ಶ್ರುತಿ ಕೆ.ಜಿ ( Shruthi K.G)  
618 Followers · 17 Following

read more
Joined 7 May 2019


read more
Joined 7 May 2019

ಅವನೊಲವಿನ ಮೊದಮೊದಲ ಆಮಂತ್ರಣ
ಮೂಡಿಸಿದೆ ಹೃದಯದೊಳಗೆ ಹೊಸ ಸಂಚಲನ
ಹರೆಯ ಮನ-ಮನಗಳ ನಡುವಿನ ಮಿಲನ
ಎದೆ ಝಲ್ಲೆನಿಸುವ ಕಂಪನ..!

ಆಗೊಮ್ಮೆ ಈಗೊಮ್ಮೆ ನೀಡಲು ಚುಂಬನ
ಏರುವುದು ನನ್ನೆದೆಯೊಳಗಿನ ತಾಪಮಾನ
ಸದಾ ಸುರಿಯುತಿರಲು ಅವನ ಪ್ರೇಮದ ಸಿಂಚನ
ಮಾಡುವೆನು ಎಂದಿಗೂ ಹೃದಯದ ಗೂಡಲ್ಲಿ
ಜೋಪಾನ..!

ಹೃದಯಗಳೆರಡು ಮೀಟುವ ಸವಿಗಾನ
ಮೈಮನಗಳಲ್ಲಿಯು ರೋಮಾಂಚನ
ಸನಿಹವನ್ನೆ ಬಯಸುವುದು ಸದಾ ಮನ
ಅನುಗಾಲವು ಹೀಗೆಯೇ ಇರಲಿ ನಮ್ಮಿಬ್ಬರ
ಪ್ರೇಮಾಯಣ..!

-



ಸನಿಹ ಸುಳಿದನು
ಪ್ರೇಮಪಾಠ ಬೋಧಿಸಲು
ಮನಹೊಕ್ಕನು
ಅನುಗಾಲವು ಜೊತೆಯಾಗಲು..!

ಪ್ರೇಮಿಸಿದನು
ನಾನಿದ್ದಂತೆ ನನ್ನನ್ನು
ಸಹಿಸಲಾರನು
ನನ್ನ ಪ್ರತೀ ಹನಿ ಕಣ್ಣೀರನ್ನು..!

ನೆಲೆನಿಂತನು
ಸಂಪೂರ್ಣ ವಿಶ್ವಾಸದೊಳು
ಪಾಲುಗಾರನಿವನು
ನನ್ನೆಲ್ಲಾ ನೋವು-ನಲಿವಿನೊಳು..!

-



I am always ready to smile
if my smile puts a smile on others face.

I am always ready to control my tears
if my tears bring tears to someone's
else eyes.

-



ಯಾರಿವನು ನಗುಮೊಗದ ಚೆಲುವ
ಅನುಮತಿ ಬೇಡದೆಯೇ ಹೃದಯ ಪ್ರವೇಶಿಸುವ
ಅನುದಿನವು ಎನ್ನೊಳಗೆ ತಪ್ಪದೆ ಹಾಜರಿರುವ
ಕನಸೊಳಗೂ ಮನೆಮಾಡಿ ಬೆಂಬಿಡದೆ ಕಾಡುವ..!

ಕಂಗಳಲ್ಲಿಯೆ ಪ್ರೇಮ ಸಂದೇಶ ರವಾನಿಸುವ
ಮನದೊಳಗೆ ಒಂದೊಂದಾಗಿಯೆ ಬಯಕೆಗಳನ್ನು ಬಿತ್ತುವ
ಮುಗುಳುನಗುತ್ತಲೇ ನೋವನೆಲ್ಲಾ ಮರೆಮಾಚುವ
ಅವನ ಸನಿಹ ಮರೆಸುವುದು ತುಸು ಹೊತ್ತು ಜಗವ..!

ಚಿಗುರೊಡೆದ ನನ್ನೊಳಗಿನ ಅವನ ಭಾವ
ಬಯಸುತಿದೆ ಸದಾ ಅವನೊಲವಿನ ಸನಿಹವ
ಅತಿಯಾದ ಸಲುಗೆಯ ಅವನೊಳಗಿನ ಪ್ರೇಮವ
ಹೃದಯದೊಳಗೆ ಬಚ್ಚಿಡುವೆ ಅನುಗಾಲವ..!

-



ನ್ಯಾನೋ ಕಥೆ
ಸುಮಧುರ ಕಂಠಸಿರಿಯಲ್ಲಿ ಶ್ರುತಿ ತಪ್ಪಿದ
ಹಾಡಿನ ಆರ್ತನಾದನ.
ಕನಸಿನ ಬಂಡಿ ಆಕೆ ತೋರಿದ ದಾರಿಯ ಧಿಕ್ಕರಿಸಿ
ಇನ್ನೆಲ್ಲಿಗೊ ಎಳೆದು ಹೊರಟಂತಿದೆ. ಅವಳಲ್ಲಿ ಈಗ
ಆತಂಕದ ಛಾಯೆ..!
ಯಾರ ಮನೆ ಅಂಗಳದಲ್ಲಿ ಯಾವ ಪುಷ್ಪ ಅರಳುವುದೊ..
ಅದು ಪೂರ್ವ ನಿಶ್ಚಿತ.
ಯಾವುದೊ ಮನೆಯ ದೀಪ ಬೆಳಗುತ್ತೇನೆ
ಎಂದು ಕನಸು ಕಂಡವಳು, ಇನ್ಯಾವುದೊ ಮನೆಯ ದೀಪ
ಬೆಳಗಳು ಸಿದ್ಧಳಾಗುತ್ತಿದ್ದಾಳೆ. ಆಕೆಯು ಅರಿತಂತಿದೆ,
ದೀಪ ಸದಾ ತಾ ಕತ್ತಲಲ್ಲಿಯೆ ನಿಂತು ಮನೆ ಇಡೀ ಬೆಳಗುವ
ಪ್ರತಿಜ್ಞೆ ಮಾಡಿರುವುದೆಂದು.

-



ಇರಬೇಕಾಗಿತ್ತು ನನಗೂ‌ ಒಬ್ಬ ಗೆಳೆಯ
ಜಗವೇ ಶೂನ್ಯವೆಂದೆನಿಸಿದಾಗ,
ನಾನಿರುವೆ ಎಂದು ಹಸ್ತಕ್ಕೆ ಹಸ್ತವನ್ನಿಡಲು..
ಇರಬೇಕಾಗಿತ್ತು ನನಗೂ ಒಬ್ಬ ಗೆಳೆಯ
ಇದ್ದೂ ಸತ್ತಂತ ಬಾಂಧವ್ಯಗಳ,
ಪ್ರೀತಿಯನ್ನೆಲ್ಲಾ ಧಾರೆಯೆರೆಯಲು..
ಇರಬೇಕಾಗಿತ್ತು ನನಗೂ ಒಬ್ಬ ಗೆಳೆಯ
ನನ್ನ ಒಂದೊದು ಕಣ್ಣೀರಿನ ಪ್ರತೀಕಾರ ತೀರಿಸಲು..
ಇರಬೇಕಾಗಿತ್ತು ನನಗೂ ಒಬ್ಬ ಗೆಳೆಯ
ನಾನಿದ್ದಂತೆ ನನ್ನನ್ನು ಪ್ರೇಮಿಸಲು..
ಇರಬೇಕಾಗಿತ್ತು ನನಗೂ ಒಬ್ಬ ಗೆಳೆಯ
ತಂದೆ ತಾಯಿಯ ಪ್ರತಿರೂಪದಂತೆ,
ಬಿಡಲಾರದ ನಂಟು ಬೆಸೆಯಲು..
ಇರಬೇಕಾಗಿತ್ತು ನನಗೂ ಒಬ್ಬ ಗೆಳೆಯ
ಸಾವಲ್ಲು ಮಡಿಲು ನೀಡಿ,
ನೋವಲ್ಲು ನಗುವುದ ಕಲಿಸಲು..
-ಶ್ರುತಿ ಕೆ.ಜಿ (Shruthi K.G)

-



ನವಪರ್ವ ಫೌಂಡೇಶನ್, ಬೆಂ.ಮಂಗಳೂರು ಘಟಕ ಆಯೋಜಿಸಿದ "ಬಾಳೊಂದು ಬಣ್ಣದ ಬುಗರಿ" ಕವನ ಸ್ಪರ್ಧೆಯಲ್ಲಿ "ಉತ್ತಮ" ಸ್ಥಾನ ಪಡೆದ ನನ್ನ ಕವಿತೆ👇

ಕನಸಿನ ಕುದುರೆ ಏರಿ
ಹೊರಟಿಹೆನು ಬಾಳ ಸವಾರಿ
ಪುಷ್ಪದಳಗಳಿಂದ ಕೂಡಿದ ದಾರಿ
ಮೈನವಿರೇಳಿಸಿತು ಸ್ವಾಗತ ಕೋರಿ;

ಸ್ವಪ್ನದಲ್ಲಿ ಎಲ್ಲವೂ ಸುಂದರ
ಸ್ವರ್ಗಕ್ಕೆ ಮೂರೇ ಗೇಣಿನ ಅಂತರ
ಗಾನ ಗಂಧರ್ವರ ಸಂಗೀತ ‌ಕಲರವ
ಮನತುಂಬ ಖುಷಿಯ ಮಹಾಪೂರ;

ಆದರೆ ಸ್ವಪ್ನಕ್ಕೂ ವಾಸ್ತವಕ್ಕೂ
ಇಲ್ಲವಂತೆ ಅಂತರದ ಕೊಂಡಿ
ಅವ ಹೇಳಿದ ದಾರಿಯಲ್ಲೇ
ಸಾಗಬೇಕಂತೆ ನಮ್ಮ ಬಾಳ ಬಂಡಿ;

ಯಾಕೆಂದರೆ ಬಾಳೊಂದು ಬಣ್ಣದ ಬುಗರಿ
ಅವನೊಬ್ಬನೆ ಅದರ ಸೂತ್ರಧಾರಿ
ನಾನು ಎಂಬುದು ಕೇವಲ ಪಾತ್ರಧಾರಿ
ಇದನರಿತು ಬದುಕಿದರೆ ನಿನಗುಂಟು ಇಲ್ಲಿ ಜಯಭೇರಿ

-



ನಿರೀಕ್ಷೆಗಳನ್ನು ಕೊಟ್ಟೆ!
ಜೊತೆಗೆ ನಿರಾಸೆಗಳನ್ನು ಇಟ್ಟೆ
ಆಮೀಷಗಳನ್ನು ಒಡ್ಡಿದೆ!
ಜೊತೆಗೆ ಅಡೆತಡೆಗಳನ್ನು ನಿರ್ಮಿಸಿದೆ
ಬಾಂಧವ್ಯಗಳನ್ನು ಬೆಸೆದೆ!
ಜೊತೆಗೆ ಭೇದ-ಭಾವಗಳನ್ನು ಇರಿಸಿದೆ
ರಂಗುರಂಗಿನ ಕನಸುಗಳನ್ನು ಹೆಣೆದೆ!
ಜೊತೆಗೆ ಕೈಗೆಟುಗಲಾಗದಷ್ಟು ಮೇಲಿರಿಸಿದೆ
ಜೀವನಪೂರ್ತಿ ಮೋಹವನ್ನೆ ಅಸ್ತ್ರವನ್ನಾಗಿಸಿದೆ!
ಕೊನೆಗೆ ಎಲ್ಲಾನೂ ತ್ಯಜಿಸಿ,ಒಬ್ಬಂಟಿಯಾಗಿಸಿ
ಸ್ಮಶಾನದ ದಾರಿ ತೋರಿಸಿದೆ.
(Please read caption..)

-



ಹೇ ಸತ್ಯನಾರಾಯಣ ದೇವ..
ಒಂದೊಮ್ಮೆ ‌ಈ‌ ನತದೃಷ್ಟ ಭಕ್ತೆಯ ಅಳಲು ಆಲಿಸಲಾರೆಯ..
ನಗುವಿನ ಮುಖವಾಡದ ಭಾರವ ಹೊರಲಾರೆ ನಾನಿನ್ನು
ನಿಂತ ನೀರಿನ ಬದುಕು‌ ಇರಿಯುತ್ತಿದೆ ಕ್ಷಣಕ್ಷಣಕ್ಕು.
ಭವಿಷ್ಯದ ಯೋಚನೆಯಂತು ದಿಗಿಲು ಹುಟ್ಟಿಸುವುದು ನಿದ್ದೆಯಲ್ಲು.
ಒಂದೊಮ್ಮೆ ನೆಮ್ಮದಿಯ ಮಾರ್ಗವ ತೋರಲಾರೆಯ ಎನ್ನ ಭಗವಂತ.. ಅದು ಮೃತ್ಯುವಾದರು ಸರಿಯೇ,
ಆನಂದದಿ ಅಪ್ಪಿಕೊಳ್ಳುವೆ.

-



ಹೈಕು ಸಾಹಿತ್ಯ

ಅವನೆಂದರೆ,
ನಿತ್ಯವೂ ಪ್ರೇಮಪಾಠ
ಭೋದಿಸಿದಾತ

ಅವಳೆಂದರೆ,
ನವಿಲಿಗೂ ನಾಟ್ಯವ
ಕಲಿಸಿದಾಕೆ

ಅವನೆಂದರೆ,
ನನ್ನ ಎದೆಯವೀಣೆ
ನುಡಿಸಿದಾತ

ಅವಳೆಂದರೆ
ನೋವಲ್ಲು ನಗುವುದ
ತಿಳಿಸಿದಾಕೆ

-


Fetching ಶ್ರುತಿ ಕೆ.ಜಿ ( Shruthi K.G) Quotes