ಕರ್ಣ ಯಾರಿಗೂ ಮೋಸ ಮಾಡಿಲ್ಲ,
ಆದರೆ ಅವನಿಗಾದ ಮೋಸ ಚರಿತ್ರೆಯಲ್ಲಿ
ಇನ್ನೂ ಯಾರಿಗೂ ಆಗಿಲ್ಲ,
ಒಳ್ಳೆಯತನಕ್ಕೆ ಆಗಿನ
ಕಾಲದಿಂದಲೂ ಬೆಲೆ ಇಲ್ಲ....-
ಹೆತ್ತೊಡಲ ಮಮತೆಯನು ಕಾಣದೆ
ಗಂಗೆಯ ಒಡಲಲ್ಲಿ ತೇಲುತ್ತಾ ಸಾಗಿದವ
ಸೂತಪುತ್ರನೆಂಬ ನಾಮದಿ ಬೆಂದವ
ಪ್ರತಿ ಹೆಜ್ಜೆಯಲ್ಲೂ ಅಪಮಾನಗೊಂಡವ
ಅರ್ಕನ ತೇಜಸ್ಸಿನ ಪ್ರತಿರೂಪದ ಅದ್ಬುತ
ಬೇಡಿದ್ದನ್ನು ನೀಡುವ ಉದಾರ ಗುಣದವ
ಜನ್ಮಧಾರಭ್ಯದಿ ಅವಮಾನ ಹೊತ್ತವ
ಸ್ವಸಾಮರ್ಥ್ಯದಿ ವೀರನಾದವ
ಜಗತ್ತಿನ ಶ್ರೇಷ್ಠ ಧನುರ್ಧಾರಿ ಈ ಧೀರ
ಕುರು ಕುಲವಧು ಕುಂತಿಯ ಜೇಷ್ಠ ಪುತ್ರ
ಭೀಷ್ಮರ ಸವ್ಯೇಷ್ಟ ಅಧಿರಥನ ಸಾಕುತನಯ
ರಾಧೆಯ ಮಡಿಲು ತುಂಬಿದ ರಾಧೇಯ
ಪರಶುರಾಮರ ನೆಚ್ಚಿನ ಶಿಷ್ಯ ಈ ಮಹಾರಥಿ
ಶಕ್ತಾಯುಧಧಾರಿ ಸೂರ್ಯಪುತ್ರ ಕೌಂತೇಯ
ಸುತ್ತಲೂ ಜನರಿದ್ದರೂ ಒಬ್ಬಂಟಿಯಾದವ
ಮಿತ್ರನ ಕನಸಿಗೆ ಸದಾ ಬಣ್ಣ ತುಂಬಿದವ
ಲಾಲಿಸದ ಮಾತೆಯ ಮಾತಿಗೆ ಕಟ್ಟು ಬಿದ್ದವ
ಮಾಧವನ ಧರ್ಮಯುದ್ದಕೆ ತಲೆ ಬಾಗಿದವ
ತನ್ನನ್ನೇ ತಾ ಅರ್ಪಿಸಿ ಗೆಳೆತನಕೆ ಹೆಸರಾದವ
ಜಗದಲಿ ದಾನಶೂರನೆಂದು ಪ್ರಸಿದ್ದನಾದವ.
🙏🙏
-
ರಾಧೇಯನ,
ರಕ್ತದ ಕಣ ಕಣದಲ್ಲೂ
ಧರ್ಮ ಅಡಕವಾಗಿತ್ತಾದರು
ಆತನ ಶಿರಕ್ಕೇರಿದ ಮುಕುಟ
ಅಧರ್ಮದ ತಾಂಡವವಾಡುತಿತ್ತು..
ಸೂರ್ಯಪುತ್ರ,
ಇಟ್ಟ ಪ್ರತಿ ಹೆಜ್ಜೆ ಹೆಜ್ಜೆಗೂ
ಸೂತಪುತ್ರನೆಂಬ ಅವಮಾನದ
ಈಟಿಯ ಇರಿತಗಳ ಗಾಯವೆ
ಬೆನ್ನಿಗೆ ಬರೆಎಳೆದಿತ್ತು..
ಕಾನೀನನ,
ಹೃದಯ ಧರ್ಮವನ್ನು ತ್ಯಜಿಸಲು ಒಪ್ಪದೆ
ಅಂಗರಾಜನ ಪದವಿಯನ್ನು ತೊರೆದರು
ಪ್ರಾಣಮಿತ್ರನ ಆದೇಶ ಪಾಲಿಸುವುದೆ
ನನ್ನ ಧರ್ಮವೆಂದು ಹೊರಟಿದ್ದು ಮಾತ್ರ
ಅಧರ್ಮದ ಜೊತೆಜೊತೆಯಾಗಿತ್ತು..
ವಸುಸೇಣ,
ಶ್ರೇಷ್ಠ ಧನುರುವಿದ್ಯಾಪಾರಂಗತನಾಗಿದ್ದರು
ಸಾಕ್ಷತ್ ಪರಶುರಾಮನ ಶಿಷ್ಯನಾಗಿದ್ದರೂ
ಆತನ ಅಂತಿಮ ಕಾಲದಲ್ಲಿ ಮಹಾಸ್ತ್ರಗಳಾವು
ಫಲಿಸದೆ ಪರಾಜಯಕ್ಕೆ ಕಾರಣವಾಗಿತ್ತು..
-ಶ್ರುತಿ ಕೆ.ಜಿ( Shruthi K.G)
-
ನಿನ್ನ ನೋಡದೇ ಇರುವ ಕಣ್ಣುಗಳಿಗೇನೋ ಕಳೆದುಕೊಂಡಂತಹ ಭಾವ,
ನಿನ್ನ ಮಾತನಾಲಿಸದೆ ಇರುವ ಕರ್ಣಗಳಿಗೇನೋ ಕೊಟ್ಟಂತಿದೆ ನೋವ..!!-
ಯಾರು ಏನೇ ಆಗಲಿ ನಮಗೆ ಬೇಕಾಗಿರುವುದು ಆದರ್ಶ.!
ಕರ್ಣನ ವ್ಯಕ್ತಿತ್ವದ ನಕಾರಾತ್ಮಕ ವಿಮರ್ಶೆಬೇಡ;
ಆತನ ಆದರ್ಶಬೇಕು.!
ಅಷ್ಟಕ್ಕೂ ನಾವು ದ್ವೇಷಿಸಬೇಕಾಗಿರುವುದು
ವ್ಯಕ್ತಿತ್ವವನ್ನು ವ್ಯಕ್ತಿಯನ್ನ ಅಲ್ಲ.
ಕರ್ಣನ ವಿಷಯದಲ್ಲಿ ಹೇಳುವುದಾದರೆ
ನಾವು ಯಾವುದು ಧರ್ಮ ಎಂದು ಭಾವಿಸುತ್ತೇವೆಯೋ ಅದು ಆತನ ವಿಷಯದಲ್ಲಿ ಅಧರ್ಮವೇ ಆಗಿತ್ತು.
ಬಾಲ್ಯದಿಂದಲೂ ಕೇವಲ ಹತಾಶೆ,ಅವಮಾನಗಳೇ
ಸಿಕ್ಕ ಕರ್ಣನಿಗೆ ಬೇಕಾಗಿದ್ದು;
ಗೌರವ,ಮರ್ಯಾದೆ.
ಅದು ದುರ್ಯೋದನನಲ್ಲಿ ಆತನಿಗೆ ಸಿಕ್ಕಿತ್ತು.
ಯಾರಾದರೂ ಅಷ್ಟೇ ತಮಗೆ ಮರ್ಯಾದೆ ಸಿಗುವ ಜಾಗದಲ್ಲಿ ಇರಲು ಇಚ್ಚಿಸುತ್ತಾರೆ.!
ಕರ್ಣನ ವಿಷಯದಲ್ಲಿಯೂ ಹಾಗೆಯೇ....
ನನ್ನ ಪ್ರಕಾರ ಕರ್ಣ ಎಂದಿಗೂ ಶ್ರೇಷ್ಠನೇ...!-
ನೀನು ಮಾತನಾಡುವ ಅವಶ್ಯಕತೆ
ಇದೆಯೆಂದಾದರೆ ಮಾತನಾಡಿಬಿಡು,,
ನೀನಾಡುವ ಇಂದಿನ ಮಾತಿನಿಂದ
ನಿನ್ನವರು ನೋವುಣ್ಣಬಹುದೆಂಬ
ಕಾರಣಕ್ಕೆ
ಮೌನದ ಸೋಗೆ ತೊಟ್ಟು
ಎಲ್ಲಾ ಸಮಯದಲ್ಲೂ
ಮೂಕ ಪ್ರೇಕ್ಷಕಳಾಗಬೇಡ,,
ಎಚ್ಚರವಿರಲಿ,, ಕೆಲವೊಮ್ಮೆ
ನಿನ್ನ ಅತಿಯಾದ ಮೌನವೇ
ಕೊನೆವರೆಗೂ ನಿನ್ನನ್ನ
ಅಪರಾಧಿ ಸ್ಥಾನದಲ್ಲಿಟ್ಟು
ಜೀವನ ಪೂರ್ತಿ ಪಾಪಪ್ರಜ್ಞೆಯಿಂದ
ನರುಳುವಂತೆ ಮಾಡಿದರು ಅಚ್ಚರಿಯಿಲ್ಲ!!
ಹ್ಮ್ ನಿಜಾ,,
ಕರ್ಣನ ವಿಷಯದಲ್ಲಿ ಕುಂತಿ
ಇಂದಿಗೂ ಅಪರಾಧಿಯಾಗಿಯೇ
ಉಳಿದುಬಿಟ್ಟಳು!!
✍️ಶಿಲ್ಪಾ ಪಾಲ್ಕಿ💞
-
ಮಾಡಿದ ಕೈಗಳೇ
ಒಳ್ಳೆಯವುಗಳಾಗಲಿಲ್ಲವಲ್ಲ
ಎನ್ನುವ ಕರ್ಣನ ಚಿಂತೆ
ಅವನ ಸಾವಿನವರೆಗೂ
ಬಂದಿದ್ದು ವಿಪರ್ಯಾಸ..-
2 ವರ್ಷಗಳ ನಂತರ ಕೇಳಿಸಿತು ಅವನ
ಧ್ವನಿ ಮರಳಿ,
ಈಗ ಮತ್ತೆ ಅನಿಸುತ್ತಿದೆ ಅವನೇ ನನ್ನ
ಮುರುಳಿ-
ಕಣ್ಮನ ಸಳೆಯುವ
ಸುಂದರ ಕಿವಿಯೋಲೆ
ನಲಿಯುತಿದೆ ನೋಡು
ನವಿಲೆ ಕರ್ಣದ ಮೇಲೆ
ಮನದ ಪಿಸುಮಾತ
ನಿನಗೆ ಹೇಳಲೆ ನಲ್ಲೆ
ಬರೆಯಲೆ ನಿನಗೆ
ನೆನಪಿನ ಒಲವಿನ ಓಲೆ
ಜೊತೆಯಾಗಿ ಸಂಚರಿಸಿ
ನೋಡೋಣ ಕಡಲ ಅಲೆ
ಮುಡಿಸಲೆ ನಿನಗೆ
ದುಂಡು ಮಲ್ಲೆ
_ಶೃತಿ ಶೈವ
-