Gayathri⚘   (Gayathri⚘ಕಣೋ)
857 Followers · 245 Following

ಇದು ನನ್ನ Manase in kannada ಯುಟ್ಯೂಬ್ ಚಾನಲ್. ಸಬ್ಸಕ್ರೈಬ್ ಮಾಡಿ ಪ್ರೋತ್ಸಾಹಿಸಿ ಗೆಳೆಯರೇ.
Joined 1 September 2020


ಇದು ನನ್ನ Manase in kannada ಯುಟ್ಯೂಬ್ ಚಾನಲ್. ಸಬ್ಸಕ್ರೈಬ್ ಮಾಡಿ ಪ್ರೋತ್ಸಾಹಿಸಿ ಗೆಳೆಯರೇ.
Joined 1 September 2020
18 SEP 2024 AT 15:55

ನಿನ್ನ ಒಂಟಿಮನದ ಮನೆಗೆ
ಬರಲು ಭಯ.
ಅದ್ಯಾವ ಮೋಹವೋ...?
ತಗಾದೆ ತೆಗೆದರೂ, ಬಿಡದೆ,
ಎಲ್ಲಿ, ನಿನ್ನವಳೆಂಬ ಭಾವ
ಭರಿಸಿಬಿಡುವೆಯೋ...?
ಕಾಣೆ.

-


27 JUN 2024 AT 19:23

ಮುಲಾಜಿಲ್ಲದೆ ಮನಸ
ತೇಲಿಸೋ ನೆನಪುಗಳೇ..
ಪ್ರೀತಿಯ ಜೀತದಲಿ ನನ್ನಿಟ್ಟಿದ್ಯಾಕೇ?
ಪ್ರತಿದಿನವೂ ಕವನಗಳ
ಊಳಿಗ ಮಾಡುತ್ತಿರುವೆ.

-


26 JUN 2024 AT 12:17

ಪ್ರತಿ ಸಂಚಿಕೆಯಲ್ಲೂ ನಿನ್ನ
ಮೌನದ ಅರ್ಥ ಹುಡುಕಲು ಹೊರಟೆ.
ಆದರೆ,
ಕಲಿತಿದ್ದು ಮಾತ್ರ, ಭಾವನೆಯು ಬಿತ್ತರಿಸಿದ
ಜೀವನ ಪಾಠ.
ಮರೆಯಾಗಿಸಿರುವೆಯಾ..ಮನದ ದರ್ಪಣ?

-


22 JUN 2024 AT 13:03

ನನ್ನ ಸಿಹಿ, ಕಹಿ, ಕಹಾನಿಯ ಕವಿತೆಗಳು,
ಖಾಸಗಿಯಾದರೂ, ಸಾರ್ವಜನಿಕವಾಗಿಬಿಟ್ಟಿವೆ.
ಜನಜನಿತವಾದರೇ...?
ಭಯ ಕಾಡುತ್ತಿದ್ದರೂ,
ನನ್ನೊಳಗೊಳಗೇ, ಘಮಘಮಿಸುವ
ಖುಷಿಯ ಪನ್ನೀರು ಹನಿಸುತ್ತಿವೆ.

-


21 JUN 2024 AT 18:18

ಕಣ್ಣಿಗಿಂತ ಪಾಪಿ ಬೇರಾರಿಲ್ಲ ಅಂದೇ..?
ಸತ್ಯ.
ನೋಡಿ, ಮೆಚ್ಚಿಸಿ, ಸ್ಪಂದಿಸಿ,
ಮೆತ್ತಗಾಗಿಸಿ,
ನಿಭಾಯಿಸಲಾರದೆ..,ಮತ್ತದೇ ಅಳುತಿದೆ.

-


20 JUN 2024 AT 11:08

ಬಿಸಿಬಂಡೆಯ ಮೇಲೆ ಕೂತ ಕಪ್ಪೆಯಂತೆ.
ನಗುತ ಹಾರಿದರೆ, ಉಳಿವು.
ಅಳುತ ಕೂತರೆ, ಅಳಿವು.
ಜಾರಿದರೆ ಜಲಪಾತ.
ಸೊಗಸು, ದುಃಖದ ಕಂತು.,
ಗೊಣಗುವುದೆ ಪರಿಪಾಠ.
ಆತ್ಮಾವಲೋಕನ ಅಲ್ಲೋಲ, ಕಲ್ಲೋಲ.

-


19 JUN 2024 AT 10:52

ಬದುಕಿನಂಚಿನವರೆಗೆ ಬರುವೆ.
ಬಯಸಿದೆದೆ ಬರಡಾಗದಂತೆ,
ನೋಡಿಕೊಳ್ಳುವೆಯಾ?

-


18 JUN 2024 AT 8:16

ಬಿಡುವಾದಾಗಲೆಲ್ಲ ಇತ್ತ
ಬರುವಿಯೆಂದು ಗೊತ್ತು.
ಬರಿದೇ ಬರೆದೆ. ಸಹಜ ಉಸಿರಿನ ಹಾಗೆ.
ಕಣ್ಣೊಳಗೆ ತೇಲಿದರೂ...
ಇದೊಂಥರ ಪುಟ್ಟ ಹೃದಯದ
ಅಗೋಚರ ತಾಣ.

-


17 JUN 2024 AT 16:51

ಪ್ರಸಾರವಾಗದ ಮಾತ್ರಕ್ಕೆ,
ತಿರಸ್ಕರಿಸಲಾಗದು.
ಒಲವಿಗೆ ಹೆಗಲು ಕೊಡುವ ಗೀತೆಗಳೆಲ್ಲ..
ಚಿತ್ರಗೀತೆಗಳಾಗದಿದ್ದರೂ..
ಮನದ ಭಾವಗೀತೆಗಳಾಗಿವೆ.

-


13 FEB 2024 AT 17:30

ಮನದ ಮಾತು ಊಹಿಸಿ, ಹೇಳೆಂದರೆ ಹೇಗೇ?
ಅತಿಯಾಸೆಯೇನಿಲ್ಲ.
ನನ್ನ ಕಣ್ಣನೊಮ್ಮೆ, ನೋಡಿ, ಓದು ಸಾಕು.
ನಿನ್ನ ಸ್ವಗತಗಳ ದೀಪೋತ್ಸವ
ಸಾಲಾಗಿವೆ.

-


Fetching Gayathri⚘ Quotes