ಶಿಲ್ಪಾ ಶಿಪಾ   (✍️ ಶಿಲ್ಪಾ ಪಾಲ್ಕಿ💞)
751 Followers · 31 Following

read more
Joined 6 November 2018


read more
Joined 6 November 2018
10 MAY 2024 AT 23:08

ಅವನೆಂದರೆ ಇನ್ನೇನಲ್ಲ,,
ಇರುಳ ಹೆರಳಿನ ಸಿಕ್ಕಿಗೆ ಸಿಲುಕಿದ
ಮುದ್ದಾದ ಅರವಳಿಕೆ!!

-


10 FEB 2024 AT 11:32

#ಅನ್ಯಮನಸ್ಕತೆ;)

ಹೆಜ್ಜೆ ಇಟ್ಟಲ್ಲೆಲ್ಲ
ಗೋಜಲು ದಾರಿಗಳೇ
ಕವಲೊಡೆದಾಗ,,
ಜಖಂಗೊಂಡ ಹೃದ್ಯಕ್ಕೆ
ಗಮ್ಯದ ಮಾರ್ಗ
ತೋರುವವರಾರು??

-


10 FEB 2024 AT 11:27

ನನ್ನ ಎವೆಗಳಲ್ಲಿ ಮೂಡಿದ
ಬೆಳದಿಂಗಳ ಸುರಗಿಯನ್ನ
ಜೀವಂತವಾಗಿಯೇ ಹೂತವನವನು,,
ಈಗ ಅವನ ಕಣ್ಣಾಲಿಯಲ್ಲುಳಿದ
ಬೀಳ್ಕೊಡದ ಕೋರಿಕೆ ಎಲ್ಲವೂ
ಕಸುವಿಲ್ಲದ ಕಿಸುವಿನಂತೆಯೇ ನನಗೆ!!...

-



ಕನ್ನಡಮ್ಮ;)
ಅವಳೆಂದರೆ ಕಡು ಕಪ್ಪು ಮೋಡಗಳ ಹೆರಳಲ್ಲಿ
ಜೀವಸೆಲೆ ತುಂಬಲ್ಹೊರಟ ಬೆಳ್ಮಿಂಚಿನ ಬಂಧು!!..

-



ಅವನೆಂದರೆ ಇನ್ನೇನಲ್ಲ,,
ಇರುಳ ಹೆರಳಿನ ಸಿಕ್ಕಿಗೆ ಸಿಲುಕಿದ
ಮುದ್ದಾದ ಅರವಳಿಕೆ!!

-


16 APR 2023 AT 22:49

ಅವಳಿಗೆ ಹೊಸದೇನಲ್ಲ
ಕೆನ್ನೆ ಸವರುವ ಅಶ್ರುವನ್ನು
ಘನವಾಗಿಸಿಕೊಳ್ಳುವುದು;
ಆದರೆ ಈಗೀಗ ಅವಳೂ ಕಾಯುತ್ತಾಳೆ,,
ಮ್ಲಾನ ಮನಕ್ಕೆ ರಂದ್ರ ಕೊರೆಯಲು
ಬುದ್ಧ ಬರುವನೆಂದು!!...

-



ಅಲ್ಲಾರದೋ ಪ್ರೇಮದ ಹೂವರಳುವ ಸದ್ದು,,
ಇಗೋsss ಎದೆ ಸುಟ್ಟುಕೊಂಡ ಪ್ರೇಮಿಯೆದೆಯಲ್ಲೆಂತಃ ದಿಗಿಲು!!.....
*****
ಈಗಷ್ಟೇ ಹುಟ್ಟಿದ ನಕ್ಷತ್ರಮರಿಗೆ ಅವನ್ಹೆಸರಿಟ್ಟಿದ್ದಷ್ಟೇ,,
ಅಲ್ಲೆಲ್ಲೋ ಆ ಮುದಿ ತಾರೆಯದೆಯಲ್ಲಿ ಮುಳ್ಳು ಮುರಿದ
ಸದ್ದು!!..
*****
ಮರದಿಂದ ವಿಯೋಗಗೊಂಡ ಚಿಗುರೆಲೆಯೊಂದು
ವಿತಂತುಗೊರಳಲಿ ಬಿಕ್ಕುತ್ತಿದೆ ಪಾಪ ಅದೂ ನನ್ನಂತೆ ಒಬ್ಬೊಂಟಿ!!..

-



ಬೆಳದಿಂಗಳಂತವನಿಗೆ!!...
(Caption👇)

-



ಸೆರಗ ತುದಿಯಲಿ ಕಟ್ಟಿದ
ನವಿರು ಕನಸೊಂದು
ಅವನ ತೋಳಿಗಾತು
ಕುಳಿತಾಗಲೇ ಉಸಿರಾಡಿದ್ದು!!...

-


25 JAN 2023 AT 20:40

#ಹುಂಬ ಪ್ರೇಮಿ;
ಅವನ ಖಾಸಗಿ ಕನಸಿನೆದೆಯ ತುಂಬಾ
ನನ್ಹೆರಳ ಘಮಲಿನ ಹಿತವಾದ
ಅಮಲಿದೆಯಂತೆ,,
ಭವಿತವ್ಯದ ಸುರಕ್ಷತೆಗಾಗಿ
ವಿಮೆ ಮಾಡಿಸಲ್ಹೊರಟಿದ್ದಾನವನು!!...

-


Fetching ಶಿಲ್ಪಾ ಶಿಪಾ Quotes