ಭಾಗ್ಯಶ್ರೀ ವೀರೇಶ   (✍🏼ಭಾಗ್ಯಶ್ರೀ ಹಿರೇಮಠ್)
1.9k Followers · 8 Following

🎂🎂20/August
ಬರವಣಿಗೆ ನನ್ನ ಹವ್ಯಾಸ.
ವಯಕ್ತಿಕ ಪ್ರಶ್ನೆಗಳಿಗೆ ಇಲ್ಲ ಅವಕಾಶ.
Joined 27 November 2020


🎂🎂20/August
ಬರವಣಿಗೆ ನನ್ನ ಹವ್ಯಾಸ.
ವಯಕ್ತಿಕ ಪ್ರಶ್ನೆಗಳಿಗೆ ಇಲ್ಲ ಅವಕಾಶ.
Joined 27 November 2020

ಬೇವು ಬೆಲ್ಲವ ಮಿಶ್ರ ಮಾಡಿ ತಿನ್ನುವ ದಿನ,
ಬಾಳಲ್ಲಿ ಸಿಹಿ-ಕಹಿ ಎರಡನ್ನು ಸಮವಾಗಿ
ಸ್ವೀಕರಿಸಬೇಕು ಎಂದು ಸಾರುವ ಕ್ಷಣ,
ಸೂರ್ಯನ ಕಿರಣದಿಂದ ಬದುಕಲ್ಲಿ ಮೂಡಲಿ ಹೊಂಗಿರಣ,
ಉಲ್ಲಾಸ, ಉತ್ಸಾಹದಿಂದ ಕೂಡಿರಲಿ ತನು-ಮನ,
ಸಂಭ್ರಮ, ಸಡಗರದಿಂದ ಕಟ್ಟೋಣ
ಯುಗಾದಿ ಹಬ್ಬಕ್ಕೆ ಹೂ ತಳಿರು ತೋರಣ,
ಸ್ವಾಗತಿಸೋಣ ನೂತನ ಸಂವತ್ಸರವನ್ನ,
ಸಂತಸದಿ ಆಚರಿಸೋಣ ವರ್ಷದ ಮೊದಲ ಹಬ್ಬವನ್ನ,
ಕಹಿ ನೆನಪು ಮರೆಯಾಗಿ ಸಿಹಿ ನೆನಪು
ಶಾಶ್ವತವಾಗಿ ಉಳಿಯಲಿ ಪ್ರತಿಕ್ಷಣ,
ಎಲ್ಲರನ್ನು ಪ್ರೀತಿ, ಸ್ನೇಹ ಭಾವದಿಂದ ಕಾಣೋಣ.

ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.

-



ಅಕ್ಷರದ ಜ್ಞಾನ ವಿವೇಕವನ್ನು ಕಲಿಸುತ್ತದೆ,
ಕತ್ತಲೆಯ ಬಾಳಿಗೆ ಬೆಳಕನ್ನು ನೀಡುತ್ತದೆ,
ಹಣ, ಸಂಪತ್ತು, ಕೆಲವೊಮ್ಮೆ ಅಹಂ ಭಾವ ಬೆಳೆಸುತ್ತದೆ,
ಆದರೆ ವಿದ್ಯೆಯು ಲೋಕಜ್ಞಾನದ ಜೊತೆಗೆ
ಉತ್ತಮ ನಾಗರೀಕನನ್ನಾಗಿಸುತ್ತದೆ.

-



ಮಗಳೇ ನೀನು ಹುಟ್ಟಿದ ಕ್ಷಣ,
ನಮ್ಮ ಮನೆಯಾಯಿತು ಸಂತೋಷ
ಸಂಭ್ರಮ, ಸಡಗರದ, ತಾಣ,
ದೇವತೆಯು ಧರೆಗಿಳಿದ ಈ ಸುಧೀನ,
ಜೀವನವಾಯ್ತು ಬೃಂದಾವನ,
ನಿನ್ನ ತುಂಟು ಮಾತುಗಳಿಂದ
ಉಲ್ಲಾಸವೆನಿಸುವುದು ನಮ್ಮೆಲ್ಲರ ಮನ,
ಅಪರೂಪದ ಅಪರಂಜಿಯಾಗಿ ಸೇರಿರುವೆ
ಈ ನನ್ನ ಮಡಿಲನ್ನ,
ನೀ ಆಧಾರವಾಗಿರುವೆ ಈ
ಸುಂದರ ಬದುಕಿಗೆ ಚಿನ್ನ
ನಿನ್ನ ಭವಿಷ್ಯ ಉಜ್ವಲವಾಗಿ ಬೆಳಗಲಿ
ಎಂದು ಆಶಿಸುವೆ ಪ್ರತಿಕ್ಷಣ,
ನೀ ನನ್ನ ಪ್ರಾಣ ಸಿಂಚನ.....

ಹುಟ್ಟು ಹಬ್ಬದ ಶುಭಾಶಯಗಳು ಚಿನ್ನು 🎂❤️🎈









-



ಹಸಿರಿನಿಂದ ಕೂಡಿದ ಸುಂದರವಾದ ಪ್ರಕೃತಿ
ನಯನಗಳಿಗೆ ಮೋನೋಹರವಾದ ಅದರ ಆಕೃತಿ,
ಹಸಿರಿನ ಮಧ್ಯ ಶುದ್ಧವೆನಿಸುವುದು ಮನಸಿನ ಸ್ಥಿತಿ,
ಇದೆಲ್ಲವೂ ಆ ಭಗವಂತನ ಕಲಾಕೃತಿ,

-



ಪದಗಳಿಗೆ ಜೀವ ತುಂಬಿದರು ತಮ್ಮ ಕವನಗಳ ಮೂಲಕ.,
ತನ್ನ ಕವನಗಳೆಲ್ಲವನ್ನು ವಿಶಿಷ್ಟ ಶೈಲಿಯಲ್ಲಿ ಬರೆದ ಮಾಂತ್ರಿಕ,
ಇವರ ಕವನಗಳು ಓದಲು ರೋಮಾಂಚಕ,
ಬದುಕಿನ ಕಾವ್ಯದೊಳಗೆ ಮುಳುಗಿದ್ದ ಭಾವುಕ,
ಕಷ್ಟದಲ್ಲಿ ನೊಂದು ಬೆಂದರೂ ಸ್ವಾಭಿಮಾನ ಬಿಡದ ಸಾಧಕ,
ಮುಳ್ಳಿನ ಹಾದಿಯಲ್ಲೂ ಸಾಧನೆಯ ಶಿಖರವನ್ನೇರಿದ ಮಹಾನಾಯಕ,
ನಿಮ್ಮೆಲ್ಲಾ ಕವನಗಳು ನಮ್ಮ ಬದುಕಿಗೆ ಸ್ಫೂರ್ತಿದಾಯಕ.
ಕಾವ್ಯವೇ ಜೀವವೆಂದು ಬಾಳಿದರು ಉಸಿರಿರುವತನಕ..

ಜನ್ಮ ದಿನದ ಶುಭಾಶಯಗಳು
ದ.ರಾ. ಬೇಂದ್ರೆಯವರಿಗೆ.💐💐🙏🙏

-



ಮುಗಿಯಿತು 2023 ರ ವರುಷ
ಕಳೆಯಲಿ ನೋವು, ಕಷ್ಟ,ಬೇಸರದ ದಿವಸ
ಮಾಸಿ ಹೋಗಲಿ ಮದ, ಮತ್ಸರದ, ದ್ವೇಷ
ತರಲಿ ಹೊಸ ವರುಷವು ನಮ್ಮೆಲ್ಲರ ಬಾಳಿಗೆ ಹರುಷ
ತುಂಬಿರಲಿ ಹೊಸ ಚೈತನ್ಯ ,ಉತ್ಸಾಹವು ಪ್ರತಿ ನಿಮಿಷ
ಹಸಿರಾಗಿಸಿಕೊಳ್ಳೋಣ ನಮ್ಮೆಲ್ಲರ ಆಸೆ ಕನಸ
ಸ್ವಾಗತಿಸೋಣ ಸಂಭ್ರಮದಿಂದ ಹೊಸವರುಷ



-



ಕನ್ನಡ ಸಾಹಿತ್ಯ ಲೋಕದ ಸಾಗರ
ಭುವನೇಶ್ವರಿಯ ಹೆಮ್ಮೆಯ ಸುಪುತ್ರ
ಕನ್ನಡ ಕನ್ನಡವೇ ಮೊದಲು ಎಂದು
ಸಾರಿದ ಕನ್ನಡದ ಧೀರ,
ಇವರ ಪ್ರತಿ ನುಡಿಯಲ್ಲೂ ತಿಳಿಸುತ್ತಿದೆ ಕನ್ನಡ
ಭಾಷೆ, ಬದುಕಿನ ಮಹತ್ವದ ಸಾರ,
ಕುವೆಂಪುರವರು ನಮ್ಮ ಕನ್ನಡ ನಾಡಿಗೆ
ದೊರೆತ ಅಪರೂಪದ ಮಾಣಿಕ್ಯ ಈ ವೀರ
ಕನ್ನಡದ ಸಾಹಿತ್ಯ ಸಂಪತ್ತಿನ ಶಬ್ಧ ಭಂಡಾರ
ರಾಷ್ಟ್ರ ಕವಿ ಎಂದೇ ಪ್ರಸಿದ್ಧಿ ಹೊಂದಿದ ಈ ಕುಪ್ಪಳ್ಳಿಯ ಕುವರ...

ಜನ್ಮ ದಿನದ ಶುಭಾಶಯಗಳು
ರಾಷ್ಟ್ರಕವಿ ಕುವೆಂಪು ರವರಿಗೆ 💐🙏🙏



-



ನೀ ನನಗೆ ನಾ ನಿನಗೆ ,
ಹಾಲು ಜೇನು ಒಂದಾದ ಹಾಗೆ ,
ಇರಬೇಕು ಹೃದಯ ಮಿಡಿತದ ಕೊನೆಯವರೆಗೆ, ಕಾಯುವೆ ಪ್ರತಿಕ್ಷಣವೂ ನಿನ್ನ
ಅಂತರಾಳದ ಒಲವಿನ ಮಾತಿಗೆ,
ನೀ ಕಾರಣ ನನ್ನ ಈ ನೆಮ್ಮದಿಯ ನಗುವಿಗೆ, ಬದುಕುವೆ ಹಾಯಾಗಿ ನೀ ಕೊಡುವ
ಪ್ರೀತಿಯಲ್ಲಿ ಪ್ರತಿ ಘಳಿಗೆ...

-



ನೀ ನನ್ನ ಬಾಳಿಗೆ ಸೂರ್ಯನ ಕಿರಣದಂತೆ.
ಎದೆಯ ಗರ್ಭದ ಗುಡಿಯೊಳಗಿಟ್ಟು
ಪೂಜಿಸುತಿರುವೆ ನಿನ್ನ ಪ್ರತಿನಿತ್ಯವೂ ತಪ್ಪದಂತೆ.
ಅನುರಾಗದ ಕಡಲೊಳಗೆ ಸಿಕ್ಕಿರುವೆ
ಅಪರೂಪದ ಸ್ವಾತಿಮುತ್ತಂತೆ.
ನಾ ಸಾಗುತಿರುವೆ ನೀ ನೀಡಿದ ಮಾರ್ಗದರ್ಶನದಂತೆ.
ನಿನ್ನಾಸೆಯ ಬಳ್ಳಿಗೆ ನೀರೆರೆದು ಬೆಳೆಸಿ ಜೋಪಾನವಾಗಿ ನೋಡಿಕೊಳ್ಳುವೆ ಬಾಡದಂತೆ.
ನೀ ನಗುತಿರಬೇಕು ಎಂದೆಂದಿಗೂ
ಆ ಹುಣ್ಣಿಮೆಯ ಶಶಿಯಂತೆ..

-



ಬದುಕು ದೇವರ ಇಚ್ಛೆಯಂತೆ, ಬದುಕಿನ ತಿರುವುಗಳು ಬರುವವು ಊಹೆಗೂ ನಿಲುಕದಂತೆ, ಸಾಗಬೇಕು ಪರಿಸ್ಥಿತಿಗೆ ತಕ್ಕಂತೆ,ಕೊನೆತನಕ ಯಾರಿಂದಲೂ ಏನನ್ನು ನಿರೀಕ್ಷಿಸದಂತೆ..
ಆಗಲೇ ಹೊರ ಹೊಮ್ಮುವುದು ನಮ್ಮೊಳಗಿನ ಸಾಮರ್ಥ್ಯದ ಕಂತೆ..

-


Fetching ಭಾಗ್ಯಶ್ರೀ ವೀರೇಶ Quotes