಳ ಸೀರೆಯ ಅಂದವ
ನೋಡಿ ಚಂದಿರ ಅಂದನು,
ಇವಳು ನನ್ನ ಬೆಳದಿಂಗಳು
ಎರವಲು ಪಡೆದು ಹುಟ್ಟಿದ
ಮುದ್ದು ಮುಖದ ಸವಿಯ
ನೋಟದ ಸುಂದರಿ ಎಂದು.-
ಸ್ಟ್ರೇಟು ದಾರಿಯಲಿ
ಅಡ್ಡ ದಾರಿ ಹಿಡಿದು
ಪದಗಳ್ನ ದೋಚುವ
ಅಡ್ನಾಡಿ ಕವಿಗಳು.
ಯದ್ವಾತದ್ವಾ ಕದ್ದ
ಪದಗಳ್ನ ಗುಡ್ಡೆ ಹಾಕಿ
ಭಾವನೆಗಳ್ನ ಬೆರೆಸಿ
ತಯಾರಿಸಿದ ಪಾಕವೇ
ಸ್ವೀಟಾದ ಕವಿತೆಗಳು.-
ಮುಂಜಾನೆಯ ಸಮಯ
ಸ್ವಚ್ಛಂದವಾಗಿ ಅರಳುವ,
ಪ್ರಕೃತಿಯ ಮಡಿಲಿನಲ್ಲಿ ಸುವಾಸನೆ
ಬೀರುವ ಗುಣ ಹೂಗಳಿಗಿದೆ.
ಸಂಜೆಯಲ್ಲಿ ಧರೆಗುರುಳುವ,
ಬಿದ್ದ ಮೇಲೂ ಮತ್ತೇ ಅರಳುವ
ಗುಣ ಮನಮೋಹಕ.
ಆದರೆ, ಮಾನವನಿಗೇಕೆ
ಇಷ್ಟೊಂದು ದುರಹಂಕಾರ?
ಮನುಕುಲ ಹೂಗಳಿಂದ
ಕಲಿಯುವುದು ಸಾಕಷ್ಟಿದೆ.-
ಸತಾಯಿಸುತಿದೆ ಕಾಲವು ಭೇಟಿಯ ಬೇಟೆಯಾಡಿ,
ಮೊಗ್ಗು ಕೆಲ ಮನಮೋಹಕ ಸನ್ನೆಗಳ ಮಡಚಿಟ್ಟಿದೆ,
ಹಿಡಿತವಿಲ್ಲ ಹಿಡಿದ ಸಿಹಿ ಗುಂಗಿನ ಪರಿಭ್ರಮಣೆಗೆ,
ದಿಂಬಿನ ಮಗ್ಗುಲಲ್ಲಿ ಮಲಗಿವೆ ಸಜೀವ ಆಸೆಗಳು,
ನಡುರಾತ್ರಿ ಕೂತು ಕನಸುಗಳ ನೀ ಎಚ್ಚರಿಸುವಾಗ;
ಹಠಾತ್ತನೆ ತೋರುವ ಹಠವು ಪ್ರೇಮ ನಿವೇದನೆ!
ಕಿರುನಗೆಯ ಕೀಟಲೆ ಶುರು ಭಾವಗಳು ಸೆಣಸಾಡಿ,
ಹೃದಯವಿದು ಒಲವ ಪಿಸುಮಾತಿಗೆ ನರ್ತಿಸುತಲಿದೆ,
ಪ್ರೇಮ ಪರ್ಯಟನೆಗೈದು ಕೆಟ್ಟು ನಿಂತಿದೆ ಸಾರಿಗೆ,
ಪದಗಳಲ್ಲಿ ನೀ ಪದ್ಯವಾಗಲು ಇವೆ ಹವಣಿಕೆಗಳು,
ಇನ್ನಿತರ ಖಾಸಗಿ ಯಾತನೆಗಳ ನೀ ಕದ್ದಾಲಿಸುವಾಗ;
ಹಠಾತ್ತನೆ ತೋರುವ ಹಠವು ಪ್ರೇಮ ನಿವೇದನೆ!-