#ಒಂದೆರಡುಸಾಲಿನಕತೆ
ದಿನ ಅಮ್ಮನ ಕೈಯಲ್ಲಿ ಹೇಳಿಸಿಕೊಂಡು ದೀಪ ಹಚ್ಚುತ್ತಿದ್ದವ ಇಂದು ಯಾರು ಹೇಳದೇ ದೀಪ ಹಚ್ಚಲು ನಿಂತಿದ್ದಾನೆ ಅಮ್ಮನ ಫೋಟೋದ ಎದುರು.
-
ಅಪ್ಪಟ ಕನ್ನಡತಿ
ತೇಜಸ್ವಿಯವರ ಅಭಿಮಾನಿ
#ಕಿಟ್ಟಿ_ಕಥೆ #sn_ಕಲ್ಪನೆಯ_ಹುಡುಗನಿಗೆ
#s... read more
ಪಾಪ ಅದೇನು ತಪ್ಪು ಮಾಡಿತ್ತು. ಇಂದಿನ ಪರಿಸ್ಥಿತಿ ಅಲ್ವಾ ಅದನ್ನು ಕಹಿಯಾಗಿಸಿದ್ದು. ಈ ಪರಿಸ್ಥಿತಿಗೆ ಕಾರಣ ಅವನಾ? ಇಲ್ಲ ತನ್ನ ಸಿಟ್ಟು ಸೆಡವು, ಅಹಂಕಾರಾನಾ? ಪ್ರಶ್ನೆ ತಲೆ ದೂರಿದಾಗಲೆಲ್ಲ ಬುದ್ಧಿ ನೀನು ಮಾಡಿದ್ದು ಸರಿ ಎಂದು ವಾದಿಸಿದರೆ, ಮನಸ್ಸು ನೀನು ಮಾಡದನ್ನೇ ಅವನು ಅನುಕರಿಸಿದಲ್ವಾ? ಎಂದು ತರ್ಕಕ್ಕೆ ದೂಡುತ್ತದೆ.
ಮೂವ್ ಆನ್. ಕೊನೆಯದಾಗಿ ಅವನಿಗೆ ಹೇಳಿ ಬಂದ ಮಾತು. ಅವನ ಸ್ಥಿತಿ ಗೊತ್ತಿಲ್ಲ. ಆದರೆ ನಾನು ಮೂವ್ ಆನ್ ಆಗಿದ್ದೀನಾ? ತನ್ನನ್ನೇ ಪ್ರಶ್ನಿಸಿಕೊಂಡಳು.
ಇಲ್ಲ ನೆನಪುಗಳ ಕಟ್ಟೆಯಲ್ಲಿ ಬಂಧಿಯಾಗಿ ನಿಂತಲ್ಲೇ ನಿಂತಿರುವ ನೀರಾಗಬಾರದು ನಾನು. ಸ್ವಚ್ಛಂದವಾಗಿ ಹರಿಯೋ ನದಿಯಾಗಬೇಕು. ನಿರ್ಧರಿಸಿ ಮೇಲೆದ್ದಳು.
ಬೆಂಕಿ ನಿಧಾನಕ್ಕೆ ಆರಲು ತಯಾರಿ ನಡೆಸುತ್ತಿತ್ತು.-
ಅತ್ತಿತ್ತ ನೋಡೆನು ಅತ್ತು ಹೊರಳಾಡೆನು
ಹೇ ಗಬ್ಬು ಸುಬ್ಬ ಎಲ್ಲಿದ್ದೀಯ? ಈಗ ಬರ್ತೀಯೋ ಇಲ್ಲವೋ? ಸ್ವಲ್ಪ ಏನಾದರೂ ಹೇಳೋ ಹಾಗೆ ಇಲ್ಲ. ಮೂಗಿನ ತುದಿಯಲ್ಲೇ ಕೋಪ. ಓಕೆ ಸಾರಿ. ಮಧ್ಯಾಹ್ನ ನಾನು ಹಾಗೆ ರೇಗ ಬಾರದಿತ್ತು. ಬಟ್ ನೀನು ಮಾಡಿದ್ದು ಸರಿನಾ? ಆಫೀಸಿನಲ್ಲಿ ನೀನು ಹಾಗೆ ಮುತ್ತಿಡಬಹುದಾ? ಯಾರಾದರೂ ನೋಡಿದಿದ್ದರೇ? ಕಾಲೇಜ್ ಅಲ್ಲ ಇದು. ಅಲ್ಲಿ ಹೀಗೆಲ್ಲ ಮಾಡಿದಾಗ ಹೋಗ್ಲಿ ಪಾಪ ಅಂತ ಸುಮ್ಮನಾಗುತ್ತಿದ್ದೇ. ಆದರೆ ಈಗ ನಾನು ಜಾಬ್ ಮಾಡ್ತಾ ಇದ್ದೀನಿ ಕಣೋ. ಬೈ ಚಾನ್ಸ್ ಬಾಸ್ ಏನಾದರೂ ನೋಡಿದಿದ್ದರೇ ನನ್ನ ಕತೆ ಏನಾಗಿರೋದು? ಅದಕ್ಕೆ ರೇಗಿದೆ. ಈಗ ಸಾರಿ ಕೇಳ್ತಾಯಿದ್ದೀನಿ ಅಲ್ವಾ? ಕೊಬ್ಬು ತೋರಿಸದೆ ಸುಮ್ಮನೆ ಬಾ. ಕನಸಿನ ಊರು ಸುತ್ತಬೇಕು ಕಣೋ ನಾನು. ಪ್ಲೀಸ್ ಬೇಗ ಬಾರೋ ಓ ನಿದ್ದೆರಾಯ.-
ನೆನಪುಗಳು ಯಾವತ್ತೂ ಹಿತವೇ.
ಅದರಿಂದ ನೋವಾಗುತ್ತಾ ಖುಷಿಯಾಗುತ್ತಾ ಅನ್ನುವುದು ನಮ್ಮ ಈಗಿನ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ.-
ಕೈಯಲ್ಲಿ ಹಿಡಿದ ಮಂಜುಗಡ್ಡೆಯಂತೆ
ಕರಗಿ ನೀರಾಗುವವರೆಗೂ ಕೈಯನ್ನು ಮರಗಟ್ಟಿಸಿರುತ್ತೆ-
ಬಿಸಿಲ ಬೇಗೆಗೆ
ಇಳೆಯು ಬಳಲಿದ್ದಾಳೆ
ಬಾಯಾರಿ
ಅವಳ ದಾಹವ ತಣಿಸಲು
ಖುದ್ದು ವರುಣನೇ
ಹಾಕುತ್ತಿದ್ದಾನೆ
ಹಾಜರಿ-
ಬೆಳ್ಳಿತೆರೆಯ ಮೇಲೆ ರಾಣಿಯಾಗಿ ಮೆರೆದವಳು ಇಂದು ತುತ್ತು ಅನ್ನಕ್ಕಾಗಿ ಪರದಾಡುತ್ತಿರುವಳು
-