ಕರಾವಳಿ ಕನ್ನಡತಿ ಪೃಥ್ವಿ   (✍️ Pruthvi Nitin)
226 Followers · 42 Following

read more
Joined 7 April 2020


read more
Joined 7 April 2020

ಗೆಳೆತನ ಅನುದಿನ

ಸ್ನೇಹವೆಂಬ ಸುಮ ಬೀರುವುದು ಸುಗಂಧ
ಜೀವಕ್ಕೆ ಜೀವವು ಈ ಗೆಳೆತನದ ಸಂಬಂಧ
ಸ್ನೇಹದ ಬರಹ ಮುಗಿಸಲಾಗದ ಪ್ರಬಂಧ
ಎಂದೆಂದಿಗೂ ಬಿಡಿಸಲಾಗದ ಅನುಬಂಧ

ಗೆಳೆತನದ ಬೆಸುಗೆ ಇದು ಜೇನಿನ ಮಾಧುರ್ಯ
ನಿಷ್ಕಲ್ಮಶ ಹೃದಯಗಳ ಒಲವಿನ ಅಂತರ್ಯ
ಮಾತೆಯ ಮನದಂತೆ ಮಮತೆಯ ಔದಾರ್ಯ
ವಸುಧೆಯ ಹಸಿರಂತೆ ಸ್ನೇಹದ ಸೌಂದರ್ಯ

ಸ್ನೇಹದ ಕಡಲಿದು ನಂಬಿಕೆಯ ಆಗರ
ವಿಶ್ವಾಸದ ಬಂಧವಿದು ಸಂತಸದ ಸಾಗರ
ಸುಂದರ ಕಥನವಿದು ನೆನಪುಗಳ ಚಿತ್ತಾರ
ಸ್ನೇಹದ ಬುತ್ತಿಯಿದು ಜೀವನದ ಸಾಕಾರ

ಸ್ನೇಹದ ಜ್ಯೋತಿಗೆ ಬೆಳಕಿನ ಗಮನ
ಸ್ಫೂರ್ತಿಯ ಚಿಲುಮೆಗೆ ಗೆಳೆತನ ಪಾವನ
ದಿನವೂ ತುಂಬಲಿ ಸ್ನೇಹದಲಿ ಹೊಸತನ
ಗೆಳೆತನದ ಬೆಸುಗೆಗೆ ಇದೋ ನನ್ನ ನಮನ.

✍️ ಪೃಥ್ವಿ ನಾಯಕ







-



ಸಿರಿಗನ್ನಡ

ಕಸ್ತೂರಿ ಕಂಪನು ಚೆಲ್ಲುವ ಹೃದಯದ ಮಾತಿದು
ಮನಕೆ ಮುದ ನೀಡುವ ಅಂದದ ಸಿರಿಯಿದು
ದ್ರಾವಿಡ ಭಾಷೆಗೆ ಮೆರಗನು ತಂದಿಹುದು
ಕೋಟಿ ಕನ್ನಡಿಗರ ಮನದಾಳದ ನುಡಿಯಿದು.

ಜ್ಞಾನಪೀಠವ ಮುಕುಟದಲ್ಲಿ ಧರಿಸಿಹುದು
ತ್ರಿಪದಿ ಛಂದಸ್ಸಿನ ಮಹಾಕೂಟವಿದು
ಪಂಪ ರನ್ನ ಜನ್ನ ಪೊನ್ನ ಕವಿಗಳ ನಾಡಿದು
ಮನ ಮನಗಳ ಬೆಸೆಯುವ ಸ್ನೇಹ ಸೇತುವೆಯಿದು.

ಹಳೆಗನ್ನಡ ಹೊಸಗನ್ನಡದ ಕಾವ್ಯ ಕಣಜವಿದು
ತಾಯಿಯ ಒಡಲಂದದಿ ಬೆಚ್ಚನೆಯ ಭಾವವಿದು
ಮನಸಿನ ಪುಟಗಳ ತೆರೆದು ಕಾಣುವ ಕನಸಿದು
ಅದುವೇ ನಮ್ಮ ತಾಯ್ನುಡಿ ಸಿರಿಗನ್ನಡವು ನೋಡಾ.

-



ಸಂಪತ್ತನ್ನು ಮುಂದಿಟ್ಟು ಯಾರನ್ನು
ಅಳೆಯಬೇಡ ಪ್ರೀತಿ, ಮಮತೆ,
ನಂಬಿಕೆಯೆಂಬ ಸಂಪತ್ತಿನ ಮುಂದೆ
ಆಸ್ತಿಯೆಂಬುದು ಗೌಣ

-



ತಿಳಿನೀಲಿ ಬಾನಲ್ಲಿ ತಾರೆಗಳ ಬೆಳಕಿನಾಟವನು
ನೋಡುತ್ತಾ ನಿಂತಿದ್ದೆ, ಚುಕ್ಕಿಗಳು ನಗುತ್ತಾ
ನನ್ನೆಡೆಗೆ ಕೊಂಕು ನಗು ಬೀರಿದವು ನಿನ್ನ
ಚಂದಿರನಿಲ್ಲದ (ಇನಿಯ) ಆಗಸ ನೀನಗೇಕೆ ಎಂದು..

-



ಕನ್ನಡಿಯಲ್ಲಿ ನನ್ನ ಬಿಂಬವ ಕಾಣಲು
ನಿಂತರೆ ಅಲ್ಲಿ ನೀನೇ ಕಾಣುವೆ ಇನಿಯ..

ಹಣೆಯಲ್ಲಿ ಅಚ್ಚೊತ್ತಿರುವ ಕುಂಕುಮ
ಹೇಳುತಿದೆ ನಿನ್ನದೇ ಹೆಸರಿನ ಪ್ರತಿಧ್ವನಿ..

ಕೈಯಲ್ಲಿನ ಬಳೆಗಳ ಗಲ್ ಗಲ್ ನಾದದಲಿ
ನಿನ್ನ ಒಲವಿನ ಬಣ್ಣ ತುಂಬಿದೆ ಗೆಳೆಯ..

ಮಿನುಗುವ ಮೂಗುತಿಯ ಮಿಂಚು
ಸಾರುತಿದೆ ನಿನ್ನ ನೆನಪಿನ ಅಲೆಗಳ ಸಿಂಚನ..

ಕಾಲ್ಗೆಜ್ಜೆಯ ಸದ್ದಿನಲಿ ಅಡಗಿದೆ
ನಮ್ಮಿಬ್ಬರ ಪ್ರೇಮದ ಪರಿಯ ಸೊಬಗು..

-



ಬಿಂಕು ಬಿನ್ನಾಣದ ಕನ್ನಿಕೆ

ಶ್ವೇತ ವರ್ಣದ ಸೀರೆಯ ನೀರೆ

ಕೆಂದುಟಿಯ ಗುಲಾಬಿ ಸುಂದರಿ

ಮಲ್ಲಿಗೆಯ ಕಂಪಿನ ಕಿನ್ನರಿ..

ಕಾಡಿಗೆ ಕಂಗಳ ಶ್ವೇತಕುಮಾರಿ

ನೀಳ ಸಂಪಿಗೆ ನಾಸಿಕದ ವಯ್ಯಾರಿ

ಕುಡಿ ಹುಬ್ಬುಗಳ ಕನಕಾಂಗಿ

ಜೋಡಿ ಜುಮುಕಿಗಳ ಚೆಂದದ ಸಿರಿಗೌರಿ..

-










ಮಗಳೆಂದರೆ ತಂದೆಗೆ ದೇವತೆಯಂತೆ,
ದೇವತೆಯನ್ನು ಪಡೆಯುವ ಅದೃಷ್ಟ
ಎಲ್ಲಾ ತಂದೆಯರಿಗೂ ಸಿಗುವುದಿಲ್ಲ..















-




ಯಶೋಧೆ ನಂದನ ನಂದನಕಂದ
ಗೋಪಿಕೆಯರ ಮನ ಕದ್ದ ಚೋರ
ಬೆಣ್ಣೆಯ ಕಳ್ಳ ನೀ ಪುಟ್ಟ ಗೋಪಾಲ
ದೇವಕಿನಂದನ ವಸುದೇವ ತನಯ

ರಾಧೆಯ ಹೃದಯ ಸಾಮ್ರಾಜ್ಯದ ಅರಸ
ಮೊದಲ ಪರಿಶುದ್ಧ ಪ್ರೇಮದ ರೂವಾರಿ
ಹೆಂಗಳೆಯರ ಪ್ರೀತಿಯ ಚೆಂದದ ಗೊಲ್ಲ
ಕೊಳಲ ಮಾಧುರ್ಯದ ಸವಿಗನಸಿನ ನಲ್ಲ

-




ಕನ್ನಡ ಕರಾವಳಿಯ ಅಂಕೋಲೆಯ ಶಾಲ್ಮಲೆಯ ತಟದಲ್ಲಿರುವ ಪುಟ್ಟ ಹಳ್ಳಿ ನನ್ನೂರು 'ಸಗಡಗೇರಿ' ನಿಸರ್ಗದ ರಮಣೀಯ ತಾಣ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ, ಬಹುಶಃ ಧರೆಯಲ್ಲಿಯ ಸ್ವರ್ಗ ಇದೇ ಇರಬೇಕು..


ನಮ್ಮೂರು
(Read caption)




-✍️Pruthvi Nayak








-


Fetching ಕರಾವಳಿ ಕನ್ನಡತಿ ಪೃಥ್ವಿ Quotes