ಬದುಕಿಗೆ ಅದೆಷ್ಟು ವೈಚಿತ್ರಗಳ ಕೋನಗಳು??
ಒಂದು ಬೆಲ್ಲದ ಅಚ್ಚಾದರೆ,
ಮತ್ತೊಂದು ಬೇವಿನ ಎಸಳು...
ಮನಸ್ಸು ಹೃದಯಗಳು ಅವುಗಳ ರುಚಿಯ ವೈಪರೀತ್ಯಕ್ಕೆ ಪರದಾಡಬೇಕು...-
ಬರೆಯಲೇಬೇಕೆಂಬ ಹಠವೇನಿಲ್ಲ... ಹಂಬಲವಿದೆ... ನೋವಲ್ಲಿ ಖುಷಿಯಲಿ ಭಾಗಿಯಾಗಲು ಅರ... read more
ಉರಿವ ಕಟ್ಟಿಗೆಯ ಉರಿಗೆ ತಾಗಿ ಸುಟ್ಟ ರೊಟ್ಟಿ
ಹರಿದ ಬಟ್ಟೆಯ ತಂದೆ ತಾಯಿಯ ಆಹಾರವಾದರೆ,
ಓದೋಕೆಂದು ಒಳ್ಳೆ ಬಟ್ಟೆ ತೊಟ್ಟ ಮಗ ಸ್ನೇಹಿತರೊಡನೆ
ಓವೆನ್ ನಲ್ಲಿ ಬೆಂದ ಪಿಜ್ಜಾ ಸವಿಯುತ್ತಿದ್ದನಂತೆ...!!!-
ಯೋಚನೆಗಳು ತೂರಿಬಿಟ್ಟ ಕಾಗದದ ಚೂರಿನ ಹಾಗೆ
ಅಡ್ಡಾಡಿಕೊಂಡು ಕೊನೆಗೆ ಯಾವುದೋ ಸಂದಿಗೊಂದಿಯಲ್ಲಿ ಸಿಕ್ಕ ಹಾಗೆ...-
ಸಿಹಿ ನೆನಪುಗಳು ಕೊಂಡು ತಂದ ಬೆಲೆಬಾಳುವ ಸರಕುಗಳಂತೆ,
ಅದೇ ಕಹಿ ನೆನಪುಗಳು ಉಪಯೋಗವಿಲ್ಲದಿದ್ದರೂ ಎಸೆಯಲು ಮನಸಾಗದೆ ಅಟ್ಟದ ಪೆಟ್ಟಿಗೆಯಲ್ಲಿ ಕೂಡಿಟ್ಟ ವಸ್ತುವಿನಂತೆ...
ಜೀವನದ ಪುಟಗಳನ್ನು ತಿರುವಿದಾಗೊಮ್ಮೆ,
ಭಾವನೆಗಳ ಮಿಶ್ರಣ ಹುಚ್ಚೆದ್ದು ಕುಣಿದು ಕುಪ್ಪಳಿಸಿ, ಖಾಲಿ ಪುಟದಲ್ಲಿ ಬೇಕೆಂದಲ್ಲಿ ಗೀಚಿದ ಕವಿತೆಯಂತೆ,
ಓದಿದರೂ ಅರ್ಥವಾಗದು,
ಓದದಿದ್ದರೆ ಮನಸು ಕೇಳದು...
-
ಬಾಕಿ ಉಳಿದಿದ್ದ ಕನಸುಗಳ
ಲೆಕ್ಕವಿಡದಷ್ಟು ಅನಕ್ಷರಸ್ಥೆ ನಾನು...
ಸಾಕಿ ಸಲಹಿದ ತಂದೆತಾಯಿಗಾಗಿ
ಕನಸ ಕೊಂದು ಬಂಧಿಯಾದವಳು ನಾನು...-
ಬಯಕೆ ಬಿರುಗಾಳಿಯಾದರೆ,
ಪ್ರೇಮ ಎದೆಯೊಳಗೆ ಬೆಚ್ಚಗಿನ ಭಾವ ಹುಟ್ಟಿಸುವ ತಂಗಾಳಿ....
ಅದಕ್ಕೆ ಬಯಕೆಯ ಆಯಸ್ಸು ಚಿಕ್ಕದು,
ಪ್ರೇಮದ ಆಯಸ್ಸು ಯುಗಯುಗಗಳಷ್ಟು ಹಿರಿಯದು....-
ರಾತ್ರಿ ನಗುತ್ತಲೇ ಮಲಗಿದ್ದವನ
ಪ್ರಾಣಪಕ್ಷಿ ಹಾರಿಹೋಗಿತ್ತಂತೆ,
ಬೆಳಗೆದ್ದು ನೋಡಿದವರು
ಅಳುತ್ತಲಿದ್ದರಂತೆ...
ಅಲ್ಪಾವಧಿಯ ಬದುಕಿನಲಿ
ಇಷ್ಟೇಕೆ ಕೋಪವಂತೆ?
ಆಯಸ್ಸಿನ ಗುಟ್ಟ ಇದುವರೆಗೂ
ಯಾರಾದರೂ ಅರಿತವರುಂಟೇ??
ಇನ್ನಾದರೂ ಬಿಡಬಾರದೇ
ಮನಸ್ತಾಪಗಳೆಂಬ ಅಂತೆ ಕಂತೆ,
ಇರಬಾರದೇ ನೋವೆಲ್ಲಾ ಮರೆತು
ನಗುವ ಪಸರಿಸುವಂತೆ...-
ಹುರುಪಿನಿಂದ ಕೂಡಿರುವ ನಗುವಿನ ಹಿಂದೆ
ಹರಿತಕ್ಕೆ ಸಿಕ್ಕು ನಲುಗಿರುವ ಮನವಿದೆ...
ನಿಶ್ಚಲವಾಗಿ ನಿದ್ರಿಸುತಿರುವ ಮೊಗದ ಹಿಂದೆ
ಚಿವುಟಿ ಎಬ್ಬಿಸುವ ಸಾವಿರ ನೋವುಗಳಿವೆ...-
ಮನವಾಗಿದೆ ಭಾರ
ಆಗುತಿಲ್ಲ ಅದು ಹಗುರ
ಅರೆಗಳಿಗೆ ಯೋಚಿಸು ಯಾಕಿಷ್ಟು ಚಿಂತೆ
ನೀ ಸಾಗುತಿರುವಾಗ ಸರಿ ಮಾರ್ಗದ ಜೊತೆ??
ಕವಿದಿದೆ ಅಪವಾದ
ಮಾಡುತಿಹರು ಅವಮಾನ
ಪಡದಿರು ಬೇಸರ,
ಮಾಡದಿರು ಅವಸರ
ಕಾಲ ಕೊಡುವುದು ತಕ್ಕ ಉತ್ತರ...
ಮರುಗದಿರು ಮನವೇ
ಸುಳ್ಳೆಂಬ ಬಂಧನದಲಿ ಬಂಧಿಸಲ್ಪಟ್ಟ
ಸಂಬಂಧಗಳ ಮುಂದುವರೆಸುವುದೇತಕೆ?
ನಂಬಿಸುವ ವ್ಯರ್ಥ ಪ್ರಯತ್ನ ಬಿಟ್ಟುಬಿಡು
ಎಲ್ಲವನೂ ಭಗವಂತನ ಪಾದಕಾಕಿ ಕೈತೊಳೆದುಬಿಡು...-
ನೋವೆಂಬ ಖಜಾನೆ ಖಾಲಿಯಾಗುತ್ತಲೇ ಇಲ್ಲ
ಅದಾದರೂ ಹೇಗೆ ಖಾಲಿಯಾಗುವುದು
ಮತ್ತೆ ಮತ್ತೆ ತುಂಬುತಲಿದ್ದರೆ,
ಹೊರುವ ಶಕ್ತಿಯಿದೆ ಮನಸಿಗೆ ಹೊರುತಿಹುದು
ಮತ್ತೆಲ್ಲಿ ಕೆಲಸ ಆ ನೋವ ಖಜಾನೆಗೆ
ಉಸಿರೇ ನಿಂತರೆ...-