ಮನಸು ಕಪ್ಪು,,ಬಿಳಿಯ ಬಣ್ಣದ ಮುಖವಾಡ..
ದೇಹ ಕಪ್ಪು,, ಮನಸು ಶ್ವೇತವರ್ಣದ ಹೊಳಪು..
ಕನಸು ರಂಗು,, ಕಲ್ಪನೆ ನಾಟಕೀಯದ ಬಣ್ಣ...
ಭಾವನೆಗಳು ಸೊಬಗು,, ಆಲೋಚನೆಯ ನಿಗೂಢ ರಹಸ್ಯದ ಮೂಲ...
ಮಾತು ಮೃದುವಾದರೂ,, ನೋಟ ದುರ್ತಲಕ್ಷಣದ ದಾಹ....
ಸಹಜ ಗುಣ,,ಯಾರಿಗೂ ಬೇಡವಾಗಿರುವ ವಾಸ್ತವದ ಕಗ್ಗಂಟು....
ಶ್ರೀಮಂತಿಕೆಯ ಸ್ನೇಹ,, ಹುಂಬತನಕೆ ಸಿಕ್ಕ ಆಶ್ರಯದ ಭಿಕ್ಷೆ...
ತೊರ್ಪಡಿಕೆ,,ತನ್ನ ವ್ಯಕ್ತಿತ್ವವನ್ನು ತಾವೆ ಹತ್ಯೆಮಾಡಿದ ಸಾಧನೆಯ ಕಿರೀಟ.
ಇನ್ಪೊಬ್ಬರ ಹೊಗಳಿಕೆಯ ಸೆಳೆತ,,
ತನ್ನನ್ನೇ ಬೆತ್ತೆಲೆಗೊಳಿಸಿಕೊಂಡು ತನ್ನತನ ತೊರೆದ ಕ್ಷಣದ ಸುಖ..
ತೃಪ್ತಿ ಜೀವನ,,ಇನ್ನೊಬ್ಬರ ಹಂಗಿಲ್ಲದೆ ಋಣಮುಕ್ತ ಬದುಕಿನ ಸಂಬಂಧ..
-