ಭಾಗ್ಯದ ಒಡಲೋ..?
ಭಾವನೆಯ ಕಡಲೋ..?
ತೊರೆದ ಸಂಭಂದವೋ..?
ಬಯಸುವ ಪ್ರೀತಿಯೋ..?
ಮನಸಿನ ನರ್ತನವೋ..?
ಸಮಾಜದ ಪರಿವರ್ತನೆಯೋ..?
ನಲಿವ ಯೌವನವೋ..?
ಭವಿಷ್ಯದ ಬಂಧನವೋ..?-
ಪ್ರಕೃತಿಯಲ್ಲಿ ಇರುವುದು ಎರಡೇ ಆಯ್ಕೆಗಳು
ಒಂದು ಎಲ್ಲವನ್ನೂ ಕೊಟ್ಟು ಹೋಗುವುದು,
ಮತ್ತೊಂದು ಎಲ್ಲವನ್ನೂ ಬಿಟ್ಟು ಹೋಗುವುದು.
ಜೊತೆಯಲ್ಲಿ ತೆಗೆದುಕೊಂಡು ಹೋಗುವ ಅವಕಾಶ ನೀಡಿಲ್ಲ.-
ಸರಿಯಾಗಿ ಯೋಚಿಸು
ಇಲ್ಲವಾದಲ್ಲಿ ನಿನ್ನನ್ನು
ಸಂತೆಯಲ್ಲಿ ಚೌಕಾಸಿಗೆ
ಆಯ್ಕೆ ಮಾಡುವಂತೆ
ಆಯ್ಕೆ ಮಾಡಿಯಾರು.-
ನನ್ನ ಬಳಿ ಎಲ್ಲವನ್ನು ಪಡೆಯುವ ಅವಕಾಶವಿದೆ.
ಆ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೋ ಅಥವಾ ದುರುಪಯೋಗ ಪಡಿಸಿಕೊಳ್ಳಬೇಕೋ ಎಂಬ ಆಯ್ಕೆಯೂ ನನ್ನಲ್ಲಿಯೇ ಇದೆ.-
ಚಿಟ್ಟು ಹಿಡಿಸುವ ತುಂಟಾಟವಾಗಿರಲು..
ಆರ ದೂರುವೆ ನಾನು? ಆರ ಬಳಿ?
ತಾಳ ಸರಿ ಹಾಕುತಿರಲು..ಅದು ನನ್ನ ಕರ್ಮ.
ವ್ಯಾಮೋಹ ಸುಡು ಬೆಂಕಿ.
ಸುಡದೆ ಬಿಡದದು ಸುಖದ ಚಳಿ.-
ವಿಧಿಯ ನಿರ್ಧಾರಗಳಲ್ಲಿ
ನಮ್ಮ ಕೈವಾಡ ಇರ್ಬೇಕು
ಯಾಕಂದ್ರೆ ಕೊನೆಯಲ್ಲಿ
ವಿಧಿಯ ನಿರ್ಣಯದಂತೆ
ಆಗುವುದೆಲ್ಲ..!!??
🙌🙌🙌🙌-
ಈಡೇರದ ಆಸೆಗಳು
ನೆರವೇರದ ಕನಸುಗಳು
ಗುರಿ ತಲುಪದ ಹೆಜ್ಜಿಗಳು
ಕೊನೆಯೇ ಕಾಣದ ಪ್ರಶ್ನೆಗಳು
ಕಾಡಿದೆ ಮನವ ಬರೀ ನೋವುಗಳು-
ಜೀವನದಲ್ಲಿ ಅತೀ ಹೆಚ್ಚು
ಆಯ್ಕೆಗಳಿರಬಾರದು,
ಇರುವ ಕೆಲವು ಆಯ್ಕೆಗಳಲ್ಲಿ
ಇದೊಂದು ಉತ್ತಮ
ಎಂದು ಆಯ್ದುಕೊಳ್ಳುವಂತಿರಬೇಕು...-
ಬಣ್ಣಗಳ
ಅರಸುತ್ತಿದ್ದವಳೆದುರು,
ಕಾಮನಬಿಲ್ಲು
ಟಿಸಿಲೊಡೆದಿತ್ತು.
ಸೋಲೊಪ್ಪಿ
ಕೂತವಳೆದುರು
ಆಯ್ಕೆಗಳ
ಊಟೆಯೊಡೆದಿತ್ತು !-