Ranganath Kalagati★   (ಕೆ. ರಂಗನಾಥ...✍)
603 Followers · 38 Following

read more
Joined 2 November 2019


read more
Joined 2 November 2019
10 NOV 2024 AT 23:57

ಸಿಗಬೇಕೆಂದು ಮೆಚ್ಚುಗೆ,
ಹೇಳಿಕೊಳ್ಳುವುದು ಸರಿಯಲ್ಲ
ನಮ್ಮ ಬಗ್ಗೆಯೇ ನಾವು ಹೆಚ್ಚಿಗೆ...!!

-


14 JUN 2024 AT 18:31

ಪ್ರತಿನಿತ್ಯ ಕಷ್ಟ ಸುಖಗಳ ಉಗಮ,
ನೋವು ನಲಿವುಗಳ ಸಂಗಮ,
ಈ ಎಲ್ಲವನ್ನೂ ಸ್ವೀಕರಿಸುವ ನೀ ಸಮ,
ಇರಲಿ ಎಲ್ಲದಕ್ಕೂ ಒಂದು ಕ್ರಮ,
ಆಗ ನೋಡು ಬದುಕಿನ ಸಂಭ್ರಮ...!!
~ಕೆ. ರಂಗನಾಥ

-


8 JUN 2024 AT 22:39

ಸದಾ ನಿನ್ನ ನಗುವ ಹೊಳಪಿನಲ್ಲಿ ಬಂಧಿಯಾಗಲು ಬಯಸಿದವ ನಾ...! ಆದರೆ ಏನು ಮಾಡಲಿ, ಆ ನಿನ್ನ ನಗುವ ಸಲುವಾಗಿಯೇ, ನಾನಿಂದು ನಿನ್ನಿಂದ ದೂರಾಗಿ ಕೇವಲ ನಿನ್ನ ನೆನಪಿನ ಬಿಸಿಯಲ್ಲಿ ಬೆಂದು ಹೋಗುವಂತಾಗಿದೆ...!!

-


8 JUN 2024 AT 20:03

ಅದನ್ನ ಕಳೆದುಕೊಂಡರೆ, ನಮ್ಮ ಸಂಬಂಧಕ್ಕೆ ಮುಕ್ತಿ,
ಉಳಿಸಿಕೊಂಡು ಹೋದರೆ ಇಬ್ಬರಿಗೂ ಸೂಕ್ತಿ...!!

-


8 JUN 2024 AT 19:52

ಸೌಂದರ್ಯ ಎಂದರೆ,
ಕಪ್ಪೂ ಅಲ್ಲ, ಬಿಳುಪೂ ಅಲ್ಲ,
ಎಂದೂ ಮುಪ್ಪಾಗದ
ಮಾನವೀಯತೆಯ ಮನಸ್ಸು...!!

-


31 MAY 2024 AT 1:00

ಕಷ್ಟಗಳ ಬಗ್ಗು ಬಡೆಯುತ,
ನೋವುಗಳನ್ನ ನೆಲಕ್ಕುರುಳಿಸುತ,
ಪ್ರತಿದಿನವೂ ಜೀವನದೋಳ್
ನಗುತ ಬದುಕುವವ ನಿತ್ಯವೂ
ವಿಜಯೀಭವ...!!

-


8 OCT 2023 AT 18:53

ಬಹಳ ಜಾಗರೂಕತೆಯಿದ ನಿಭಾಯಿಸಬೇಕು.
ಜಾರಿ ಬಿದ್ದ ಕನ್ನಡಿ ಹಿಡಿದು ಹೋದಂತೆ,
ಹೃದಯವೂ ಹೊಡೆದು ಹೋಗಬಹುದು...!!

-


16 AUG 2023 AT 23:21

ದೂರ ತಳ್ಳಿದವರೇ,
ಬರಬೇಕು ಯಾವುದೋ
ಒಂದು ದಾರ ಇಡ್ಕೊಂಡು ನಿನ್ನ ಬಳಿ,
ಹಂಗ ನೀ ಬೆಳಿ...!!

-


24 FEB 2023 AT 19:25

ಎಚ್ಚರವಿದ್ದಾಗ ನೆನಪುಗಳು ಕೊಂದರೆ,
ಮಲಗಿದ್ದಾಗ ಕನಸುಗಳು ಕೊಲ್ಲುತ್ತಿವೆ...!!

-


12 NOV 2022 AT 20:07

ಕೆಲವೊಂದು ಸಾರಿ ಜವಾಬ್ದಾರಿಯ ವಿಷಯ
ಜೀವನದಲ್ಲಿ ಪಾಷಾಣದಿಂದ ಪಾಯಸ
ದಕ್ಕಿಸಿಕೊಳ್ಳುವುದನ್ನು ಕಲಿಸುತ್ತದೆ...!!

ಜೀವನಕ್ಕಾಗಿ ಜೀವವನ್ನೇ ಪಣಕ್ಕಿಟ್ಟು
ಹೋರಾಡುವುದನ್ನು ಕಲಿಸುತ್ತದೆ...!!

-


Fetching Ranganath Kalagati★ Quotes