ರಶ್ಮಿ ಹೆಗಡೆ   (ರಶ್ಮಿ ಹೆಗಡೆ)
127 Followers · 12 Following

Joined 10 August 2019


Joined 10 August 2019

ಬೇಕಿದ್ದನ್ನು ಬಿಡುವುದು ಕೆಲವೊಮ್ಮೆ ಆಯ್ಕೆ, ಹಲವೊಮ್ಮೆ ಅನಿವಾರ್ಯ...!!

ಬಯಸಿ ತೊರೆದನೇನು ರಾಮ, ಜಾನಕಿಯನ್ನು..??


-



ಯಾರದೋ ಹೆಸರ ಗೀಚದಿರಿ
ಕಿನಾರೆಯ ಮರಳೆದೆಯ ಮೇಲೆ....;

ಗುಮಾನಿಯಿದೆ,
ಗಳಿಗೆಗೊಮ್ಮೆ ಅದನಳಿಸುವ
ಕಡಲ್ದೆರೆಗೆ, ಅವನೆದೆಗೊರಗುವ
ಒಲವಾಗಿಹುದೆಂದು...!!

-



ಪರರೊಳಗಿನ 'ರಾಮ' ಕಾಣುವಂತಾಗಲಿ..
ನಮ್ಮೊಳಗಿನ 'ರಾವಣ'ನ ಅಳಿವಾಗಲಿ...!!


-


11 MAR 2021 AT 12:04

ಹೇಗೆ ತಣ್ಣಗಾದಾನು ಶಿವ,
ಹಾಲಿನ ಅಭಿಷೇಕದಿ,
ಬೀದಿಯ ಹಸುಗೂಸು
ಹಸಿವಿನಿಂದ ಮೊರೆಯಿಡುವಾಗ...!!


-


12 FEB 2021 AT 10:34

ಗೋಡೆಗಳಿಗೆ ಮಾತು
ಬರುವಂತಿದ್ದರೆ,
ಮನೆಗಳು ಇಷ್ಟು 'ಗಟ್ಟಿ'ಯಾಗಿ
ನಿಲ್ಲುತ್ತಿರಲಿಲ್ಲ....!!!

-


27 DEC 2020 AT 21:21

ಯಾರ ಗುಂಗಲ್ಲಿಹವೋ ಅವಳ ಬೆರಳು,
ಅಕ್ಕಿಯನ್ನೆಸೆದವೆ ಕಸದ ಬದಲು...!!!?

-


23 AUG 2020 AT 10:01

ಕಾಲ್ಗೆಜ್ಜೆಯಾದರೂ ಸಾಕೆನಗೆ,
ಹೆಜ್ಜೆಯಿಡಲು ನಿನ್ನೊಂದಿಗೆ....!!

-



ಅರಸದಿರು ಅವನ
'ಅವನಿ'ಯೊಳಗೆ
ಅವನಿರುವ ನಿನ್ನೊಳಗೆ.....!!

-



ಯಾರ ಹಂಗಿಲ್ಲದೆ ಬೆಳೆದು
ತನ್ನಷ್ಟಕ್ಕೆಲ್ಲೆಡೆ ಹರಡಿ,
ಹಾದು ಹೋಗುವವರು ಹಿಂತಿರುಗಿ
ಹುಡುಕಾಡುವಂತೆ ಮಾಡುವ
ಕಾಡುಮಲ್ಲಿಗೆಯ ಕಂಪು
ನನ್ನ ಕನ್ನಡ...!!

-



ಎದೆಯೊಳಗಿನ ತೊಳಲಾಟಗಳು,
'ಗಾಂಧಾರಿಗರ್ಭ'ದಂತೆ...!!

ಹೆರದಿದ್ದರೆ ಸಂಕಟ
ಹೊರಬಂದರೆ ಸಂಘರ್ಷ...!!

-


Fetching ರಶ್ಮಿ ಹೆಗಡೆ Quotes