ತಾಳ್ಮೆ ಹೆಚ್ಚಾಗಲಿ,
ಆತ್ಮಾವಲೋಕನದ ಅರಿವಾಗಲಿ,
ಪರರ ಬಗೆಗೆ ಗೌರವ ಜಾಸ್ತಿಯಾಗಲಿ.
-
ಮಳೆಯ ಹನಿಗಳು
ಇಳೆಯ ಭಾವನೆಗಳಿಗೆ ಪೂರಕ,
ಕಂಬನಿಗಳು ಮನುಜನ
ಭಾವನೆಗಳ ಸಂಕೇತ,
ಮಳೆಯ ಹನಿಗಳ
ನೋಡಿ, ಅಲ್ಲೋಬ್ಬನ
ಕಣ್ಣಲ್ಲಿ ಕಂಡೂ ಕಾಣದ
ಪಸೆಯೊಂದು ಹಾದು ಹೋಗಿತ್ತು.
-
ನೆನಪುಗಳ ಬುತ್ತಿ ಮತ್ತೆ ಬಿಚ್ಚಿದಾಗ,
ವಾಸ್ತವತೆಯ ಅರಿವಾಯಿತು..
ಈಗಿನ ನಕಲಿ ಹೂವುಗಳಲ್ಲಿ,
ತನ್ನ ಪ್ರೇಯಸಿ/ಪ್ರಿಯತಮನ ನೆನೆಯುತ್ತಾ
ಯಾವುದೋ ಉದ್ಯಾನವನದ ಕಲ್ಲು ಬೆಂಚಿನ
ಮೇಲೆ ಕುಳಿತುಕೊಳ್ಳುವವರಿಗಾಗಿ,
ಅದೇ ಗುಲ್ ಮೊಹರ್ ಇಂದು ದಾರಿ ಕಾಯುತ್ತಿದೆ.-
ತನ್ನದೇ ಗಾಢ ಯೋಚನೆಯಲ್ಲಿದ್ದ ಅಜ್ಜ. ಇಳಿವಯಸ್ಸಿಗೆ ಬಸವಳಿದ ದೇಹ ಚಳಿಗೆ ಥರಥರನೆ ನಡುಗುತ್ತಿದ್ದವು. ಧೋ ಎನ್ನುತ್ತಿದ್ದ ಮಳೆ ತನ್ನ ಕಾಯಕಕ್ಕೆ ಅಲ್ಪವಿರಾಮ ನೀಡಿ ಅಲ್ಲೆ ತಂಗುದಾಣದ ತಗಡಿನ ಮೇಲಿಂದ ತೊಟ್ಟಿಕ್ಕ ತೊಡಗಿತು ಅಜ್ಜನ ಹಳೆಯ ಜೀವನದ ಮಾಸಿದ ನೆನಪಿನೊಂದಿಗೆ.
-
ಬರೆಯುವ ಆಸೆ ಬತ್ತಿ,
ಕನಸುಗಳು ಒಡೆದು
ಚೂರಾಗಿ,
ಭರವಸೆಯ ಭಾವಗಳು
ಕಣ್ಮರೆಯಾಗಿದೆ..-
ವಿಧಿಲಿಖಿತ, ಬ್ರಹ್ಮಗಂಟು, ಕೈರೇಖೆ ಹಾಗೂ ಜಾತಕ,
ಬರೆದು ಕಳಿಸಿರಬಹುದು ಬ್ರಹ್ಮನು ಜನ್ಮಕ್ಕೆ ಮೊದಲು,
ವಿಧಿಲಿಖಿದ ಓದಲುಬಾರದ ಮನುಜರು ನಾವೆಲ್ಲ
ಬ್ರಹ್ಮಗಂಟಿಗೂ ಮೊದಲು ತರತರಹದ
ಕಗ್ಗಂಟಿನ ಯೋಗವಿರಬಹುದು
ಕೈರೇಖೆಗಳಳಿದು ಮಸುಕಾಗುವುದು,
ಜಾತಕದಿ ಗ್ರಹಗಳು ಚಲಿಸುತ್ತ
ತಮ್ಮ ಮನೆಗಳ ಬದಲಿಸುತಲಿಹುದು,
ಬದಲಿಸಲು ಬಾರದ ರಹಸ್ಯಗಳ ಓಕ್ಕೂಟ,
ಸೂತ್ರಧಾರನ ಸೂತ್ರಕ್ಕೆ ಗೊಂಬೆಗಳು ನಾವು
ಕರ್ಮಕ್ಕೆ ಇರುವುದು ನಾನಾರೂಪಗಳು
ಕಾಣಿಸದೆ ಎಲ್ಲವು ಲೆಕ್ಕಕ್ಕೆ ಸೇರುವುದು.
-
ಕೆಲವೊಂದು ಸಲ ಕೆಲವರ ಭೇಟಿ
ಮನಸಿಗೆ ಮುದ ನೀಡುತ್ತೆ
ಮುದ ನೀಡಿದಾಗ ನಕ್ಕು ಸುಮ್ಮನಾದೆ
ಅದೇ ಕೆಲವೊಮ್ಮೆ ನೋವುಂಟು ಮಾಡುತ್ತೆ
ನೋವುಂಟು ಮಾಡಿದಾಗಲು ನಕ್ಕು
ಸುಮ್ಮನಾಗುವುದ ಇನ್ನು ಕಲಿಯಬೇಕು..-
ಬದಲಾದ ಸಮಯವು
ಬದಲಾಯಿಸಲಾರದಂತಿದೆ,
ಬದುಕಿನ ಬವಣೆಯು
ಜೀವನವ ಬರಿದಾಗಿಸಿದೆ,
ಭಾವನೆಗಳು ಮನಸಿನ
ಖುರ್ಚಿ ಖಾಲಿ ಮಾಡಿದೆ
ಭರಿಸಲಾರದೆ ಭರಿಸಿದ ಕ್ಷಣಗಳು
ಬರವಣಿಗೆಯ ಮರೆಸಿದೆ.-
ಮರೆಯಲಾರದ ನೋವುಗಳು
ಕುಕ್ಕಿ ತಿನ್ನುತಲಿದೆ..
ಸಂತಸದ ಕ್ಷಣಗಳು ಕಣ್ಣೀರ
ಕೋಡಿಯಲ್ಲಿ ಹರಿದು ಹೋಗಿದೆ..
-