Varsha Umarji   (ಮಳೆ & ಅವನು)
509 Followers · 250 Following

ಬೆಳಗಾವಿ ➡️ ಬೆಂಗಳೂರು
ನನ್ನ ಬಗ್ಗೆ ಹೇಳಿಕೊಳ್ಳಲು ನಾ ತಂದಿರುವದಾದರೇನು..
Joined 7 May 2019


ಬೆಳಗಾವಿ ➡️ ಬೆಂಗಳೂರು
ನನ್ನ ಬಗ್ಗೆ ಹೇಳಿಕೊಳ್ಳಲು ನಾ ತಂದಿರುವದಾದರೇನು..
Joined 7 May 2019
10 DEC 2024 AT 16:12

ಈ ಕೊರೆವ ಚಳಿ,
ಜೋರಾಗಿ ಬೀಸುವ ಒರಟು ತಂಪನೆಯ ಗಾಳಿ,
ನನ್ನ ಮೈ ಜುಮ್ ಎನ್ನಿಸಿ,
ಏಕಾಏಕಿ ತನುವೆಲ್ಲ ನಡುಕ ಹುಟ್ಟಿಸುವ
ಪರಿ ಏನೂ ಅಲ್ಲ ಹುಡುಗ,
ನೀ ಸಾವಕಾಶವಾಗಿ ನನ್ನ ಹತ್ತಿರ ಬಂದು,
ಆ ನಿನ್ನ ಮೃದುವಾದ ಕೈ ಸ್ಪರ್ಶದಿಂದ,
ಲಘುವಾಗಿ ಬಿಸಿಯುಸಿರ ತಾಗಿಸುತ,
ಹಳುವಾಗಿ ನನ್ನ ನಡುವ ಬಳಿಸಿ,
ನಿನ್ನಧರಳಗಳಿಂದ ನನ್ನನ್ನು ನಿನ್ನವಳನ್ನಾಗಿ
ಮಾಡಿಕೊಂಡಾಗ ನನ್ನಲ್ಲಿ ಹುಟ್ಟಿದ
ನಡುಕಿನೆದುರಿಗೆ ತಿಳಿದುಕೊ ನೀ.

-


14 NOV 2024 AT 19:27

ಹೀಗೇಕೆ ತನಿಯಾಗಿ
ಬಿಟ್ಟು ಹೋದೆ
ಈ ಜನಜಂಗುಳಿಯಲ್ಲಿ
ಕಾರಣವ ಹೇಳದೆ?
"ನಿನ್ನ ಬಿಟ್ಟು ಬದುಕುವ"
ಪಾಠ ಕಲಿಸಲು ಅಂತಾಗಿದ್ದರೆ,
ಮೊದಲೇ ಸೂಚಿಸಬೇಕಿತ್ತು
ಗೃಹಪಾಠವಾದರೂ ಮಾಡಿಕೊಂಡು ಬರುತ್ತಿದ್ದೆ;
ಈ ಅಚ್ಚರಿ ಪರೀಕ್ಷೆಯ
ಒತ್ತಡ ನಿಭಾಯಿಸುವ
ಅಭ್ಯಾಸವಿಲ್ಲ ನನಗೆ.

-


9 NOV 2024 AT 21:07

ಒಂದೊಮ್ಮೆ ಕಣ್ಣು ಮುಚ್ಚಿ ನಿನ್ನ ನೆನೆದು
ಈ ಜನಜಂಗುಳಿಯಲ್ಲೂ ಒಂಟಿಯಾಗಿ
ನಿನ್ನ ಅನುಭವಿಸುವಾಸೆ;
ನೀರ ಹನಿಯು ತುಂಬಿ ಮಸಕಾದ
ಈ ಕಂಗಳಿದಲೂ ಕಣ್ಣೆದುರು
ನಿನ್ನದೆ ಅಚ್ಚು ಮುಡಿಸುವಾಸೆ;
ಈ ಮಾಮೂಲಿ ದಿನಚರಿ ಇಬ್ಬರಲ್ಲಿ
ಮೈಲಿಗಳ ಅಂತರ ರಚಿಸಿದ್ದರೂ,
ನನಗೆ ನಿನಗಷ್ಟೇ ಕೇಳಿಸುವ ಹಾಗೆ
ಈ ವಿಶೇಷ ದಿನ ಮಾತೊಂದು
ಹೇಳಬೇಕೆಂಬ ಆಸೆ;
ಅದ ಆಲಿಸಲು ನೀನೇ ಖುದ್ದಾಗಿ
ಬರಬೇಕೆಂತೇನಿಲ್ಲ,
ಆ ನಿನ್ನ ಇಂದ್ರಿಯಗಳ ಅನುಭೂತಿಯನೊಮ್ಮೆ
ನೀ ನೇವರಿಸಿದರೆ ಸಾಕು
ನಾನಿರುವ ಕಡೆಗೆ ನೀ ತಲುಪಿ ಬಿಡುವೆ ;
ನಾ ಹೇಳದೇ ಇರುವ ಮಾತೂ
ಮನಸ್ಸಿನಲ್ಲೇ ಇಂಗಿಸಿಕೊಳ್ಳುವೆ.

-


5 NOV 2024 AT 13:27

ಆ ಮೈಖಾನೆಯಲ್ಲಿ ಬರುವವರು
ಯಾರು ನನ್ನವರಿರಲಿಲ್ಲ ಗಾಲಿಬ್ ;
ಆದರೆ ಯಾಕೋ ನನ್ನವರಂತೆಯೇ ಅನಿಸಿದರು,
ಕಾರಣ, ಈ ಪ್ರೀತಿ ಎದೆಯಲ್ಲಿ ತುಂಬಿದ್ದರೂ
ಹರಿಯುವುದು ಮಾತ್ರ ಕಣ್ಣಾಲಿಯಿಂದಾನೆ.

-


25 OCT 2024 AT 9:57

ಪ್ರೀತಿಯಲ್ಲಿಯೇ ಸತ್ತು
ಬದುಕಬೇಕು ಗುಲ್;
ರುದ್ರಭೂಮಿಯ ಮಣ್ಣಲ್ಲೂ
ಅವಳ ಮುಖ ನೆನಪಾದರೆ
ಮನಶಾಂತಿ ಸಿಗುವುದೆ
ಹಾರಿ ಹೋದ ಪ್ರಾಣಕ್ಕೆ?

-


22 OCT 2024 AT 15:26

ನೀ ಈಗಲೂ ನನ್ನ ಪ್ರೀತಿಸುವೆ
ಎಂಬ ಮಾತು ನಂಬಲು
ನಾನೇನೋ ಸಿಧ್ಧಳಿರುವೆ;
ನಿನ್ನ ಪ್ರೀತಿಯ ವ್ಯಾಖ್ಯಾನವನೊಮ್ಮೆ
ನನಗೆ ಸಮಜಾಯಿಸಿ ಬಿಡು ಸಾಕು.

-


21 OCT 2024 AT 14:15

ನೀನು ಕನಸಿನಲ್ಲಿಯೇ ಇರುವುದು ಸರಿ,
ಅಲ್ಲಿಯೇ ಸಿಗುವುದು ಸರಿ;
ಕನಿಷ್ಠ ಅಲ್ಲಾದರು ಯಾರೋ ನಿನ್ನ
ಕಸಿದುಕೊಳ್ಳುವ ಭಯವಿರುವುದಿಲ್ಲ ನನಗೆ.

-


18 OCT 2024 AT 13:04

ಒಂದೆರಡು ವರ್ಷಗಳ ಹಿಂದೆ ಅದ್ಹೇಗೋ
ಒಂದ ಪ್ರೊಫೈಲ್ ಕಣ್ಣಿಗ ಬಿತ್ತು,
ಕಾಡುವ ಪದಗಳ ಜೊತೆ,
ಕಾಡುವ ಹೆಸರೂ ಕಾಣಿಸಿತು;
ಗಾಲಿಬ್ ನಾ ಗಾಲಿಬ್ ತರಹ
ಪ್ರೀತಿಸೋ ವ್ಯಕ್ತಿಯ ಪರಿಚಯವಾಯ್ತ;
ಕಾವ್ಯನಾಮ ಈಗಲೂ ನಿಗೂಢವೆನಿಸಿದರು
ಆ ವ್ಯಕ್ತಿ ಯಾಕೋ ನನ್ನ ಹಾಗೆ ಅನಿಸಿತು;
ಬರವಣಿಗೆ ಬೇಡವಾದಾಗಾ ಮೆಚ್ಚಿಸಿ
ಪುನಃ ಬರೆಯೋಕೆ ಅಲ್ಲಿ ಇಲ್ಲಿ ಬೆನ್ನ ಹತ್ತಿತು;
ದುಃಖಿಸೊಕ್ಕೆ ನೂರ ಕಾರಣಗಳಿದ್ದರೆ
ಖುಷಿ ಪಡುವದಕ್ಕೆ ಒಂದೇ ಒಂದು ಚಿಕ್ಕ ಕಾರಣ ಸಾಕು;
ಈ ದಿನ ಖುಷಿಯಾಗಿ ಇರುವುದಕ್ಕೆ
ನಿಮ್ಮ ಬರವಣಿಗೆ ಮತ್ತು ನಮ್ಮ ಸ್ನೇಹ
ಒಂದು ಚಿಕ್ಕ ಕಾರಣವಾಗಲಿ ಎಂದು ಹೇಳುತಾ
ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು ಹೇಳುತ್ತೇನೆ ಗುಲ್.
ಹೀಗೂ ಇರ್ರಿ, ಆದ್ರೆ ಬದುಕ್ತಾ ಕನಸು ಕಾಣುತ್ತಾ ಇರ್ರಿ.

-


18 OCT 2024 AT 10:22

ಪ್ರೀತೀಲಿ ಸ್ವಾರ್ಥಿ ಆಗು
ಅಂತ ಕಿವಿ ಮಾತು
ಹೇಳಿದರು ಗಾಲಿಬ್,
ಅದು ದಕ್ಕಬೇಕಂತಿದ್ದರೆ;
ಅಮ್ಮ ಸ್ವಾರ್ಥಿ ಏನು ಗಾಲಿಬ್?

-


16 OCT 2024 AT 15:13

ಇಂದು ಬಹುಶಃ ಅವನ ಭೇಟಿ
ಬೇಗ ಆಗಬಹುದು,
ಬೇರೊಂದು ಆಯಾಮದಲ್ಲಿ;
ಪ್ರೀತಿಸಿ, ಕಾದು, ದಣಿದ ಜೀವ
ಇಂದು ಬಹುತೇಕ ಬೇಗ
ನಿದ್ದೆಗೆ ಜಾರಬಹುದು.

-


Fetching Varsha Umarji Quotes