QUOTES ON #ಕಗ್ಗಂಟು

#ಕಗ್ಗಂಟು quotes

Trending | Latest

ಮನಸು ಕಪ್ಪು,,ಬಿಳಿಯ ಬಣ್ಣದ ಮುಖವಾಡ..
ದೇಹ ಕಪ್ಪು,, ಮನಸು ಶ್ವೇತವರ್ಣದ ಹೊಳಪು..
ಕನಸು ರಂಗು,, ಕಲ್ಪನೆ ನಾಟಕೀಯದ ಬಣ್ಣ...
ಭಾವನೆಗಳು ಸೊಬಗು,, ಆಲೋಚನೆಯ ನಿಗೂಢ ರಹಸ್ಯದ ಮೂಲ...
ಮಾತು ಮೃದುವಾದರೂ,, ನೋಟ ದುರ್ತಲಕ್ಷಣದ ದಾಹ....
ಸಹಜ ಗುಣ,,ಯಾರಿಗೂ ಬೇಡವಾಗಿರುವ ವಾಸ್ತವದ ಕಗ್ಗಂಟು....
ಶ್ರೀಮಂತಿಕೆಯ ಸ್ನೇಹ,, ಹುಂಬತನಕೆ ಸಿಕ್ಕ ಆಶ್ರಯದ ಭಿಕ್ಷೆ...
ತೊರ್ಪಡಿಕೆ,,ತನ್ನ ವ್ಯಕ್ತಿತ್ವವನ್ನು ತಾವೆ ಹತ್ಯೆಮಾಡಿದ ಸಾಧನೆಯ ಕಿರೀಟ.
ಇನ್ಪೊಬ್ಬರ ಹೊಗಳಿಕೆಯ ಸೆಳೆತ,,
ತನ್ನನ್ನೇ ಬೆತ್ತೆಲೆಗೊಳಿಸಿಕೊಂಡು ತನ್ನತನ ತೊರೆದ ಕ್ಷಣದ ಸುಖ..
ತೃಪ್ತಿ ಜೀವನ,,ಇನ್ನೊಬ್ಬರ ಹಂಗಿಲ್ಲದೆ ಋಣಮುಕ್ತ ಬದುಕಿನ ಸಂಬಂಧ..

-



ಕನಸುಗಳ
ಒಕ್ಕೂಟದಲಿ
ಕಂ(ಹೊಂ)ಕುಳದಲಿ
ಇರಿಸಿಕೊಂಡೆ,
ಒಗ್ಗೂಡದ
ಮನಸಿನಿಂದ
ಕಗ್ಗಂಟಿನೊಳಗೆ
ಇರಿಸಿಕೊಂಡೆ.

-


23 NOV 2020 AT 15:25

ಬಾಳಲಿನ ಎಲ್ಲ ನಂಟುಗಳಿಗೂ
ಅಂಟಿಯೂ ಅಂಟದಂತಿರಲು,
ಸಂಬಂಧಗಳೆಂದೂ ಆಗವು
ಭಾವಾತಿರೇಕದಿಂದ ಕಗ್ಗಂಟು..!

-



ಬದುಕು ಬಲು ಗೋಜಲು
ಬಿಡಿಸದ ಕಗ್ಗಂಟು
ಸಿಕ್ಕುಗಳ ತಳಕುಗಳೇ
ಬಂಧನದ ನೋವು
ಸಿಲುಕಿ ಒದ್ದಾಡಿಕೊಂಡೂ
ಸಾಗಿಸುವ ದಿನಗಳೇ
ಯಶಸ್ವಿ ಮನುಜನ
ಬದುಕ ಕಲೆ,ಅದೊಂದು
ನಿತ್ಯವೂ ಬತ್ತದ ಸೆಲೆ
ಒಸರುವ ಒರತೆಯೊಂದಿಗೆ
ತುಂಬಿಸಬೇಕಿದೆ
ತೂತು ಬಿದ್ದ ಕೊಡವ.

-



ನನ್ನೊಲವಿನ ನಂಟಿಗೆ
ನೀ ಅಂಟಿಕೊಂಡರೆ
ನಾ ಹಾಕಿಬಿಡುವೆ ಗಂಟು
ಯಾರಿಂದಲು ಬಿಡಿಸಲಾಗದ
ಪ್ರೀತಿಯೆಂಬ ಕಗ್ಗಂಟನು ಮಾಡಿ....

-


23 NOV 2020 AT 18:40

ಆ ಕಗ್ಗಂಟಲ್ಲೇ
ಅಡಗಿಹುದು ಎಲ್ಲ ನಂಟು
ಬಿಟ್ಟು ಹಿಡಿವುದೋ
ಹಿಡಿದು ಬಿಡುವುದೋ
ತಿಳಿಯದಾಗಿದೆ

-


18 JUN 2020 AT 19:49

ಕಗ್ಗಂಟು

ಮದುವೆಯ
ಮೊದಲು
ಎಂಗೇಜುಮೆಂಟು,
ನಂತರ
ಬದುಕೇ ಕಗ್ಗಂಟು..!

-


10 NOV 2019 AT 13:09

ನಾನು ನಿನ್ನವಳಲ್ಲ ಎಂಬ ಅರಿವಿದ್ದರು,
ನನಗೇಕೆ ಪ್ರೀತಿಯ ದಿನಗಳನ್ನು ತೋರಿಸಿದೆ?
ಅವು ಶಾಶ್ವತವಲ್ಲ ಎಂಬ ಅರಿವಿದ್ದರು,
ನನ್ನೇಕೆ ಪುಟ್ಟ ಮಗುವಿನಂತೆ ಮುದ್ದಿಸಿದೆ?
ದಿನ ಕಳೆದಂತೆ ನನಗದರ ಹಂಬಲ
ಅತಿಯಾಗುವುದು ಎಂಬ ಅರಿವಿದ್ದರು,
ನನ್ನೊಂದಿಗೆ ಏಕೆ ಈ ಅನಾಮಧೇಯ
ಸಂಭಂದ ಬೆಸೆದೆ?
ಅದು ಬಿಡಿಸಲಾಗದ ಕಗ್ಗಂಟು
ಆಗುವುದು ಎಂಬ ಅರಿವಿದ್ದರು.

-


24 FEB 2018 AT 23:06

ಗಂಟು ಗಂಟು ಕಗ್ಗಂಟು..
ಬಿಡಿಸಲಾರದ ಒಳಗುಟ್ಟು..
ಭರವಸೆಯ ನಿಘಂಟು..
ಬದುಕಿಗೆ ಸಿರಿಗಂಟು..
ಮಿಡಿತಗಳ ಒಳಗಂಟು..
ಅಡಗಿ ಕುಳಿತಿರುವ ಪರಿಯೆಂತು..
ಭಾವನೆಗಳೇ ಒಂದು ಅರ್ಥವಾಗದ ಒಗಟು..

-



ಬದುಕಿರುವೆ ನನ್ನ ಬದುಕು ನೀಡಿದವಳ ಬದುಕಿಗಾಗಿ ತುಂಬ ದುಡುಕಿದೆ ಬದುಕಾಗಿ ಬರುವೆ ಅನ್ನುವಳಿಗಾಗಿ ಬದುಕೆ ಬದಲಾಯಿಸಿತು ನನ್ನ ತಾಳ್ಮೆಯ ಬಳಳಿಗಾಗಿ ಕಳೆದೆಹೋಯಿತು ನನ್ನ ಭರವಸೆಯು ಭೂನಾದಿಯಗಿ ತಿಳಿಯಿತು ನಂಗೆ ಬದುಕು ಒಂದು ತಿಳಿಯದ ದೊಡ್ಡ ಆಟವೆಂದು ಬಿರುಕಾಗಿ ನಿಂತಿದೆ ಇಂದು ನನ್ನ ಮನವು ಮುಲೆಯಲ್ಲಿ.

-