ಗೆಳೆತನ
ಅಂತ್ಯವಿಲ್ಲದ ಆನಂದ
ತಂತ್ರವಿಲ್ಲದ ಸಂಬಂಧ
ಕೊಂಕು ಮಾತುಗಳಿಲ್ಲದ ಹೃದಯ
ಭರವಸೆಗಳ ಅಭಯದ ಉದಯ
ರಕ್ತದ ನಂಟಿಗಿಂತ
ನಿಷ್ಕಲ್ಮಷತೆಯ ಗಂಟುಂಟು
ಬದುಕಿನ ಬಂಧವ ಬೆಸೆದು
ಮನಸ್ಸಿನ ನಂಟನು ಬೆಳೆಸಿ
ಅಳಿಸಲಾಗದ ಮಿತ್ರತ್ವದ ಮಿಶ್ರಣವೇ ಗೆಳೆತನ
ಬದುಕಿನ ತುತ್ತ ತುದಿಯಲ್ಲಿಯೂ ನೆನಪಾಗಿ
ನಗುವ ಹಂಚುವ ಚೈತನ್ಯವೇ
ನಿತ್ಯ ನೂತನವಾದ ನಮ್ಮ ಗೆಳೆತನ
✍️ವೇದ
-
ಭಾವನಾತ್ಮಕ ಮನದ ಸ್ನೇಹಿತೆ
ಮೌನದ ಭರವಸೆಯ ಸಂಚಾರಿ
ಕೊರತೆ ಇಲ್ಲದ ಪ್ರೀತಿಯ ಒಡತಿ
... read more
ಒಡಲೊಳಗಿನ ನನ್ನ ಮಗುವು
ಮಡಿಲ ಸೇರುವ ಹೊತ್ತು ಬಂದಾಯ್ತು
ಬಹುದಿನದಿಂದ ಕಂಡ ಕನಸು
ಕಣ್ಣ ಮುಂದೆ ಬಂದಾಯ್ತು
ಮುದ್ದಾದ ಕಂದಮ್ಮನ
ಸವಿಯಾದ ಅಪ್ಪುಗೆ ಸಿಹಿಯಾಯಿತು
ನನ್ನ ಬದುಕಿನ ಖುಷಿಯಾದ ಮಗಳೊಡನೆ
ಮತ್ತೊಮ್ಮೆ ಮನೆಗೆ ಮಗಳ ಆಗಮನವಾಗಿದೆ
ಬದುಕು ಮತ್ತಷ್ಟು ಸುಂದರವಾಯಿತು
ಮಗಳು ಮನದೊಡಲ ಬೆಳಕು
-
ಹೆಣ್ಣಿನಲ್ಲದಿದ್ದರೂ ಅವಳ ಕಣ್ಣುಗಳನ್ನು
ಒಮ್ಮೆ ನೋಡಿದರಂತೂ
ಅದೇನೂ ಸೆಳೆತ !!
ಅವಳೊಡನೆಯೇ ಜಾರುವುದು
ಈ ಹುಚ್ಚು ಮನಸ್ಸು ,
ಕಣ್ಣು ನೋಡುವುದಕ್ಕಿಂತಲೂ,
ಏನೇನನ್ನೋ ಹೇಳುವುದೇ ಹೆಚ್ಚು!!
ಅದಕ್ಕೆ ಬೀಳುವುದು ಈ ಹುಚ್ಚು ಮನಸ್ಸು !!
ಹೆಣ್ಣಿನ ಕಣ್ಣುಗಳ ಸೆಳೆತ
ಹೃದಯದ ಗೂಡಿನಲ್ಲಿ
ಒಲವಿನ ಸಂಚಲನ !!
-
ಬಾನಿನಿಂದ ಜಾರಿ ತೇಲಾಡುತಿದೆ
ನಕ್ಷತ್ರದಂತ ಹೊಂಬೆಳಕು,
ಇಳೆಯೇ ಅಂಬರದ ಸ್ವರ್ಗವನ್ನು
ಸ್ವಾಗತ ಕೋರುತ್ತಿದೆ,,
ದೇವಲೋಕ ವಾಸಿಗಳು
ಧರೆಗೆ ಬರಲಾಗಮಿಸುವಂತಿದೆ,,
ಮೈಸೂರು ಬೆಳಕಿನಂಗಳದಂತೆ
ಎಲ್ಲೆಡೆ ವಿಜೃಂಭಿಸುತ್ತಿದೆ ,,
ನಾಡಿನ ದೇವತೆ
ಚಾಮುಂಡೇಶ್ವರಿಯ
ಆಶೀರ್ವಾದವನ್ನು
ಎಲ್ಲರಿಗೂ ಹಂಚುತ್ತಾ,,
ವಿಶ್ವ ವಿಖ್ಯಾತ
ದಸರಾ ಜಂಬೂ ಸವಾರಿಯ
ಮೆರಗನ್ನು ಹಿಮ್ಮಡಿಗೊಳಿಸುತ್ತಿದೆ,,
_✍️ವೇದ
-
ಇಳೆಯಲ್ಲಿನ ಧಗೆಯನ್ನು
ತಂಪೆರೆದಿದೆ ಮಳೆಯ ತುಂತುರು !!
ಹಾದಿಯಲ್ಲ ಝರಿಗಳಂತೆ ಹರಿಯುತಿರಲು,,
ಮರಗಿಡ ಬಳ್ಳಿಗಳ ತಬ್ಬಿದ ಹನಿಗಳಲ್ಲೂ
ಕೇಳ ಬಹುದೀಗ ಹಿಂಪಾದ ಮೇಲುದನಿಯೊಂದ,
ಮುಸ್ಸಂಜೆ ಮಳೆಯಲಿ ಸಿಕ್ಕ ಹಕ್ಕಿಗಳ ತವಕ
ಗೂಡಿನೆಡೆ ದೂಡಿರಲೂ!!
ಮಳೆ ಸೆಳೆದ ನನ್ನ ಮನಸ್ಸೀಗ
ಇಂಪಾದ ಹಾಡಿನೆಡೆಗೆ ಜಾರಿದೆ .....
-
ಮಾತಾಡಬೇಡ
ಮಾತಾಡಿ ಕೆಟ್ಟವನಾಗಬೇಡ ,,
ಪೆಟ್ಟು ತಿಂದ ಮೇಲೆ ಪಟ್ಟು ಬಿಡದೆ
ನಿನ್ನ ತನವನ್ನು ಕಳೆದುಕೊಳ್ಳಲೆಬೇಡ,,
ನಿನ್ನ ಜೊತೆ ನಿನ್ನವರ್ಯಾರು ನಿಲ್ಲುವುದಿಲ್ಲ,,
ನಿನ್ನ ಕೊನೆ ಉಸಿರಿರುವವರೆಗೂ
ನಿನ್ನ ತನ ಮಾತ್ರ ಉಳಿಯುವುದು
ನಿನ್ನ ಜೊತೆಗೆ...
-