ಸಾಮಾನ್ಯವಾಗಿ ಕಲಿತ ಕಲಿಕೆ ಗಳಿಗಿಂತ
ತಪ್ಪುಗಳಿಂದ ಕಲಿತ ಕಲಿಕೆ ಗಳು ಉತ್ತಮವಾಗಿಯೂ
ಮತ್ತು ಶಾಶ್ವತವಾಗಿಯೂ ಇರುತ್ತದೆ.
-
♂ ಕವಿತ... read more
ಕನಸಲ್ಲಿ ಆಡಂಬರ ಇರಲಿ
ಆಡಂಬರದ ಜೊತೆ ಶ್ರೀಮಂತಿಕೆ ಇರಲಿ
ಶ್ರೀಮಂತಿಕೆಯಲ್ಲಿ ಮನುಷ್ಯತ್ವ ಇರಲಿ
ಮನುಷ್ಯತ್ವ ದಲ್ಲಿ ನಂಬಿಕೆ ಇರಲಿ
ನಂಬಿಕೆ ಇದ್ದಲ್ಲಿ ನೆಮ್ಮದಿ ಇರುತ್ತದೆ..
ಮತ್ತೆ ಏನು ಬೇಕು ?
ಕನಸು ನನಸಾದರೆ ಸಾಕಲ್ಲವೇ..-
ಕನಸುಗಳು ದೊಡ್ಡದಿರಲಿ
ಆಸೆಗಳು ಸಣ್ಣದಿರಲಿ
ಛಲ ಎಂಬುದು ಕುಗ್ಗದಿರಲಿ
ಗುರಿ ಎಂಬುದು ಕರಗದಿರಲಿ
ಯಶಸ್ಸು ನಿಮ್ಮದಾಗಿರಲಿ
ನಿಮ್ಮತನವು ಬದಲಾಗದಿರಲಿ..
-
ಅರಿವಿಲ್ಲದೆ ಬೆಳೆಯುವ ಸಮಯದಲ್ಲಿ
ಮಾಡುವ ತಪ್ಪುಗಳನ್ನು
ಬುದ್ದಿ ಬಂದಮೇಲೆ ತಿದ್ದಿಕೊಳ್ಳಬೇಕು
ಹೊರೆತು
ನಮ್ಮ ತಪ್ಪುಗಳನ್ನು
ತಿದ್ದುವರು ಬರಬೇಕೆಂದು ಕಾಯಬೇಡಿ..
ವಿವೇಕತನದಲ್ಲಿ ಮುಂದುವರೆಯಿರಿ..-
ಅಲ್ಪ ಸ್ವಲ್ಪ ತಿಳಿದವರು
ಮಾಡುವ ತಪ್ಪುಗಳನ್ನು
ಬುದ್ದಿವಂತವರಾದ ನಾವುಗಳು
ಮನಸ್ಸಾರೆ ಕ್ಷಮಿಸಿ ಬಿಡಬೇಕು..
ಏಕೆಂದರೆ,
ಬುದ್ದಿವಂತಿಕೆ ಎಂಬುದು
ದೊಡ್ಡ ಮನಸ್ಸು ಎಂಬುದು
ಎಲ್ಲಾರಿಗೂ ಇರುವುದಿಲ್ಲ
ಮತ್ತು ಎಲ್ಲಾರಿಗೂ ಸಿಗುವುದಿಲ್ಲ..-
ಒಂದು ಹೊಸ ಅನುಭವದ ಆರಂಭ
ಹಳೆ ನೆನಪುಗಳ ಅನಾವರಣ..
ಹೊಸ ಪರಿಚಯಗಳು
ಹಳೆ ಪರಿಚಯದ ಮಿಲನ ಗಳು..
ದುಃಖವಾದರೆ ಅರ್ಧಕ್ಕೆ ನಿಲ್ಲುವ ಪ್ರಯಾಣ
ಸುಖವಾಗಿದ್ದಾರೆ ಮತ್ತೊಮ್ಮೆ ಪ್ರಯಾಣ..-
ಈ ಸುಡು ಬಿಸಿಲ ಧಗೆ ಧಗೆ ಯಲ್ಲಿಯೂ
ಕಾಡಿವೆ ನಿನ್ನ ಅಂದದ ಸೊಬಗು..
ಒಮ್ಮೆ ನಿನ್ನ ಅಂದವ ತೋರಿಸಿ
ನನ್ನನ್ನು ಮುಳುಗಿಸೆ , ನಿನ್ನ ಚೆಂದ ದ ನಶೆಯಲ್ಲಿ..
ಬಿಡುವು ಮಾಡಿಕೊಂಡು ಬಂದು ,
ನಿನ್ನ ಸ್ಪರ್ಶ ದಲ್ಲಿ ನನ್ನನ್ನೇ ಮರೆಸಿಬಿಡು ,
ನನ್ನ ಪ್ರಪಂಚವೇ ನೀನು ಆಗುತ್ತಾ ..♥️
-
ಹತಾಶೆ ಗಳು ಯಾರಿಗಿಲ್ಲ ?
ಪ್ರತಿಯೊಂದು ಜೀವಿಗಳಲ್ಲೂ ಹತಾಶೆಗಳಿವೆ
ಬಗೆ ಹರಿಸಲಾಗದ ಸಮಸ್ಯೆಗಳು ಇವೆ..
ಹೀಗಿದ್ದರು ಸಹ ,
ಇವನ್ನೆಲ್ಲ ಮೆಟ್ಟಿ ನಿಲ್ಲುವವರು ಮಾತ್ರ
ಸಾಧನೆ ಮಾಡುವವರ ಸಾಲಿನಲ್ಲಿ ಸೇರುತ್ತಾರೆ..
-
ಬೇಡ ಅಂದುಕೊಂಡರು
ನಡೆದು ಹೋಗುವ ತಪ್ಪುಗಳಿಂದ
ಆಕಸ್ಮಾತ್ ಆಗಿ
ಆಗಿ ಹೋಗುವ ತಪ್ಪುಗಳಿಂದ
ನೊಂದುಕೊಳ್ಳದೆ
ತಪ್ಪು ಗಳಲ್ಲಿರುವ ಪಾಠವನ್ನು ಕಲಿಯೋಣ..-