-
ನನ್ನ ರಚನೆಯ ಕವನಗಳು ಈಗ ಯೂಟ್ಯೂಬಿನಲ್ಲಿ ಕೇಳಲು ಸಿದ್ಧವಾಗಿದೆ... read more
ಸಾರವತ್ತಾದ ವಿಷಯವನ್ನು ಬೇಸರದಿಂದ
ಆರಂಭಿಸಿ ಬೆಯುತ್ತಿರುವ ದುಃಖ ಪಾಕವನ್ನು ವಿರಹವೆಂಬ ಪಾತ್ರೆಯಲ್ಲಿ ಹಾಕಿ
ಲೇಖನಾಸೌಟಿನಲ್ಲಿ ಕಾಗದವೆಂಬ ಎಲೆಯಲ್ಲಿ ಉಣಬಡಿಸಿದನು. ಅದನ್ನು ಸ್ವೀಕರಿಸಿ ನಿಮ್ಮ ಅನಿಸಿಕೆಯನ್ನು ತಿಳಿಸಲು ಕೇಳಿಕೊಂಡನು.-
ಬೇಕು ಬೇಡಗಳ ಗುದ್ದಾಟ
ಮುಸುಕಿನೊಳಗೆ ಒದ್ದಾಟ
ತಾಕಿತು ತುಂಟ ಕುಡಿನೋಟ
ಮನದೊಳಗೆ ತೊಳಲಾಟ
ಕಂಡಾಗ ಹೇಳುವ ಬಯಕೆ
ದಿಟ್ಟಿಸಿ ನೋಡಿದರೆ ಹಿಂಜರಿಕೆ
ಅರಹುವುದಂತೂ ಮರೀಚಿಕೆ
ಅರ್ಥೈಸಿಕೊಳ್ಳೆಂಬ ಕೋರಿಕೆ
ಒಲವಿನಲ್ಲಿ ಸಲ್ಲದೆಂದಿಗೂ ಹಠ
ನೀಡದಿರು ವಿರಹವೇದನೆ ಕಾಟ
ಮಾಡುವೆ ಸರಸ ಸಲ್ಲಾಪ ಪಾಠ
ನನ್ನೊಂದಿಗೆ ಆಡದಿರು ಚೆಲ್ಲಾಟ-
ನೆನೆಯುವ ನೆನಪು ಮರೆತು, ನೆನೆಯಲಾರದ ನೆನಪು ಸ್ಮೃತಿಯಲ್ಲಿ ಚಿರವಾಗಿ ಉಳಿದು
ಮನಸ್ಸಿಗೆ ನೋವುಂಟು ಮಾಡುವುದು ಸಹಜ,
ಬೇಡವಾದ ನೆನಪಿನಲ್ಲಿ ಕೊರಗದೇ ಚಿತ್ತವನ್ನು ಬೇರೆ ಕೆಲಸದಲ್ಲಿ ತೊಡಗಿಸಿ, ನಶ್ವರ ಬದುಕೆಂಬ ಸತ್ಯವನ್ನರಿತು ಕಳೆದ ಕಹಿಯನ್ನು ಕೊಂದು ಇರುವಷ್ಟು ದಿನ ನಾಲ್ಕಾರು ಜನರು ನಮ್ಮನ್ನು ನೆನೆಯುವಂತೆ ಬದುಕಿ, ಬಾಳನ್ನು ಬಂಗಾರವಾಗಿಸಬೇಕು.-
ಜೀವಕೋಶವನ್ನು ನಾಶಗೊಳಿಸಿ ಅನಾರೋಗ್ಯಕ್ಕೆ ಮೂಲ
ಎಲ್ಲರೂ ದೂರಾಗುವಂತೆ ಮಾಡುವ ದುಃಖವೆಂಬ ದುಷ್ಟ ಜಾಲ-
ಈ ತನುವು ಸೋತು ಶರಣಾಗಿಹೆ
ಒಲವ ಕೋಳವನ್ನು ತೊಡಿಸಿ ಬಂಧಿಸು
ಹೃದಯದ ಬೀಗ ನಿನಗೊಪ್ಪಿಸಿಹೆ
ಬಲಗಾಲಿಟ್ಟು ಮನದೊಳಗೆ ಪ್ರವೇಶಿಸು-