Paid Content
-
ಕಾರಿಮನಿ ಮಲ್ಲಯ್ಯ
ಭಂಡಾರದಯ್ಯ ಭಕ್ತಿಯಿಂದ
ನಿನ್ನಯ ಪಾದಕೆರಗುವೆ..
ಮಹಾಮಹಿಮನೇ ಶಕ್ತಿವಂತನೆ
ನಿನ್ನ ಕೃಪೆಯ ಬೇಡುವೆ.
ಇಲ್ಲಿದಂಲ್ಲಿಗೆ ಎಡಿಯ ತರಲು
ಕಾಡಿದಿ ಖಾರಿ ಮುಳ್ಳಾಗಿ..
ಡಮರುಗ ಸದ್ದಿಗೆ ನಿನ್ನ ಹದ್ದಿಗೆ
ಬಂದರೆ ಕಾಯೋ ನೆಳ್ಳಾಗಿ..
ಭೂಪಾಲನ ಕನಸಿನೊಳಗ
ಬರ್ತಿನಂದೆ ಮಲ್ಲಯ್ಯ..
ಹಸುವಿನ ಹಾಲಿಗೆ ಉಸಿರೆತ್ತಿ
ಕಸುವಿಲೆದ್ದ ಮಲ್ಲಯ್ಯ..
ಕಾರಿಮನಿಯ ಕೇರಿಯೊಳಗ
ಉಧಿಯಾದೆ ಮಲ್ಲಯ್ಯ..
ನೆನೆಯುವವರ ಮನದೊಳಗ
ಐತ್ಯಾರದಯ್ಯ ಮಲ್ಲಯ್ಯ
ಬಂದ ಭಕ್ತರು ಉಲಿದಿಹರಿಲ್ಲಿ
ಏಳುಕೋಟಿಯ ಮಲ್ಲಯ್ಯ...
ಗಂಗಿಮಾಳವ್ವನ ಮುದ್ದು ಪತಿಯೇ
ನಂಬಿದ ಮನಿಯ ಬೆಳಗಯ್ಯ..
ಬಂದ ಕಂಟಕ ದೂರ ಮಾಡೋ
ಕಾಲ ರುದ್ರನೇ ಮೈಲಾರ..
ನಿಚ್ಚಕಂಟಕ ನಿರ್ಧಾರ ಮಾಡೋ
ಪಾಲನ ಪ್ರಭುವೇ ಮೈಲಾರ..
ಚಾವಟಿ ನಿಂದು ದೀವಟಿಗೆ ನಿಂದು
ನಿಚ್ಚಳ ನಿರ್ಧಾರ ಮಾಡೋ.
ನಂಬಿ ಬರುವ ಭಕ್ತರಿಗೆಲ್ಲ
ಅಭಯವನಿತ್ತು ಕಾಪಾಡೋ..-
ನಿತ್ಯ ಬೆಳೆದಿಂಗಳ ಸೊಬಗನ್ನು
ಅನುಭವಿಸಬೇಕೆಂದರೆ
ಅನವರತ ಇವಳು ಜೊತೆಗಿರಬೇಕು..!-
ನೆಡೆದಾಡುವ ಹುಣ್ಣಿಮೆ ಅವಳು,
ಜೊತೆಗಿರಲು ತಂಗಾಳಿ ಬೀಸುವಾಗ
ಬೆಳೆದಿಂಗಳ ಇರುಳಲ್ಲಿ ಹಸಿಬಿಸಿ
ಭಾವನೆಗಳನ್ನು ಮೆಲುಕು ಹಾಕಿದಂತೆ..-
ಆಡುವ ಮಾತು ಅವರವರ ವ್ಯಕ್ತಿತ್ವಕ್ಕೆ
ಹಿಡಿದ ಕನ್ನಡಿ..
ಭವಿಷ್ಯದಲ್ಲಿ ಅವರದ್ದೆ ಬದುಕನ್ನು ವಿವರಿಸುವ ಮುನ್ನುಡಿ-
ಕನಸುಗಳ ಸುಟ್ಟ ದೇವರಿಗೆ
ಹಿಡಿಶಾಪ ಹಾಕಲಾರೆ.!
ಕೊಟ್ಟು ಕಿತ್ತುಕೊಂಡವನನ್ನು
ಯಾವತ್ತೂ ದೂರಲಾರೆ.
ಮನಸಲ್ಲಿ ಸಾವಿರ ಸ್ವಪ್ನ ಕಟ್ಟಿ
ಮತ್ತೆ ನಗುವ ಚೆಲ್ಲುವೆ..
ನನಸಾಗದ ಕನಸುಗಳೊಟ್ಟಿಗೆ
ಮತ್ತದೆ ನೆನಪ ಮೆಲ್ಲುವೆ..
ಯಾರದ್ದೂ ಬದುಕಿನಲಿ ನಾನು
ಬೆಳಕಾಗುವ ಭ್ರಮೆಯಲ್ಲಿ..
ಬೆಂಕಿಯುಂಡು ಬೂದಿಯಾದೆ
ಬಳಿದರು ಬೂದಿ ನಟನೆಯಲ್ಲಿ..
ಕಾಲಚಕ್ರದಡಿಗೆಲ್ಲ ತಿರುಗುವರು
ಕರ್ಮದಂಚಿನ ಬದುಕಲ್ಲಿ
ಶಾಶ್ವತ ನೆಲೆಯೆಲ್ಲುಂಟು?ಇಹದಿ
ಧರ್ಮ ಮರೆತವರಿಹರಿಲ್ಲಿ..
ನಿತ್ಯ ನಟಿಸುವವರ ಮಧ್ಯದಲ್ಲಿ
ಸತ್ಯವಂತರಿಗಿದು ಕಾಲವಲ್ಲ..
ಮುಸುಕು ಹೊತ್ತಾಡುವವರೆಲ್ಲ
ಲಕುಮಿಕಂದನಿವನೆಲ್ಲವ ಬಲ್ಲ..-