ಸಾಲುಗಳ ಬೇಟೆಗಾರ..   (ನೀಚತನದ ನಿರೂಪಕ.. ❣️)
175 Followers · 134 Following

read more
Joined 29 April 2019


read more
Joined 29 April 2019

ದೇವರೂ ಆಟವಾಡುತ್ತಾನೆ!
ಎದುರಾಳಿಯಾಗಿ ಯಾರೂ ಸಿಗದೇ ಇದ್ದಾಗ
ಯಾರದ್ದಾದರೂ ಜೀವನ ಆಯ್ಕೆ ಮಾಡಿಕೊಳ್ಳುತ್ತಾನೆ..

-



ದೂರವೇ ಕುಳಿತುಬಿಡೋಣ,
ಮೌನವಾದರೂ ಪ್ರವಹಿಸಲಿ.
ಮಾತುಗಳಾಡಿ ಉಂಟಾದ ವೈಮನಸ್ಸಿಗೆ
ನಿನ್ನದೇ ತಪ್ಪು, ನನ್ನದು ಸರಿಯೆಂಬ
ಸಬೂಬಿನ ವಾದ ಬೇಡ!

-



ಎದುರಿಗೆಷ್ಟೇ ಬೈದರೂ
ಮನಸಲ್ಲೊಂಚೂರು ಪ್ರೀತಿ ಇಟ್ಟುಕೊಂಡು
ಅಮ್ಮನ ಕೈಲಿ ಇನ್ಯಾರದ್ದೋ ಎದುರಿಗೆ
ಹೊಗಳಿಸಿಕೊಳ್ಳುವ ತನ್ನ ಸೊಸೆಗೆ
ಹೆಂಡತಿಯೆಂದು ಹೆಸರು..

-



ಅವನು ಹಗಲುಗಳಲ್ಲಿ ಕುಡಿಯುತ್ತಿರಲಿಲ್ಲ ಆಮೇಲೆ
ಕುಡಿಯದಿದ್ದರೆ ಹಗಲಾಗುತ್ತಿರಲಿಲ್ಲ ಸಾಕಿ..
ಅವನು ಶರಾಬು ಇಲ್ಲದ ದಿನ ಸತ್ತು ಹೋಗುತ್ತಿದ್ದ
ಸಾಯಲು ಇಷ್ಟವಿರಲಿಲ್ಲ ಸಾಕಿ..

-



ಬೆಳೆಸಿಕೊಂಡೆ ಬೆಳೆದ ಹಲವರು
ಇತಿಹಾಸದ ಚರಿತ್ರೆಯಲುಳಿದರು
ಬೆಳೆಪಕ್ಕದ ಬೇಡವಾದ ಕಳೆಯಂತೆ
ನಿನ್ನೊಳಗೆ ಕೊಳೆಯಿಳಿದಿದೆ..

-



ಎಲ್ಲವೂ ಇದ್ದೂ, ಎಣಿಕೆಗೆ ಬಾರದಿರೆ
ಜೀವ, ಗದ್ದಲವಿಲ್ಲದ ಬೀದಿಗೆ ಮಹಾದ್ವಾರದಂತೆ..

-



ನಿನ್ನ ಮೌನ ಮೆರವಣಿಗೆ
ಅದೆಷ್ಟೋ ಜಲಪಾತಗಳಿಗೆ
ದಾರಿ ತೋರಿತು;
ನಿನ್ನ ಕೊರಳಿನ ನೆರಳಿನಲ್ಲಿ.

-



ಅವಶ್ಯಕತೆಯೊ,ಅನಿವಾರ್ಯವೊ
ಅನುಕೂಲವೊ,ಆಸರೆಯೊ ಒಟ್ನಲ್ಲಿ,
"ಪ್ರೀತಿ"
ಪ್ರೀತಿಯಷ್ಟೆ!
ಪ್ರೀತಿ ಬೇಕಷ್ಟೆ!!
ಪ್ರೀತಿಸಬೇಕಷ್ಟೆ!!!

-



ಕಾಮನಬಿಲ್ಲಿಗೆ
ಮನಸಿನಷ್ಟೇ ಆಯಸ್ಸು
ಅತ್ತ ಹೊರಳಿದರೆ ದೃಷ್ಟಿ
ಇತ್ತ ಮತ್ತೆ ಸಿಗದು..

-



ಅರೆಗಳಿಗೆಯೂ
ಆಲೋಚಿಸದೆ
ಆಸರೆಯಾಗುವೆ
ಅರಗಿಸಿಕೊಳ್ಳದಷ್ಟು
ಅನುರಾಗಿಯಾಗುವೆ
ಅನುಮಾನಿಸದಿರು
ಅನುರಾಜಿತ

-


Fetching ಸಾಲುಗಳ ಬೇಟೆಗಾರ.. Quotes