ಒಂದು ಜೀವಕೆ,
ನೂರಾರು ದೇಹ,
ಹಲವಾರು ಬಾಂಧವ್ಯ,
ಎಷ್ಟೊಂದು ಸ್ನೇಹ,
ಆದರಲ್ಲಿ ಕೊನೆಗುಳಿಯುವುದೊಂದೆ,
ಪರಮಾತ್ಮನ ಪರಮಾಪ್ತವಾದ ಪ್ರೇಮ!!-
ಕದ್ದು ಕದ್ದು ನೋಡುವ ಚೋರಿ
ನೋಟದಲ್ಲೇ ಬಂಧಿಸೋ ಪೋರಿ
ತುಂಟನಗುವಲ್ಲೆ ಶಿಕ್ಷಿಸೋ ನಾರಿ
ತುಟಿಯಂಚಲಿ ಅಡಗಿದೆ ಮಧುಗಿರಿ
ಕಂಡಾಗ ದೂರ ಓಡುವ ಕುವರಿ
ನಾಟ್ಯದಂತೆ ಬಳುಕುವ ವಯ್ಯಾರಿ
ಕೋಗಿಲೆಯಂತೆ ಹಾಡುವ ಕಿನ್ನರಿ
ಅಪ್ಸರೆಯಂತಹ ಲಾವಣ್ಯದ ಸಿರಿ
ನವನೀತದಂತಹ ಮಾತಿನ ಪರಿ
ಹಾರುತಿದೆ ಮುಂಗುರುಳ ಮಂಜರಿ
ಹಂಸನಡಿಗೆ ನಯನಮನೋಹರಿ
ಘಲ್ಲೆನ್ನುವ ಇಂಪಾದ ಕಾಲ್ಗೆಜ್ಜೆ ಸುಂದರಿ-
ಬದುಕಿರುವ ತನಕ ಸಾಯೋ ಯೋಚನೆ ಮಾಡ್ಬೇಡಿ... ಬದುಕೇ ಸಾವನ್ನು ಸಾಯಿಸಿ, ನಿಮ್ಮನ್ನು ಬದುಕಿಸುತ್ತದೆ....
-
ಸಮಯ ಎಲ್ಲಿಗೆ ಹೋಯ್ತು,
ಕಾಲ ಬದಲಾಗೋಯ್ತು
ಯಾಕ ಹಿಂಗಾಯ್ತು..,
ಸಮಯವೂ ಕೇಳುವುದು ಏನಾಯ್ತು.?
ಎಲ್ಲಾ ಅಲ್ಲಿಗಲ್ಲಿಗೆ.
ಕಾಲವೇ ಹಿಂಗೆ,
ಕ್ಷಣ ಹೊತ್ತು;
ಹತ್ಕೊಂಡು ಜಗತ್ತ ಸುತ್ತು,
ಏನು..?! ಆ ಸಮಯ ನಡುಗಿತ್ತು
ಬುಗುರಿಯಾ ಜಗತ್ತು,
ಸಮಯ ಚಲಿಸುತ್ತಲಿತ್ತು...
~ಸುವರ್ಣಾ ಗೌಡ
-
ಬೆತ್ತಲೆ ಕನಸ್ಸು ಕಾಣುವ ಕಣ್ಣುಗಳಿಗೆ,
ಬತ್ತಿಹೋಗುತ್ತಿರುವ ಬದುಕು ತಿಳಿಯುವುದಿಲ್ಲ.
ಗುಪ್ತವಾಗಿ ಗರಿಬಿಡುವ ಕಾಮದ ಕಲ್ಪನೆಗೆ,
ಗುರಿಸಾಧನೆಯ ಗಮ್ಯತೆ ನೆನಪಾಗುವುದಿಲ್ಲ.
ಕ್ಷಣದ ಆಸೆಯ ಅರಸುವ ಅಜ್ಞಾನಿಗಳಿಗೆ,
ಕ್ಷಿಣಿಸುತ್ತಿರುವ ಆಧ್ಯಾತ್ಮದ ಅರಿವಾಗುವುದಿಲ್ಲ.
ಸಿರಿವಂತಿಕೆಯ ಸುಖೋಪ ಭೋಗಿಗಳಿಗೆ,
ಸೃಷ್ಟಿಯ ಸಂಚಲನೆಯ ಸ್ಥಗಿತತೆ ಸಾಧ್ಯವಾಗುವುದಿಲ್ಲ.
ಅಹಂಕಾರದ ಅರಮನೆಯ ಅರಗಿಣಿಗಳಿಗೆ,
ಅನ್ನದ ಬಳಕೆಯ ಬೆಲೆಯು ಗೊತ್ತಾಗುವುದಿಲ್ಲ.
ಪುಣ್ಯ ಸಂಪಾದನೆಯ ನಿಜ ಅರ್ಥ ತಿಳಿಯದ ಮನುಷ್ಯನಿಗೆ,
ಪೂರ್ಣತೆಯಿಂದ ಪರಮಾತ್ಮನಲ್ಲಿ ಎಂದಿಗೂ ಲೀನವಾಗುವುದಿಲ್ಲ.-
ಪ್ರಿತಿಯಲಿ ಅವಳು,
ನಿಸ್ವಾರ್ಥದಲ್ಲಿ ಇವನು,
ಆಳ್ವಿಕೆಯಲ್ಲಿ ಅವಳು,
ನೆಮ್ಮದಿಗಾಗಿ ಇವನು.
ಆಸೆ ಆಕಾಂಶೆಯಲ್ಲಿ ಅವಳು,
ಒಂದು ಸುಂದರ ಬದುಕಿಗಾಗಿ ಇವನು.
ಪ್ರೀತಿ ಒಂದೆ ಪರಿಹಾರವೆಂದಳು,
ಆದರೆ ಆ ಪ್ರೀತಿಗು ಬೇಕಿದೆ ಹೊಂದಾಣಿಕೆ..
-
ಬೆಳೆಯುತಿಹಳು ಮಗಳು
ಸಂತಸಗೊಂಡಿದೆ ಮನವು
ಸಂಗಾತಿ ರೂಪಿನವಳು
ನನಸಗಾಬೇಕಾದ
ಕನಸು ಇವಳು
ಮುಗ್ದ ನಗೆಯ
ಮುದ್ದು ಮಗಳೆ
ನೀನೆ ನಮ್ಮೆಲ್ಲರ
ಮುದ್ದಿನ ಮಗಳೆ
ಜನ್ಮ ದಿನದ ಶುಭಾಶಯಗಳು
ನೂರಾರು ವರುಷ ನಗುತ ಬಾಳು
ನಮ್ಮೆಲ್ಲರ ಪ್ರೀತಿಯ ಜಾನು💕💕💐💐
-
~~|••ನಾವು ಈಗೆ ಇರೋದು••|~~
ಅಡ್ಡ ದಾರಿಯಲಿ ಬೆಕ್ಕಿನತರ ಅಡ್ಡಾಡೊವ್ರರಿಗೆ
ಅಷ್ಟು ಧಿಮಾಕು ಇರಬೇಕಾದ್ರೇ
ಇನ್ನೂ ರಾಜಮಾರ್ಗದಲಿ ನಿಯತ್ ನಿಂದ
ಸಿಂಹದ ತರ ತಿರುಗಾಡೋ ನಂಗೆ
ಇನ್ನಷ್ಟು ಗಾಂಭೀರ್ಯ ಇರಬ್ಯಾಡ
ಟಚ್ ಮಾಡಬ್ಯಾಡ ಸ್ವಿಚ್ ಆಫ್ ಆಗ್ತಿಯಾ
ನೋಡೋಕೆ ಸೈಲೆಂಟ್
ಕೆಣುಕಿದರೆ ವೈಲೆಂಟ್
ನಾನು ಯಾವಾಗಲೂ ಡಿಫರೆಂಟ್ 😎-
ಮುಸ್ಸಂಜೆಯ ಝೇಂಕಾರ
ಝುಳು ಝುಳು ಹರಿವ
ಸಲಿಲದೋಟದ ಕವ್ವರ
ಬಾನಾಡಿಗಳಿಂಚರದ ಗಾನವ
ನೋಡುವ ಕಣ್ಗಳಿಗಿಂಪು
ಆಲಿಸೋ ಕರ್ಣಕೊಳಗಳಿಗಂಪು
ನೋಡುತಿದ್ದರೆ ಕಣ್ಮನಗಳ ಸೆಳೆಪು
ಹೃನ್ಮನಗಳ ಹರ್ಷದೊನಲ ಹೊಳಪು...
ಈ ಸಂಜೆ ರಸವೇಳೆಯಿದು
ಮನಕ್ಕೊಂತರ ಆಹ್ಲಾದದ ಕರೆಯಿದು
ಅರ್ಕನ ಬೀಳ್ಕೊಡುಗೆಯ ಸಮಯವಿದು
ಶಶಾಂಕನ ಆಗಮನದ ಘಳಿಗೆಯಿದು..
ಹಸಿರು ಸಿಂಚನ ಹರಿವ ನರ್ತನ
ಮನಸೂರೆಗೊಳ್ಳುವ ಗಾಯನ
ತಕಧಿಮಿತ ನಾದಸ್ವರಗಳ ಸಂಚಲನ
ಮೇಳೈಸುತಿದೆ ಸ್ವರಮಾಧುರ್ಯದ ಗಾನ...-