ಕುಂತಿಯ ಆಟವೋ...!
ಕೃಷ್ಣನ ನಾಟಕವೋ...!
ವಿಧಿಯ ಪಾಠವೋ...!
ರಣರಂಗದಲ್ಲಿ ಎದೆಸಿಳಿದ್ದು
ನನ್ನ ರಾಧೆಯನ ಉಸಿರನ್ನು
ದುರ್ಯೋಧನನ ಸ್ನೇಹವೋ
ಪರಸುರಾಮನ ಶಾಪವೋ
ಅರ್ಜುನನ ಶಕ್ತಿಯ ಬಲವೋ
ಯುದ್ಧ ಭೂಮಿಯಲ್ಲಿ ಸತ್ತತ್ತು
ನನ್ನ ಅಂತರಂಗದ ಕರ್ಣ...!
-
ಧಾರವಾಡ
ಕನ್ನಡಕ್ಕಾಗಿ ಕೈ ಎತ್ತು.....
3/6/🎂
ಭಾರತದ ವಾಸ್ತುಶಿಲ್ಪದ ತೊಟ್ಟಿಲು ನಾಡಿನ,
(ಬಾಗಲಕೋಟೆ ಜಿಲ... read more
ಒಲವ ಗೀತೆ ಹಾಡುತ್ತಿದೆ ಹೃದಯ
ಕೇಳು ಗೆಳತಿ ಮನದ ಇಂಗಿತವನ್ನು
ನಿನ್ನ ಈ ಕಿರು ನಗುವೆ ನನಗೆ ಹಬ್ಬ
ಈ ಆಲಿಂಗನವೇ ನೈವೇದ್ಯ ನನಗೆ..!-
ವೈರಿಯ ಪಾಳೆಯದಲ್ಲಿದ್ದರೆ ರಣರಂಗದಲ್ಲಿ ಸೆಣಸಾಡಿ ನಿನ್ನ ಒಲವಿಗೆ ನನ್ನ ಪ್ರೇಮದ ಬಾಣವ ನಾಟಿಸುವೆನು
ಕುಲದ ಕುಂಡಲದಲ್ಲಿರುವೆ ಸೆಣೆಸಿದರು ಸೋಲೆ ನಂಗೆ
ಆದರು ಭಾವನೆಗಳ ಪರ್ವತ ಸದಾ ಹಸಿರೆ ಹಸಿರು....-
ಕಾಡಿನೊಳಗಿನ ಪ್ರೇಮವಿದು
ಕಡಲಿನಷ್ಟು ವಿಸ್ತಾರವಾದದ್ದು
ಸೂರ್ಯ ಕಿರಣ ಚುಂಬನಕ್ಕೆ
ಸ್ಪರ್ಶವು ತೀರದ ಒಡಲಾಗಿದೆ
ಮೇಘ ಪ್ರೇಮದ ಒಲವಾಗಿದೆ
ಪತ್ರಿಕೆ ನೀಡದ ಕವಿತೆಯಿದು
ಭಾವನೆಗಳು ಇಂಚರವಾಗಿ
ಮೆಚ್ಚಿ ಒಲವಿನ ಗೀತೆಯಾಗಿ
ಲೋಕಕ್ಕೆ ಕಾಣದಷ್ಟು ಮಾತು
ಹೃದಯದಲ್ಲಿ ಗೌಪ್ಯವಾಗಿದೆ,,,
-
ಗೆಳತಿ,,,
ಕೇಳುವ ಮುನ್ನ ನಾ ನಿನ್ನ ಒಲವಿಗೆ ಹೆಗಲಾಗುವೆನು,
ಹೇಳುವ ಮುನ್ನ ನಾ ನಿನಗೆ ಮಲ್ಲಿಗೆ ಮುಡಿಸುವೆನು,,-
ಪ್ರಕೃತಿಯ ಮಡಿಲಿಗೆ ಹೊಸ ಚಿಗುರು,,,,
ಮಾನವನ ಒಲವಿಗೆ ನವ ಹರುಷವು,,,,
ನವ ಯುಗದ ಸಂವತ್ಸರದ ವಸಂತಕ್ಕೆ
ಹಗೆಯು ಹೊಗೆಯಾಗಿ ಉರಿದು ಬಿಡಲಿ
ಸಂಬಂಧದ ಸಾಂಗತ್ಯದ ಕೊಂಡಿಯಾಗಿ
ಬೇವಿನ ಮರದ ತಂಪು ಬಿಸಲಿ ಬಾಳಿಗೆ
ಬೆಲ್ಲದ ಸಿಹಿಯ ಕಂಪು ಜೊತೆಯಾಗಲಿ
ಯುಗಾದಿ ಹಬ್ಬದ ಶುಭಾಶಯಗಳು🌿🍮-
ಸಿಟ್ಟು ಕೋಪ ಕ್ಷಣಿಕ
ಭಾವನೆಗಳು ಶಾಶ್ವತ..
ಒಂದು ಚಿಕ್ಕ ವಿಷಯಕ್ಕೆ ನಮ್ಮ ಭಾವನೆಗಳಿಗೆ ದಕ್ಕೆ ತಗೆದುಕೊಳ್ಳಬಾರದು
ಅದು ಸಂಬಂಧಕ್ಕೆ ಕಲ್ಲು ಹೊಡೆದಂತೆ...!-
ಕಿರು ಹೊತ್ತಿಗೆಯ ನಸುಕಿನ ನಗುವಿನವಳು
ಕೆಂದಾವರೆಯ ತಿಳಿಮುಗಿಲ ಮೊಗದವಳು
ಸಕ್ಕರೆಯ ತೊಟ್ಟಿಲ ಅಕ್ಕರೆಯ ಗುಣದವಳು
ಎನ್ನ ಕನಸಿನ ಚಿಲುಮೆಗಳಿಗೆ ಬಳ್ಳಿಯವಳು
ಮನದ ಭಾವನೆಗಳ ಔತಣಕ್ಕೆ ಗಣಿಯವಳು
ಜೀವನ ಗುರಿಗಳಿಗೆ ಗುರುವಾಗಿ ಬಂದವಳು
ಹೆಣ್ಣಾಗಿ ಬಂದವಳು ಮನಕ್ಕೆ ಹೊನ್ನಾದವಳು
ಜೊತೆಯಾಗಿ ಬಂದು ಜೀವನಕ್ಕೆ ಹಿತವಾದಳು
ಉಸಿರಾಗಿ ಬಂದವಳು ಹೃದಯಕ್ಕೆ ಹೆಸರಾದಳು
ಶಿಕಾ,,,
-
ಮನಸಿನ ವದನ
ಮನಸಿನ ಕಾರ್ಮೋಡದ ಕರಿನೆರಳ
ಉಟ್ಟ ಸೆಳೆತದಲ್ಲಿ ಸಂಘದ ಸಪ್ಪಳಕ್ಕೆ
ಒಲವ ಕೊಪ್ಪರಿಗೆಯಲ್ಲಿ ಸುಟ್ಟ ಕನಸ
ಕಂಗಳಲಿ ಚಂದಿರನ ಕುಹುಕಿನ ಅಂದ
ಬಿಪ್ಪಿರಿದು ಬಡಬಡಿಸುವ ಬೆಸಿಗೆಯಕ್ಕೆ
ಭವದ ಭಾವನೆಗಳು ಬತ್ತಿ ಬರಿದಾಗಿವೆ
ಪಣವ ತೊಟ್ಟು ಉಸಿರ ಮೆಟ್ಟಿ ನಿಂತು
ಬಿಕ್ಕಳಿಕೆಯ ನಂಟಿಗೆ ನಸು ನರಳುತ್ತಿವೆ
ಪರದೇಶಿ ಬಯಕೆಗಳಿಗೆ ಹಗಲಿರುಳು
ಕತ್ತಿ ಮಸೆಯುತಿದೆ ಸ್ವಪ್ನದ ಸರಸದಲ್ಲಿ
ಬಸಿರಾದ ಒಲವಿನೊಳಗೆ ಅಕ್ಷರ ಕುಸ್ತಿ
ಬೇಕು ಬೇಡಗಳಿಗೆ ದಿನನಿತ್ಯದ ಮಸ್ತಿ
ಹಂಬಲಿಸಿದೆ ಹಸುಳೆಯ ನಗುವಿಗೆ ಮನ
ತುಟಿ ಕಚ್ಚಿ ಹೇಳುತ್ತಿದೆ ಒಲವಿನ ಯಾಣ
ವಾಸ್ತವದ ಮನಸಿಗೆ ಮತ್ತದೇ ಸುಕನಸು
ಹಂಬಲದ ಮನವಿನ ಮುನಿಸು ಹೂವಾಗಿದೆ,,,,,!
ಶಿಕಾ-