ಪಾಂಡುರಂಗ ಯಾದವ   (ರಂಗ)
390 Followers · 243 Following

read more
Joined 6 April 2019


read more
Joined 6 April 2019

ನಾವೆ ಸೃಷ್ಟಿಸಿಕೊಂಡ ಭಾವ ಭಾವನೆಗಳಲ್ಲಿ ನರಕಾತ್ಮಕತೆ ತುಂಬಿಕೊಂಡಿದರುವಾಗ ಬದಲಾವಣೆ ಎಲ್ಲಿಂದ ಸಾಧ್ಯ...‌

-



-



ಮನದಟ್ಟು ೧೫,
ಪರಮ ಕ್ರೂರಿಯಾಗಿದ್ದರೂ ವಿರಾಮದ
ಬದುಕು ಬೆನ್ನಟ್ಟಿದಾಗ ಪ್ರಣಾಮಗಳೊಟ್ಟಿಗೆ
ಸ್ವಾಗತಿಸಿಕೊಳ್ಳಲೆ ಬೇಕು....

-



ಸೋಗಿನಲ್ಲಿ ಸಾಗಬೇಡ
ಭೋಗದೊಳಗೆ ಅತಿಯಾದ ರೋಗವಿದೆ.

-



ಚಿಕ್ಕೋನಿದ್ದಾಗ ೮ನೆ ತರಗತಿ ಮುಗಿಸಿ ಬೇಸಿಗೆ ರಜೆಯಲ್ಲಿ ಈರುಳ್ಳಿ ಗುಡಿಸಲಿಗೆ ಹಾಕೊದಕ್ಕೆ ಹೋಗಿದ್ದೆ ಜೋಗಿ ಒಂದು ದಿನಕ್ಕೆ ೨೦ ಕೂಲಿ ಒಂದು ವಾರಕ್ಕೆ ೧೨೦ ರುಪಾಯಿ ಆಗಿತ್ತು. ಮೂರು ತಿಂಗಳು ಆದ್ಮೇಲೆ ಕೊಟ್ರು, ನಾನು ಪುಸ್ತಕ ತಗೊಂಡೆ

-



ವ್ಯಕ್ತಪಡಿಸುವ ಅಭಿಲಾಷೆಯಲಿ ನಿನಗೆ ನಂಬಿಕೆ ಇಲ್ಲ ಸಖಿ|
ನಿನ್ನೊಲವಿನ ಒಲುಮೆಗೆ ನಾ ಅಲ್ಲಿ ಇಲ್ಲಿ ತಿರುಗಿಲ್ಲ ಸಖಿ||

ಅಭಿವ್ಯಕ್ತವಾಗದ ಮನ ಮೀಟುವ ರಾಗ ಅಂದಾಜಿಗೆ ಸಿಗುತ್ತಿಲ್ಲ|
ಭಾವನೆಗಳ ಬಯಕೆಗೆ ಇಣುಕಿ ಮಣೆ ಹಾಕುತ್ತಿಲ್ಲ ಸಖಿ||

ನೀರವ ಮೌನದ ಮರ್ಮ ಏನೆಂದು ತಿಳಿಯುತ್ತಿಲ್ಲ|
ನಂಜು ಮಾಡಿ ಗಂಜಿ ಕುಡಿಸುವ ಕಟುಕನಲ್ಲ ಸಖಿ||

ಎಷ್ಟಾದರೂ ಪರೀಕ್ಷೆ ಇರಲಿ ನಿನ್ನ ಆಗಮನದ ನಿರೀಕ್ಷೆಯಲ್ಲಿರುವೆ|
ನಿಕಟವಾದ ವ್ಯಕ್ತಿತ್ವವನು ಗೋಚರಿಸುವಾಗ ನಿನಗೊಬ್ಬಳಿಗೆ ಸೋಲುವುದು ಸಖಿ||

ರಾಮನ ಕ್ರೂರ ಪ್ರಾಮಾಣಿಕತೆ ಪ್ರಚಾರ ಆಗಿದ್ದು ಸೀತೆಯ ಆಚರಣೆಯಿಂದಲೆ|
ಪವಿತ್ರ ಪ್ರೀತಿಯು ಹೀಗೂ ಉಂಟೆಂಬಂತೆ ಬದುಕಿ ಬಾಳೋಣ ಸಖಿ||

-



ಮನದಟ್ಟು ೧೪,
ನಾ ಕಂಡಂತೆ ಅವಿರ್ಭಾವದ
ಪ್ರೀತಿಯಲಿ ಒಲವು ಸೋಲುತ್ತಿಲ್ಲ,
ನಿಲುವು ಗೆಲ್ಲುತ್ತಿಲ್ಲ.

-



ಪ್ರಯತ್ನ ಪ್ರಾಮಾಣಿಕತೆಗಿಂತ ದೊಡ್ಡದೇನಲ್ಲ,

-



ತಾಳ್ಮೆಯ ಪರೀಕ್ಷೆಯಲ್ಲಿ ಗೆಲ್ಲುವ ಹಂಬಲವೇನಿಲ್ಲ ಎನಗೆ
ನಿನ್ನ ಮನದಲ್ಲಿ ಮೂಡುವ ನಂಬಿಕೆ ಬೇಕೆನಗೆ
ಮೊಂಡುತನವೇನಿಲ್ಲ ನಿ ಎಂದರೆ ಅದೇನೊ
ಆತ್ಮಾಭಿಮಾನದೊಳಗಿನ ಪ್ರೀತಿ
ಅಂದ ಚೆಂದದ ಆಕರ್ಷಣೆ ಏನಲ್ಲ,
ನಿನ್ನ ಸಾಧನೆ ಹೆಜ್ಜೆಯ ಹಿಂಬಾಲಕ
ಉಸಿರ ಕೊನೆಯವರೆಗೂ ನಿ ಕಂಡ ಕನಸುಗಳ
ನನಸು ಮಾಡುವ ಅವಕಾಶ ಬೇಕಾಗಿದೆ ಎನಗೆ

-



ಆಧುನಿಕತೆ ಭಾವನಾತ್ಮಕತೆಯನ್ನು
ಕೊಲ್ಲುತ್ತಿದೆ, ಡಾಂಬಿಕತೆಯ
ದಾಸರಾಗುತ್ತಿದ್ದೇವೆ. ನಮಗೆ ನಾವೆ
ಮೋಸ ಮಾಡಿಕೊಳ್ಳುತ್ತಿರುವ ಕಾಲ ಇದು,
ಕ್ಷುಲ್ಲಕ ಕಾರಣಗಳ ಕೊಟ್ಟು ಮನಸ್ಸಿನ
ಅದೆಷ್ಟೋ ವಿಚಾರಧಾರೆಗಳನ್ನ
ಪಾಲಿಸುತ್ತಿಲ್ಲ. ಇನ್ನೊಬ್ಬರ ಬದುಕಿಗೆ
ನಮ್ಮ ಬದುಕನ್ನು
ಹೋಲಿಸಿ ನೋಡುತ್ತಾ
ಜಿಗುಪ್ಸೆಯಲ್ಲಿ ಬದುಕುತ್ತಿದ್ದೇವೆ...

-


Fetching ಪಾಂಡುರಂಗ ಯಾದವ Quotes