QUOTES ON #ಇರುವೆ

#ಇರುವೆ quotes

Trending | Latest
30 MAR 2019 AT 13:44

ಶ್ರಮಕ್ಕೆ ಇನ್ನೊಂದು
ಹೆಸರು ಇರುವೆ
ಶ್ರಮಪಡದಿದ್ದರೆ ನೀನು
ಇದ್ದಲ್ಲೇ ಇರುವೆ

-


23 SEP 2021 AT 22:24

ಇರುವೆಗಳು ಒಂದರ ಹಿಂದೆ ಒಂದು ಸಾಲು ಸಾಲಾಗಿ
ಸಾಗಿ ಆಹಾರವನ್ನು ತಂದು ಹಂಚಿ ತಿನ್ನುತ್ತವೆ ಮರಳಿ
ಗೂಡಿಗೆ ಸೇರುತ್ತವೆ ಒಗ್ಗಟ್ಟಿನಿಂದ ಇರುತ್ತವೆ
ಒಂದೇ ಮನೆಯವರಂತೆ ಒಂದೇ ಗೂಡಿನಲ್ಲಿ ಒಟ್ಟಿಗೆ
ಬಾಳುತ್ತವೆ ಇವುಗಳನ್ನು ನೋಡಿ ಮನುಷ್ಟರು ತಿಳಿಯಬೇಕಾದದ್ದು, ಕಲಿಯಬೇಕಾದದ್ದು ಇನ್ನೂ ಬಹಳಷ್ಟಿದೆ.

-


19 JUN 2020 AT 1:25

ಇರುವೆ.

ಸಕ್ಕರೆಯ ದರೋಡೆಗೆ
ಸಾಲುಗಟ್ಟಿವೆ
ಇರುವೆ.
ರಸ್ತೆಯ ಅತ್ತಿತ್ತ ಕಣ್ಣಾಡಿಸಿ ನೋಡಿ,
ಮಡದಿ ಕೆಂಗಣ್ಣಲ್ಲೇ!!
ಉತ್ತರಿಸುವಳು ನಾ ಪಕ್ಕದಲ್ಲೇ
ಇರುವೆ.

-


24 MAR 2022 AT 14:09


ಒಗ್ಗಟ್ಟಿನ ಬಲಿಷ್ಠತೆ
ನಿಷ್ಠಾವಂತ ಪರಿಶ್ರಮ
ಸ್ಥಿರವಾದ ಚಲನೆ
ಶಿಸ್ತು ಬದ್ದ ಜೀವನ ಶೈಲಿಯು
ಬದುಕಿನ ಸುಗಮ ಮುನ್ನುಡೆಗೆ ಸ್ಪೂರ್ತಿಯಾಗುವುದು

-


24 SEP 2021 AT 0:29

ನಂಬಿಕೆಯ ಮೇಲೆ
ತಮ್ಮದೇ ಕನಸನ್ನು
ಸರಿದಾರಿ ಹುಡುಕಿ
ಶಿಸ್ತುನ್ನು ಪಾಲಿಸುತ್ತಾ
ಮತ್ತೊಬ್ಬರ ಜೀವಕ್ಕೆ
ತೊಂದರೆ ಕೊಡದೆ
ಲೋಕದ ಹಿತ ಬಯಸಿ
ಎಲ್ಲರಿಗೂ ಬದುಕಲು
ಅವಕಾಶ ಕೊಡಿ ಎಂದು
ಮನುಷ್ಯನಿಗೆ ನೀತಿ ಹೇಳಿ
ಹೊರಟಿದೆ...........!!!!

-


24 MAR 2022 AT 22:08

ಯೋಧನಂತಿರುವೆ.
ಎಲ್ಲೆಲ್ಲು ಇರುವೆ..ಇಲ್ಲೇಕಿರುವೇ?
ಕಪ್ಪಿರುವೆ, ಕೆಂಪಿರುವೆ.
ಕಟ್ಟಿರುವೆ, ಮೈ ಹತ್ತಿ ಕಚ್ಚಿರುವೆ.
ಸಕ್ಕರೆಯ ಇಲ್ಲಿಟ್ಟಿರುವೆ. ಮುತ್ತಿಹುದು
ನಾತದಾ ಇರುವೆ.
ಸಾಲಿನಲಿ ಏಕಿರುವೆ..?
ಹೆಸರು ಹೇಳಿದರೆ ಬಿಡುವೇ.
ಮುತ್ತಿಡುತ ಸಾಗುವೆ..
ಗುಟ್ಟು..ನನಗೂ ಹೇಳಿರುವೆ.,
ಹೇಳೇ ಇರುವೆ. ನಾನಿಲ್ಲೇ ಇರುವೆ.

-


24 MAR 2022 AT 15:02

ಶಿಸ್ತಿಗೆ ಹೆಸರುವಾಸಿ
ನಾವೂ ಅವಗಳಿಂದ ಕಲಿಬೇಕು
ಶಿಸ್ತು ಬಹುಪಾಲು...

-



ಅಸೂಯೆ ಇರದು ಯಾರಲ್ಲೂ.
ಶಿಸ್ತು ಮತ್ತು ಒಗ್ಗಟ್ಟಿನಲ್ಲಿ ಇರುವೆಗಳ ಕೈ ಮೇಲು


-



ಕದಡಿಬಿಡು
ಮನಸನ್ನ
ನಿನ್ನದೆ ಅಲೆ
ಏಳುವಂತೆ,
ತಡೆದುಬಿಡು
ಕನಸನ್ನ
ನಿನ್ನಡೆಗೆ
ಜಾರುವಂತೆ,
ಹಿಡಿದುಬಿಡು
ಬದುಕನ್ನ
ನಿನ್ನೊಟ್ಟಿಗೆ
ಬಾಳುವಂತೆ,
ನಿನ್ನೊಟ್ಟಿಗೆ
ನಾ ಇರುವಂತೆ..

-


17 OCT 2020 AT 11:07

'ರಾಮಾಯಣ'ವನ್ನೇ ತಿಳಿಯದ
'ಇರುವೆ'ಗೆ, ಹೇಗೆ ಅರಿವಾದೀತು,
'ಲಕ್ಷ್ಮಣ ರೇಖೆ'ಯನ್ನು
ದಾಟಬಾರದೆಂದು....!!

-