ನಿನ್ನೊಳಗಿನ ಸಾಧಕ ನೀನೆ 🌟🌟🌟   (ಸಿದ್ದೇಶ್ ಹೊನ್ನಳ್ಳಿ)
620 Followers · 115 Following

read more
Joined 14 February 2021


read more
Joined 14 February 2021

*ಗಜಲ್ *

ಧರ್ಮದ ಹೆಸರಿನ ನೆತ್ತರು ಅಂಟಿದ ನೆಲದಲ್ಲಿ ಮಾನವೀಯತೆ ಉಳಿಯುವುದಿಲ್ಲ ಗಾಲಿಬ್
ಆವೇಶದಿಂದ ಉದ್ರೇಕಗೊಂಡ ಮಿಸೈಲ್ ಬಾಂಬುಗಳಿಗೆ ಕರುಣೆಯಿರುವುದಿಲ್ಲ ಗಾಲಿಬ್

ರಕ್ಕಸತನದಿ ಕದನಕ್ಕಿಳಿದ ಗಗನದ ಹಕ್ಕಿಗಳು ಜನಗಳ ಎದೆಯ ಮೇಲೆ ಕಾಲಿಟ್ಟು ಕುಕ್ಕುತಿವೆ
ಯುದ್ದದ ರಣಕೇಕೆ ಜೋರಾಗಿರಲು ನೆಮ್ಮದಿಯ ಬದುಕು ಜನರಿಗೆ ದಕ್ಕುವುದಿಲ್ಲ‌ ಗಾಲಿಬ್

ಎಂದೋ ಹುಟ್ಟಿದ ಧರ್ಮದ ಜ್ವಾಲಾಮುಖಿಯ ಲಾವರಸ ಬೆಂಕಿಯ ನದಿಯಾಗಿ ಹುಕ್ಕಿ ಹರಿಯುತಿದೆ
ನೆನ್ನೆ ಮೊನ್ನೆಯ ನೆನಪುಗಳು ಇದೀಗ ಮಾಯಾದ ಹುಣ್ಣಾಗುವುದು ಸುಳ್ಳೆಂದುನೆಸುವುದಿಲ್ಲ ಗಾಲಿಬ್

ಅರಳದ ಮಲ್ಲಿಗೆಗಳಿನ್ನು ಕೋಮುಭಾವದಿಂದ ಬಳಲುತ್ತ ಬಾಡುತಿವೆ ಮೆಲ್ಲನೆ ಮಡಿಯುತಿವೆ
ಹೆಜ್ಜೆ ಹೆಜ್ಜೆಗೂ ಯುಧ್ಧದ ಕಹಿ ನೆನಪು ಅದರ ಹೊಡೆತದ ನೋವು ಕಾಡದೆ ಬಿಡುವುದಿಲ್ಲ ಗಾಲಿಬ್

ಹೃದಯ ಕಲ್ಲಾಗಿವೆ ಮಾನವಿಯತೆ ಮಣ್ಣಾಗಿದೆ ಸಹೋದರತ್ವ ಭಾವನೆ ಕಣ್ಮರೆಯಾಗುತಲೆ ನಿಂತಿದೆ
ಧರ್ಮದ ಮತ್ತು ನೆತ್ತಗೇರಿಸಿಕೊಳ್ಳಲು ಈ "ಸಿದ್ದನ" ಮನಸು ಅವಕಾಶ ಕೊಡುವುದಿಲ್ಲ ಗಾಲಿಬ್

-



ಸಮಯದ ಮುಳ್ಳು ಸರಿದಿದೆ,
ಅಪ್ಪನ ಭುಜ ಸವಿದುಹೋಗಿದೆ,
ಅಮ್ಮನ ಕಣ್ಣಲಿ ಕಂಬನಿ ತುಂಬಿದೆ,
ನಮ್ಮ ಬರುವಿಕೆಯಲಿ ಜೀವ ಕಾಯುತಿದೆ,
ಓದುವ ಕಿಚ್ಚು, ಬದುಕುವ ಹುಚ್ಚು,
ಹಚ್ಚೋತ್ತಿದೆ ಹಸಿದ ದೇಹದೊಳಗೆ.
ಎದ್ದು ಬಿದ್ದು ಗೆದ್ದು ಹೋಗಬೇಕು,
ಮನೆಗೆ ಆಸೆರೆಯ ಊರಾಗೋಲಾಗಬೇಕು,
ಅತ್ತರು ಸರಿ ಹಸಿದರು ಸರಿ,
ಈ ಬಾರಿ ನೌಕರಿ ಹಿಡಿಲೆಬೇಕು....

-



ವನದೊಳು ಮೊಗ್ಗಾಗಿ ಅರಳಿದ ಕಾಡು ಮಲ್ಲಿಗೆ ನೀನಾಗಬೇಡ ಸಖಿ
ಈ ಇನಿಯನ ಸಂಘವ ತೊರೆದು ಒಂಟಿಯಾಗಿ ಹೋಗಬೇಡ ಸಖಿ

ಅಂಬರದ ಆಗಸಕೆ ನನ್ನ ನಿನ್ನ ಹೆಸರಿನ ರಂಗೋಲಿಯೋಂದನಿಕ್ಕುವೆ
ನಾ ನಿನಗೆ ನೀ ಎನಗೆ ಎಂಬ ಮಾತದೊಂದಿದೆ ಕಡಗಣಿಸಬೇಡ ಸಖಿ

ನೀ ಹೊರಟ ಹಾದಿಗೆ ನಾ ಬರುವ ಹೊತ್ತಿಗೆ ಸಂಜೆಯಾಗಬಹುದೇನೊ
ಹೆದರಿ ನಿಂತು ಒಂಟಿಯಾದೆಂದು ಕಾರ್ನಿಯ ಕೆಂಪಾಗಿಸಬೇಡ ಸಖಿ

ಮುಂಜಾವಿಗೆ ನನ್ನದೊಂದು ಹಾಜರಿ ನಿನ್ನ ಕನಸಿನ ಅರಮನೆಗೆ ಇರಲಿ
ಸಾವಿರ ನೋವುಗಳಿದ್ದರು ಸಾಧಿಸುವ ಛಲವೊಂದು ಬಿಡಬೇಡ ‌ಸಖಿ

ಹೆದರದ ಬೆದರದ ಬಯಕೆಯೊಂದು ಹೂ ದೋಟದಿ ಅರಳಿತು‌ ಕಣೆ
ನಗುವ ನಯನಗಳಿಗೆ ನೀನೆಂದು ಬರಗಾಲವನು ತಂದಿಡಬೇಡ ಸಖಿ

ನೋವಾದರು ಸಾವದರೂ ನಿನ್ನ ಅಂಗೈಯಲಿ ನನ್ನ ಅಂಗೈಯೊಳಿರಲಿ
ನಾ ನಿನಗಾಗಿ ಸದಾ "ಸಿದ್ದ" ನಾಗಿಹೆನು ಮರೆತು ಮುನ್ನುಗ್ಗಬೇಡ ಸಖಿ

-



*******ಗಜಲ್ ********

ಎನ್ನೆಯದೆಯ ಮೇಲೊಂದು ಪುಟ್ಟ ಸಸಿ ನೆಟ್ಟು ಹಾರೈಸಿದವರು ನನ್ನ ಗುರುಗಳು
ಧೈರ್ಯ ಸಾಹಸದ ರೂಪರೇಷೆಯ ತೊಡಿಸಿಟ್ಟು ಬೆಳೆಸಿದವರು ನನ್ನ ಗುರುಗಳು

ಅಂಧನಾದ ಬವಣೆಯ ಬದುಕೊಳು ಬೆಳಕಿನ ಹೊಂಗಿರಣದ ಪ್ರವೇಶ ನಿಮ್ಮಿಂದ
ಕರಿ ಫಲಕದ ಮೇಲೆ ಭವಿಷ್ಯದ ರಹದಾರಿಯ ತೋರಿಸಿದವರು ನನ್ನ ಗುರುಗಳು

ಬೇಡಿದರು ನೀಡುವರಿಲ್ಲ ಅನ್ನವನು ಬೇಡದೆಯೆ ನೀಡಿದರು ಭವ್ಯತೆಯ ಜ್ಞಾನವನು
ಬೆತ್ತ ಹಿಡಿದು ಚಿತ್ತವ ಪಡೆದು ಮನ ಎತ್ತ ಹೋಗದಂತೆ ಹಿಡಿದಿಟ್ಟವರು ನನ್ನ ಗುರುಗಳು

ಕತ್ತಲ ಜಗತ್ತಿನೊಳು ಅಕ್ಷರ ಜ್ಯೋತಿಯ ಹಚ್ಚೊತ್ತಿಸಿ ಬೆಳಕ ಹರಿಸುವುದೆ ಧರ್ಮ
ಅರಿಯದೆ ಮಾಡಿದ ತಪ್ಪಿಗೆ ಮರಿಯದೆ ಶಿಕ್ಷಿಸಿ ನನ್ನನು ತಿದ್ದಿದವರು ನನ್ನ ಗುರುಗಳು

ನಾ ಹೆದರುವವನಲ್ಲ ಗೌರವಿಸುವವನು ತಾ ಗದರುವಾತನಲ್ಲ ನಿಜವಾದ ಗುರುವಾತನು
'ಸಿದ್ದ' ರೆಂಬ ಸಿದ್ದಿಯ ಬದುಕಿಗೆ ಅಡಿಪಾಯ ಹಾಕಿಕೊಟ್ಟವರು ನನ್ನ ಗುರುಗಳು

-



*ಸಂಜೆಯ ಕತ್ತಲಿಗೊಂದು ಬೆಳಕು ಬೇಕಿತ್ತು *

ಹೆತ್ತು ಹೊತ್ತು ಮೂರು ಒಪ್ಪೊತ್ತು ಮುತ್ತಿಕ್ಕಿ ಮಡಿಲಲಿ ಸಲುವಿದವರು ಅಪ್ಪ ಅಮ್ಮ ಗಾಲಿಬ್
ತಾವು ರಾತ್ರಿಯ ರೊಟ್ಟಿಯ ತಿಂದು ನಮಗೆ ಮೃಷ್ಟಾನ್ನ ಉಣಿಸಿದವರು ಅಪ್ಪ ಅಮ್ಮ ಗಾಲಿಬ್

ಕಂಗಳ ತುಂಬಾ ನೆತ್ತರು ಹರಿದಿತ್ತು ಸಂಜೆಯ ಬಿಸಿಲ್ ನೆತ್ತಿಯ ಮೇಲಿತ್ತು 70ರ ವಯಸ್ಸು ಗಡಿ ದಾಟಿತ್ತು
ಸವಿವಿರವಾಗಿ ಹೇಳದ ನೋವುಗಳ ಮನದಲಿ ಅವಿದಿಟ್ಟು ಮುಗಳ್ನಗೆ ಬೀರಿದವರು ಅಪ್ಪ ಅಮ್ಮ ಗಾಲಿಬ್

ಅರುವು ಮರುವಿನ ನಡುವೆ ಮನದಲಿ ಕರುಣೆಯ ಕಿರಣ ಸದಾ ಕಾಲ ಪ್ರಜ್ವಲಿಸುತಿತ್ತು ಹೆತ್ತ ಕರಳುಗಳತ್ತ
ಸಂಜೆಯ ಕತ್ತಲಿಗೊಂದಿಷ್ಟು ಬೆಳಕ ಹುಡುಕಿ ಮೇಣದ ಬತ್ತಿಯ ಬೆಳಕಲಿ ಬೆಂದವರು ಅಪ್ಪ ಅಮ್ಮ ಗಾಲಿಬ್

ನಾ ನಿನಗೆ ನೀ ಎನಗೆ ಎಂಬ ಮಾತು ಮುಪ್ಪಾದ ಜೀವಗಳಿಗೆ ಆಸರೆಯ ಬೀದಿ ದೀಪವಾಗಿ ಇಂದು ಸುಳ್ಳಾಗಿವೆ
ಅದೆ ಹರಿದ ರವಿಕೆಯಲಿ ನೋವಿನ ಕುಣಿಕೆಯಲಿ ನೂರ್ ಕನಸುಗಳ ಚಿತ್ತಾರವ ಗೈದವರು ಅಪ್ಪ ಅಮ್ಮ ಗಾಲಿಬ್

ನಡು ರಸ್ತೆಯಲಿ ನಿಂತು ಹೋದ ಪಯಣ ಮಕ್ಕಳ ಬರುವಿಕೆಯ ಕಾಯುವಿಕೆ ಅದ್ಯಾಕೋ ಸುಳ್ಳಿನ ಕನವರಿಕೆ
ಕಾರ್ನಿಯ ಕೆಂಪಾದರು ನಮಗಾಗಿ ಬೆವರಿಳಿಸಿ ಬೆನ್ತಟ್ಟಿ ಬೆಳೆಸಿ ಸಂತಸ ಕಂಡವರು ಅಪ್ಪ ಅಮ್ಮ ಗಾಲಿಬ್

ಸಂಕಟದ ಸಲ್ಲಾಪದ ನಡುವೆ ಸೋತ ಹೃನ್ಮನಗಳ ವಿರಹದ ಜ್ವಾಲೆಯಲಿ ಮುಗಿದಿತ್ತು ವಯಸ್ಸಾದವರ ಈ ಪಯಣ
ಮಕ್ಕಳ ಉಳಿವಿಗಾಗಿ ಶ್ರೇಯಸ್ಸಿನ ಉತ್ತುಂಗದ ಬದುಕಿಗಾಗಿ ಮುಡಿಪಾಗಿಡಲು 'ಸಿದ್ದ' ರಿದ್ದವರು ಅಪ್ಪ ಅಮ್ಮ ಗಾಲಿಬ್

-



ದುಡುಕಬೇಡ ಬದುಕೆ ಮರ್ಕಟ ಮನಸ್ಸಿನ ಮಾತಿನ ಸೆಳೆತಕೆ
ಒಮ್ಮೆ ಎಡವಿ ಬಿದ್ದರೆ ನೀ ಸೇರಿಬಿಡುವೆ ಪಾಪದ ಪಾತಳಕೆ
ಹೆತ್ತವರ ಹೊಂಗನಸ ಚಿವುಟಬೇಡಿ ಸಾಧನೆ ಹಾದಿ ಮರಿಬೇಡಿ
ಒಮ್ಮೆ ಮನಸಿನ ಮೌನವ ಮುರಿದು ಹೆತ್ತವರನು ನೋಡಿ

ಅದೆ ಅಪ್ಪನ ಹರಿದ ಬಟ್ಟೆಯಲಿ ನೂರು ಕನಸುಗಳುಂಟು
ಅಮ್ಮನ ಸೆರಗಿನ ಗಂಟಲಿ ನಿನಗಾಗಿ ಸಂತಸವೊಂದುಂಟು
ಎಲ್ಲಾವ ಮರೆತು ವ್ಯಾಮೋಹದ ಪಾಶಕೆ ತುತ್ತಾಗದಿರಿ
ತುತ್ತು ಅನ್ನವ ಇಟ್ಟವರಿಗೆ ಎಂದಿಗೂ ಮೋಸ ಮಾಡದಿರಿ

ಒಮ್ಮೆ ಎದ್ದು ನೋಡು ಜಗದಗಲದಡೆಗೂ ಸಾಧಕರನು
ಹಿಂಬಾಲಿಸು ನೀನು ನಿನ್ನೊಳಗಿನ ಹಠದ ಜ್ವಾಲೆಯನು
ಕಂಡರು ಕಾಣದಂತೆ ಬೂದಿ ತುಂಬಿದ ಕೆಂಡದಂತಿರು
ಒಮ್ಮೆಲೆ ಅಪ್ಪಳಿಸುವ ಸುನಾಮಿಯಂತೆ ಬದುಕಿರು

ಯೌವನ ಕಳೆದು ಮುಪ್ಪು ಬರುವುದು ಖಂಡಿತಾ
ನೀನು ಗೆದ್ದೆ ಗೆಲ್ಲುವೆ ಗೆಳೆಯ ಇದು ನಿಶ್ಚಿತ
ಎದ್ದೇಳು ಮೊದಲು ಗುರಿ ಮುಟ್ಟು ಗುರುಗಳ ಪಾದಗಳಡಿಯಲಿ
ಗಟ್ಟಿಯಾಗಿ ಹೇಳು ನನ್ನ ತಾಯಿ ಭಾರತಾಂಬೆ ಶುದ್ದ ಮನಸಿನಲಿ

-



ಬಣ್ಣದ ಬಾಳು ಬದುಕು ಬರಿ ಗೋಳು✌️
ಕ್ಷಣಕಾಲ ನಗುವು ಚಿರಕಾಲ ನೋವು 🥺
ಹಸಿ ಹಸಿರ ನಡುವೆ ಉಸಿರು ಬಿಗಿಗಟ್ಟಿದೆ🙃
ಬಾಯಾರಿದ ಬಯಕೆ ಅಸುನೀಗಿದೆ 😒
ಕೈಗೆಟುಕದ ಕನಸು ಒಲ್ಲದ ಮನಸು 🖤
ಬಿರುಸಾಗಿದೆ ಈ 20 ರ ವಯಸ್ಸು 💖
ಗೂಡು ಬಿಟ್ಟು ಹೊರಟವ 😏
ತಪ್ಪು ದಾರಿ ತುಳಿಯದವ 💫
ಜವಬ್ದಾರಿಯಲಿ ಸಂತೆಯಲಿ ⭐
ಹುಚ್ಚನಂತೆ ನಿಂತಿಹನಲ್ಲಿ 😶
ಕನವರಿಕೆಯ ಕನಸು ❤️
ನೋವಿನ್ನು ಹಸಿಕೂಸು 💙
ಸಂಕಟ ಸಲ್ಲಾಪ ಯಾರಿಗಿಲ್ಲ 😕
ನಮ್ಮವರು ಇಲ್ಲಿ ಯಾರಿಲ್ಲ 🙂
ಯಾರೂ ಕೇಳಾರು ನಿನ್ನ ವಿರಹ 💔
ಸಾಕು ಮಾಡು ಈ ನಿನ್ನ ವ್ಯರ್ಥ ಬರಹ 🥺

-



ಚೂರೆ ಚೂರು ಆಸೆಗಳ
ಕಂಗಳಲಿ ಕಾಯ್ದುಕೊಂಡು
ನಡೆದಿಹಳು ಕನಸುಗಳ
ಪಯಣದಲಿ ತನ್ನದೆ ದಾರಿಯಲಿ
ಕೆಡುಕ ಒಳಿತುಗಳ ಸಂತೆ
ಅದೇನೋ ನೋವಿನ ಚಿಂತೆ
ನೆಲ್ಮೆಯ ನಾಳೆಗಳ ಭರವಸೆಯಲಿ
ಇಂದಿನ ದಿನ ಮರೆಮಾಡುತಿಹಳು
ಕಣ್ಣೀರ ಮೌನದೊಳಗೆ ಅವಳಲ್ಲಿ
ಅರ್ಥವಾಗದೆ ಉಳಿದು ಹೋದ
ಮನದೊಳಗಿನ ಬಯಕೆಗೆಳು
ಹೆಣ್ಣೆಂದರೆ ಆಟಿಕೆಯ ವಸ್ತು
ಹೆಣ್ಮನ ಹೇಗೆಂದು ಅವರಿಗೇನು ಗೊತ್ತು
ಆ ಸುಂದರ ಬೆಳಗಿನ ಮುಂಜಾವು
ಮಾಗದೆ ಉಳಿದ ಹೋದ‌ ಮಾವು
ಗಾಯದ ಮೇಲೆ ಮತ್ತೊಂದು ನೋವು
ಅರಿಯದೆ ಹೋದ ಕಲ್ ಹೃನ್ಮನಗಳೆ
ನೀವು ತಿಳಿದಿರಿ ಹೆಣ್ಣೆಂದರೆ ಬರಿ ಅಬಲೆ
ಸಾವಿನ ಜೊತೆ ಸೆಣಸಾಡಿದಳು ಹೆಣ್ಣಾಗಿ ಹುಟ್ಟಿ
ನೀನೆನು ಮಾಡಿದಿಯೋ ಗಂಡಾಗಿ ಹುಟ್ಟಿ
ತುಸು ನೆಮ್ಮದಿ ತಂಗಾಳಿ ಅವಳಿಗೆ ಬೇಕು
ಚುಚ್ಚು ಮಾತುಗಳ ಹಿಂಸೆಯಿನ್ನು ಸಾಕು
ಒಮ್ಮೆ ಅಂತರಂಗದ ಕಣ್ತೆರೆದು ನೋಡು
ಹೆತ್ತಾಕಿಯ ಕತ್ತು ಹಿಸುಕುವುದು ಬಿಡು

-



°•°•°ತನ್ನೊಡಲ ನೆತ್ತರ ಬಸಿದ ಅಮ್ಮನಿಗೆ ಈ ಗಜಲ್ °•°•°

ನನ್ನ ಸುತ್ತುವರೆದ ಕಾನನದ ಕತ್ತಲಿಗೆ ಥಟ್ಟನೆ ಹೊಂಬೆಳಕ ದಾರಿ ದೀಪವ ಹಚ್ಚುವವಳು ನನ್ನಮ್ಮ
ಸಾಮೀಪ್ಯವಿರದಿದ್ದರೂ ಕರುಳ ಕುಡಿಯ ವಿರಹ ಗ್ರಹಿಸುವ ಗೃಹದೇವತೆಯವಳು ನನ್ನಮ್ಮ

ತಾ ಹಸಿದು ಬಸವಳಿದರು ನನ್ನಯ ಒಡಲಿಗೆ ಅಮೃತವನಿಟ್ಟು ಸಲುವಿ ಸಾಕಿದ ಮುಗ್ದಜೀವ
ಅಮ್ಮ ಎಂದು ನಾ ಬಿಗಿದಪ್ಪಿದಾಗ ಬಾ ಕಂದನೆಂದು ತಬ್ಬಿಕೊಂಡು ಸಂತೈಸಿದವಳು ನನ್ನಮ್ಮ

ಬದುಕಿನುದ್ದಕ್ಕೂ ಬವಣೆಗಳನ್ನೆ ತನ್ನೊಡಲ ತುಂಬಾ ಕೆಂಡದಂತೆ ತುಂಬಿಕೊಂಡು ನಡೆದಿಹಳು
ಹರಿದ ಸೀರೆಯಲಿ ಸಂಸಾರ ತೂಗಿಸಿ ಸೆರಗಿನ ಕೊನೆಯಲಿ ಕಾಂಚಣವ‌ ಕಾಯ್ದಿರಿಸಿದವಳು ನನ್ನಮ್ಮ

ಒಮ್ಮೆಯೂ ಸಹ ಕರುಳ ಬಳ್ಳಿಗಳ ಮುಂದೆ ತನ್ನೊಡಲ ಸಂಕಟ ಬಿಚ್ಚಿಕ್ಕದೆ ಬದುಕಿದ ನಿಸ್ವಾರ್ಥಿ
ತನ್ನ ಉಸಿರ ಬಿಗಿ ಹಿಡಿದರು ಲೆಕ್ಕಿಸದೆ ಎನಗೆ ಉಸಿರ ನೀಡಿ ಹೆಸರಿಟ್ಟು ಮುದ್ದಿಸಿದವಳು ನನ್ನಮ್ಮ

ಬಿಗಿಯಾಗಿ ಬಿಗಿದಪ್ಪದೆ ಬಿಟ್ಟು ದೂರ ಹೋಗದೆ ನಡು ಹಾದಿಯಲಿ ಉಳಿದುಬಿಟ್ಟೆ ಮೌನವಾಗಿ
ಪುಟ್ಟ ಹೆಜ್ಜೆಗಳಿಗೆ ಮುತ್ತನಿಟ್ಟು ಸ್ಪರ್ಧೆಗೆ ಸಜ್ಜಾಗಿಸಿ ಬೆನ್ತಟ್ಟಿದ ತ್ಯಾಗಮಯಿಯವಳು ನನ್ನಮ್ಮ

ಅಲ್ಪವಿರಾಮವನ್ನು ಸಹ ಇಕ್ಕದೆ ಬದುಕಿನುದ್ದಕ್ಕೂ ಕಾಳಜಿಯ ಹೊಳೆಯ ಹರಿಸಿದಾಕೆ ನನ್ನಬ್ಬೆ
"ಸಿದ್ದ" ನೆಂದು ಹೆಸರಿಟ್ಟು ಸಾಧನೆಯ ಮುನ್ನುಡಿಗೆ ಮುತ್ತಿಕ್ಕಿಸಿ ಮುನ್ನೆಡಿಸಿದವಳು ನನ್ನಮ್ಮ.
‌‌ ಸಿದ್ದೇಶ್ ಹೊನ್ನಳ್ಳಿ
‌‌‌‌

-



ಸಿಹಿ ಕಹಿಗಳ ಸಾಂಗತ್ಯ ಅದುವೆ ಯುಗಾದಿ
ನೋವು‌ ನಲಿವುಗಳ ಆತಿಥ್ಯಾ‌ ಅದೆ ಬದುಕಿನ ಹಾದಿ

ಯುಗಾದಿ ಹಬ್ಬದ ಶುಭಾಷಯಗಳು 💝✨

-


Fetching ನಿನ್ನೊಳಗಿನ ಸಾಧಕ ನೀನೆ 🌟🌟🌟 Quotes